ಲೋಕಸಭೆಗೆ ಸ್ಪರ್ಧಿಸಲು ಸಿದ್ಧ,ಆದರೆ ಅದನ್ನು ಪಕ್ಷ ನಿರ್ಧರಿಸುತ್ತದೆ- ಕನ್ನಯ್ಯಕುಮಾರ್

ವಿದ್ಯಾರ್ಥಿ ನಾಯಕ ಕನ್ನಯ್ಯ ಕುಮಾರ್ ಭಾನುವಾರದಂದು ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ವಿಚಾರವಾಗಿ ಮಾತನಾಡುತ್ತಾ ಈ ವಿಚಾರವಾಗಿ ಪಕ್ಷ ಮತ್ತು ಮೈತ್ರಿಕೂಟ ನಿರ್ಧರಿಸಲಿದೆ ಎಂದು ತಿಳಿಸಿದರು.

Last Updated : Sep 3, 2018, 03:01 PM IST
ಲೋಕಸಭೆಗೆ ಸ್ಪರ್ಧಿಸಲು ಸಿದ್ಧ,ಆದರೆ ಅದನ್ನು ಪಕ್ಷ ನಿರ್ಧರಿಸುತ್ತದೆ- ಕನ್ನಯ್ಯಕುಮಾರ್ title=

ನವದೆಹಲಿ: ವಿದ್ಯಾರ್ಥಿ ನಾಯಕ ಕನ್ನಯ್ಯ ಕುಮಾರ್ ಭಾನುವಾರದಂದು ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ವಿಚಾರವಾಗಿ ಮಾತನಾಡುತ್ತಾ ಈ ವಿಚಾರವಾಗಿ ಪಕ್ಷ ಮತ್ತು ಮೈತ್ರಿಕೂಟ ನಿರ್ಧರಿಸಲಿದೆ ಎಂದು ತಿಳಿಸಿದರು.

ಸುದ್ದಿಗಾರೊಂದಿಗೆ ಮಾತನಾಡಿದ ಕನ್ನಯ್ಯಕುಮಾರ್ " ನಾನು ಯಾವಾಗಲು ಸಂಸದೀಯ ಪ್ರಕ್ರೀಯೆಯಲ್ಲಿ  ಸೇರಲು ಇಚ್ಚಿಸುವುದಾಗಿ ಹೇಳಿದ್ದೇನೆ,ಆದರೆ ಇದನ್ನು  ನನ್ನ ಪಕ್ಷವು ನಿರ್ಧರಿಸಲಿದೆ. ನಾನು ಸ್ಪರ್ಧಿಸುತ್ತೇನೋ ಅಥವಾ ಇಲ್ಲವೋ ಅದು ಮುಖ್ಯವಲ್ಲ,ಬದಲಾಗಿ ಸಂಯುಕ್ತ ಒಕ್ಕೂಟ ಒಂದಾಗಿರುವುದು ಮುಖ್ಯ,ಈಗಾಗಲೇ ನಾನು ದೇಶದಾದ್ಯಂತ ಸಂವಿಧಾನ ಉಳಿಸಿ ಭಾರತ ಉಳಿಸಿ ಎನ್ನುವ ಕಾರ್ಯಕ್ರಮದಡಿ ಯುವಕರನ್ನು ಭೇಟಿ ಮಾಡುತ್ತಿದ್ದೇನೆ" ಎಂದು  ತಿಳಿಸಿದರು.

ಕನ್ನಯ್ಯ 2019 ರ ಲೋಕಸಭಾ ಚುನಾವಣೆಯಲ್ಲಿ ಬಿಹಾರದ ಬೇಗುಸರಾಯಿನಲ್ಲಿ  ಸಿಪಿಐ ಪಕ್ಷದಿಂದ ಸ್ಪರ್ಧಿಸಲಿದ್ದಾರೆ ಎನ್ನುವ ಸುದ್ದಿಗೆ ಅವರು ಈ ಮೇಲಿನಂತೆ ಪ್ರತಿಕ್ರಿಯಿಸಿದರು.

Trending News