ಅತಿಯಾದ ಆತ್ಮವಿಶ್ವಾಸವೇ ನಮ್ಮನ್ನು ಉಪಚುನಾವಣೆಯಲ್ಲಿ ಸೋಲಿಸಿದ್ದು-ಯೋಗಿ ಆದಿತ್ಯನಾಥ್

   

Last Updated : Mar 17, 2018, 06:17 PM IST
ಅತಿಯಾದ ಆತ್ಮವಿಶ್ವಾಸವೇ ನಮ್ಮನ್ನು ಉಪಚುನಾವಣೆಯಲ್ಲಿ ಸೋಲಿಸಿದ್ದು-ಯೋಗಿ ಆದಿತ್ಯನಾಥ್ title=

ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಹೊಂದಿದ ಅತಿಯಾದ ಆತ್ಮವಿಶ್ವಾಸವೇ ಪಕ್ಷ ಸೋಲಲು ಕಾರಣ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್ ಅಭಿಪ್ರಾಯಪಟ್ಟರು

 ಝೀ ನ್ಯೂಸ್ ನ ಕಾಂಕ್ಲೇವ್ ನಲ್ಲಿ ವಿಡಿಯೋ ಸಂವಾದದ ಮೂಲಕ  ಉತ್ತರಪ್ರದೇಶ ಮತ್ತು ಬಿಹಾರ ಲೋಕಸಭಾ ಚುನಾವಣೆಯ ಫಲಿತಾಂಶದ ಕುರಿತಾಗಿ ಮಾತನಾಡಿದ ಆದಿತ್ಯನಾಥ್ " ನಮ್ಮಲ್ಲಿ ಇದ್ದ ಅತಿಯಾದ ಗೆಲ್ಲುವ ಆತ್ಮವಿಶ್ವಾಸವೇ ಚುನಾವಣೆಯಲ್ಲಿ ಸೋಲಲು ಕಾರಣ"ವೆಂದು ತಿಳಿಸಿದರು."ಅಲ್ಲದೆ ಈ ಉಪಚುನಾವಣೆಯಲ್ಲಿ ಅಧಿಕ ಜನರು ಮತಹಾಕದೆ ಇರುವುದು ಕೂಡ ಒಂದು ಕಾರಣ" ಎಂದರು.

ಇನ್ನೂ ಮುಂದುವರೆದು ಮಾತನಾಡಿದ ಅವರು ಉಪಚುನಾವಣೆಗಳು ಸ್ಥಳೀಯ ವಿಷಯಗಳ ಆಧಾರದ ಮೇಲೆ ನಡೆಯುತ್ತವೆ. 2019 ರ ಚುನಾವಣೆಗೆ ಇದು ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ ಎಂದು ಅವರು ತಿಳಿಸಿದರು.

Trending News