ನವದೆಹಲಿ: ಪ್ಯಾನ್ ಕಾರ್ಡ್ ಮಾಡಿಸಿಕೊಂಡಿಲ್ಲ ಅನ್ನೋರಿಗೆ ಶುಭ ಸಿಕ್ಕಿದೆ. ಯಾಕಂದ್ರೆ, ಇನ್ಮುಂದೆ ನೀವು ಅಂಚೆ ಕಚೇರಿಗೆ ಹೋಗಿಯೂ ಪಾನ್ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದು. ಇಂಡಿಯಾ ಪೋಸ್ಟ್ ಗುರುವಾರ ಟ್ವೀಟ್ ಮಾಡುವ ಮೂಲಕ ಈ ಬಗ್ಗೆ ಮಾಹಿತಿ ನೀಡಿದೆ.
ಪ್ರಸ್ತುತ ದಿನಗಳಲ್ಲಿ ಆಧಾರ್ ಕಾರ್ಡ್(Aadhar Card) ಅಲ್ಲದೆ ಪಾನ್ ಕಾರ್ಡ್ ಕೂಡ ಮಹತ್ವದ ದಾಖಲೆಯಾಗಿದೆ. ಹಣಕಾಸು ವ್ಯವಹಾರಗಳಲ್ಲಿ ಪ್ಯಾನ್ ಕಾರ್ಡ್ ಬಳಕೆಯಾಗುತ್ತದೆ. ಇನ್ನು ಮನೆಯಲ್ಲಿ ಕುಳಿತರೂ ಆನ್ಲೈನ್ ನಲ್ಲೇ ಪಾನ್ ಕಾರ್ಡ್ ಅಪ್ಲೈ ಮಾಡಬಹುದು.
ಪುಣೆ ಫ್ಯಾಶನ್ ಸ್ಟ್ರೀಟ್ ನಲ್ಲಿ ಬೆಂಕಿ, 500 ಕ್ಕೂ ಅಂಗಡಿ ಮುಗ್ಗಟ್ಟುಗಳು ಧ್ವಂಸ
ಇಂಡಿಯಾ ಪೋಸ್ಟ್ ಟ್ವೀಟ್: ಇಂಡಿಯಾ ಪೋಸ್ಟ್(Post Office India)ಗುರುವಾರ ಟ್ವೀಟ್ ಮಾಡುವ ಮೂಲಕ ಈ ಬಗ್ಗೆ ಮಾಹಿತಿ ನೀಡಿದೆ. ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್ʼನಿಂದ ಟ್ವೀಟ್ ಮಾಡಿದ್ದು, 'ಪ್ಯಾನ್ ಕಾರ್ಡ್ ಅನೇಕ ಪ್ರಯೋಜನಗಳನ್ನ ಹೊಂದಿದೆ ಮತ್ತು ನೀವು ಆಯ್ದ ಅಂಚೆ ಕಚೇರಿಗಳಲ್ಲಿ ಅರ್ಜಿ ಸಲ್ಲಿಸಬಹುದು. ಇದು ಅನೇಕ ಹಣಕಾಸಿನ ವ್ಯವಹಾರಗಳಿಗೆ ಸಹಾಯಕವಾಗಿದೆ' ಎಂದಿದೆ.
पैन कार्ड के कई लाभ हैं और आप चयनित डाक घरों में इसके लिए आवेदन कर सकते हैं।
You can now apply for a PAN Card at select post offices near you. It has multiple benefits and is helpful for many financial transactions.#AapkaDostIndiaPost pic.twitter.com/0jseYUjVma
— India Post (@IndiaPostOffice) March 25, 2021
'Aap Ke Dwar Ayushman' ಅಭಿಯಾನದಡಿ ನೂತನ ದಾಖಲೆ, ಮಾರ್ಚ್ 25ರವರೆಗೆ 9.42 ಲಕ್ಷ ಜನರಿಗೆ ಸಿಕ್ಕ ಆಯುಷ್ಮಾನ್ ಕಾರ್ಡ್
ಈ ಕೆಲಸಗಳಲ್ಲಿ ಪ್ಯಾನ್ ಕಾರ್ಡ್ ಅಗತ್ಯ: ಪ್ಯಾನ್ ಕಾರ್ಡ್(Pan Card) ಕೂಡ ಒಂದು ಗುರುತಿನ ಚೀಟಿಯಾಗಿ ಕಾರ್ಯನಿರ್ವಹಿಸುತ್ತದೆ. ಬ್ಯಾಂಕ್ ಖಾತೆ ತೆರೆಯಲು, 50 ಸಾವಿರ ರೂಪಾಯಿಗೂ ಹೆಚ್ಚು ಹಣ ವಹಿವಾಟು ನಡೆಸಲು ಮತ್ತು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಪ್ಯಾನ್ ಕಾರ್ಡ್ ಅಗತ್ಯ. ಇದಲ್ಲದೆ ಆಸ್ತಿ ಖರೀದಿಯಲ್ಲೂ ಇದು ಅತ್ಯಗತ್ಯ. ಆನ್ಲೈನ್ ಮೂಲಕ ಪ್ಯಾನ್ ಕಾರ್ಡ್ ಅರ್ಜಿ ಸಲ್ಲಿಸ್ಬೋದು. ಇದಕ್ಕಾಗಿ ನೀವು ನಿಮ್ಮ ನವೀಕೃತ ಆಧಾರ್ ಕಾರ್ಡ್, ಫೋಟೋ ಮತ್ತು ಇತರ ವಿವರಗಳನ್ನ ನೀಡಬೇಕಾಗುತ್ತೆ.
ರಾಷ್ಟ್ರಪತಿ ಕೊವಿಂದ್ ಆರೋಗ್ಯದಲ್ಲಿ ಸ್ಥಿರ, ಏಮ್ಸ್ ಅಸ್ಪತ್ರೆಗೆ ಶಿಫಾರಸ್ಸು
ಈ ಲಿಂಕ್ ನಿಂದ ನೀವು ಸಹ ಅರ್ಜಿ ಸಲ್ಲಿಸಬಹುದು: ಅಂಚೆ ಕಚೇರಿಗಳನ್ನ ಹೊರತುಪಡಿಸಿ, ನೀವು ಆನ್ಲೈನ್(Online) ನಲ್ಲಿ ಅರ್ಜಿ ಸಲ್ಲಿಸಬಹುದು. ಇದಕ್ಕಾಗಿ ನೀವು ಅಧಿಕೃತ ವೆಬ್ ಸೈಟ್ http://www.onlineservices.nsdl.com/ ಗೆ ಹೋಗಬೇಕು. ಇಲ್ಲಿ ನೀವು ನಿಮ್ಮ ಆಧಾರ್ ಕಾರ್ಡ್ ಸೇರಿದಂತೆ ಇತರ ಪ್ರಮುಖ ಮಾಹಿತಿಯನ್ನ ಒದಗಿಸಬೇಕಾಗುತ್ತೆ. ಇದಲ್ಲದೆ ಆನ್ಲೈನ್ ಮೂಲಕವೇ ಪ್ಯಾನ್ ಕಾರ್ಡ್ ಶುಲ್ಕಗಳನ್ನ ಸಲ್ಲಿಸಬೇಕಾಗುತ್ತೆ. ವಿಶೇಷ ಅಂದ್ರೆ ನಂತ್ರ ನಿಮ್ಮ ಮನೆಯ ವಿಳಾಸಕ್ಕೆ ಪ್ಯಾನ್ ಕಾರ್ಡ್ ಕಳುಹಿಸಲಾಗುತ್ತೆ.
ಹರಿದ್ವಾರದ ಮಹಾಕುಂಭದ ಹಿನ್ನಲೆಯಲ್ಲಿ ಒಂದೇ ವಾರದಲ್ಲಿ ಶೇ 250 ರಷ್ಟು ಪ್ರಕರಣ ಹೆಚ್ಚಳ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.