/kannada/photo-gallery/shukra-gochar-laxmi-narayana-yoga-bless-this-zodiac-signs-with-huge-wealth-and-success-221344 Laxmi Narayana Yoga: ಈ ರಾಶಿಯವರಿಗೆ ಭಾಗ್ಯೋದಯ, ಸಿಗಲಿದೆ ಅಪಾರ ಕೀರ್ತಿ ಯಶಸ್ಸು Laxmi Narayana Yoga: ಈ ರಾಶಿಯವರಿಗೆ ಭಾಗ್ಯೋದಯ, ಸಿಗಲಿದೆ ಅಪಾರ ಕೀರ್ತಿ ಯಶಸ್ಸು 221344

ನವದೆಹಲಿ: ಬರುವ ಮೇ 4ರಿಂದ ಕೇಂದ್ರ ಸರ್ಕಾರ ಹಲವು ಜಿಲ್ಲೆಗಳಿಗೆ ಲಾಕ್ ಡೌನ್ ನಿಂದ ಭಾರಿ ಪ್ರಮಾಣದ ಮುಕ್ತಿ ನೀಡಲಿದೆ ಎನ್ನಲಾಗಿದೆ. ಸರ್ಕಾರ ಆರೆಂಜ್ ಹಾಗೂ ಗ್ರೀನ್ ಝೋನ್ ಗಳಲ್ಲಿ ಹಲವು ರೀತಿಯ ಆರ್ಥಿಕ ಚಟುವಟಿಕೆಗಳಿಗೆ ಅನುಮತಿ ನೀಡಲು ಬಯಸಿದೆ ಎನ್ನಲಾಗುತ್ತಿದೆ. ಈ ಕುರಿತು ಸರ್ಕಾರ ಬುಧವಾರ ಸಂಕೇತ ನೀಡಿದ್ದು, ಕೇಂದ್ರ ಗೃಹ ಸಚಿವಾಲಯದ ಹೊಸ ಮಾರ್ಗಸೂಚಿಗಳು ಮೇ 4 ರಿಂದ ಅನುಷ್ಠಾನಕ್ಕೆ ಬರಲಿವೆ ಎಂದು ಹೇಳಿದೆ.

ಲಾಕ್ ಡೌನ್ ನಿಂದ ಮುಕ್ತಿಯ ಸಂಪೂರ್ಣ ವಿವರ ಶೀಘ್ರವೇ ಜಾರಿಗೊಳಿಸಲಾಗುವುದು ಎಂದು ಗೃಹ ಸಚಿವಾಲಯ ಹೇಳಿದೆ. ಕೊವಿಡ್-19ನ ಯಾವುದೇ ಪ್ರಕರಣಗಳು ವರದಿಯಾಗದ ಜಿಲ್ಲೆಗಳಿಗೆ ಹೆಚ್ಚಿನ ಸಡಲಿಕೆ ಸಿಗಲಿದೆ. ಇದಲ್ಲದೆ ಕಳೆದ 28 ದಿಂಗಳು ಈ ಕಾಯಿಲೆಯಿಂದ ಮುಕ್ತವಾಗಿರುವ ಜಿಲ್ಲೆಗಳಿಗೂ ಕೂಡ ಹೆಚ್ಚಿನ ವಿನಾಯ್ತಿ ಸಿಗುವ ಸಾಧ್ಯತೆ ಇದೆ.

ಆರೆಂಜ್ ಹಾಗೂ ಗ್ರೀನ್ ಝೋನ್ ಗಳೆಂದರೆ ಏನು?
ಕಳೆದ 14 ದಿನಗಳಲ್ಲಿ ಕೊರೊನಾ ವೈರಸ್ ನ ಯಾವುದೇ ಹೊಸ ಪ್ರಕರಣಗಳು ಬೆಳಕಿಗೆ ಬರದ ಪ್ರದೇಶಗಳಿಗೆ ಆರೆಂಜ್ ಝೋನ್ ಗಳೆಂದು ಕರೆಯಲಾಗುತ್ತದೆ. ಕಳೆದ 28 ದಿನಗಳ ಅವಧಿಯಲ್ಲಿ ಕೊರೊನಾ ವೈರಸ್ ಗೆ ಸಂಬಂಧಿಸಿದ ಯಾವುದೇ ಪ್ರಕರಣಗಳು ಬೆಳಕಿಗೆ ಬರದ ಪ್ರದೇಶಗಳನ್ನು ಗ್ರೀನ್ ಝೋನ್ ಗಳೆಂದು ಕರೆಯಲಾಗುತ್ತದೆ. ರೇಜ್ ಝೋನ್ ಗಳಲ್ಲಿ ಕೇವಲ ಕೆಲವೇ ಸೇವೆಗಳಿಗೆ ಅನುಮತಿ ಸಿಗುವ ಸಾಧ್ಯತೆ ಇದೆ. ಹಾಟ್ ಸ್ಪಾಟ್ ಗಳಿರುವ ಪ್ರದೇಶಗಳಿಗೆ ಯಾವುದೇ ರೀತಿಯ ರಿಯಾಯ್ತಿ ನೀಡಲಾಗುತ್ತಿಲ್ಲ.

ಆದರೆ, ಕೇಂದ್ರ ಆರೋಗ್ಯ ಸಚಿವ ಹರ್ಷ್ ವರ್ಧನ್ ಅವರು ಸೂಚಿಸಿರುವ ಸುಮಾರು 129 ಜಿಲ್ಲೆಗಳು ರೆಡ್ ಝೋನ್ ನಲ್ಲಿವೆ. ಅಷ್ಟೇ ಅಲ್ಲ ದೇಶದ ಬಹುತೇಕ ಆಥಿಕ ಚಟುವಟಿಕೆಗಳಿಗೆ ಈ ಜಿಲ್ಲೆಗಳು ಕೇಂದ್ರಗಳಾಗಿರುವುದು ದೊಡ್ಡ ಸಮಸ್ಯೆಯಾಗಿದೆ.  ಈ ಹಿನ್ನೆಲೆಯಲ್ಲಿ ಸರ್ಕಾರ ಈ ಪ್ರದೇಶಗಳ ಕುರಿತು ಸಂಪೂರ್ಣ ವರದಿ ಸಿದ್ಧಗೊಂಡ ಬಳಿಕ ಮಾತ್ರವೇ ನಿರ್ಣಯ ಕೈಗೊಳ್ಳಲಿದೆ ಎನ್ನಲಾಗಿದೆ.

ಮೂಲಗಳು ನೀಡಿರುವ ಮಾಹಿತ್ಗಳ ಪ್ರಕಾರ, ದೆಹಲಿ, ಮುಂಬೈ, ಅಹ್ಮದಾಬಾದ್ ಹಾಗೂ ಚೆನ್ನೈ ನಂತಹ ನಗರಗಳು ರೆಡ್ ಝೋನ್ ನಲ್ಲಿವೆ. ಈ ನಗರಗಳ ಬಹುತೇಕ ಪ್ರದೇಶಗಳು ಹಾಟ್ ಸ್ಪಾಟ್ ಗಳಾಗಿವೆ. ಸದ್ಯ ಕೆಲವೇ ಕೆಲವು ದಿನಸಿ ಅಂಗಡಿಗಳು ಮತ್ತು ಅತ್ಯಾವಶ್ಯಕ ಸೇವೆಗಳ ಪೂರೈಕೆಗೆ ಸರ್ಕಾರ ಅನುಮತಿ ನೀಡಿದ್ದು, ಇತರೆ ಆವಶ್ಯಕ ವಸ್ತುಗಳ ಸೇವೆಗಳಿಗೆ ಸರ್ಕಾರ ಮೇ 4ರಿಂದ ಅನುಮತಿ ನೀಡುವ ಸಾಧ್ಯತೆಯನ್ನು ವರ್ತಿಸಲಾಗುತ್ತಿದೆ.

Section: 
English Title: 
Orange-Green zones may get releaf from Lockdown, What does it mean
News Source: 
Home Title: 

ಮೇ 4 ರಿಂದ ಆರೆಂಜ್-ಗ್ರೀನ್ ಝೋನ್ ಗಳಿಗೆ Lockdownನಿಂದ ಮುಕ್ತಿ, ಏನಿದರ ಅರ್ಥ?

ಮೇ 4 ರಿಂದ ಆರೆಂಜ್-ಗ್ರೀನ್ ಝೋನ್ ಗಳಿಗೆ Lockdownನಿಂದ ಮುಕ್ತಿ, ಏನಿದರ ಅರ್ಥ?
Yes
Is Blog?: 
No
Tags: 
Facebook Instant Article: 
Yes
Mobile Title: 
ಮೇ 4 ರಿಂದ ಆರೆಂಜ್-ಗ್ರೀನ್ ಝೋನ್ ಗಳಿಗೆ Lockdownನಿಂದ ಮುಕ್ತಿ, ಏನಿದರ ಅರ್ಥ?
Publish Later: 
No
Publish At: 
Thursday, April 30, 2020 - 13:59
Created By: 
Nitin Tabib
Updated By: 
Nitin Tabib
Published By: 
Nitin Tabib