WhatsApp ಬಳಕೆದಾರರಿಗೊಂದು ಭರ್ಜರಿ ನ್ಯೂಸ್, ಇನ್ಮುಂದೆ ಚಾಟಿಂಗ್ ಮೂಲಕ ಈ ಕೆಲ್ಸಾನೂ ಮಾಡಿ

ವಿಶ್ವಾದ್ಯಂತ ಚಾಟಿಂಗ್ ಗಾಗಿ ಖ್ಯಾತವಾಗಿರುವ WhatsApp ಇನ್ಮುಂದೆ ನಿಮಗಾಗಿ ಅತ್ಯಂತ ಉಪಯುಕ್ತ ಕೆಲಸ ಕೂಡ ಮಾಡಲಿದೆ.

Last Updated : Jan 23, 2020, 01:56 PM IST
WhatsApp ಬಳಕೆದಾರರಿಗೊಂದು ಭರ್ಜರಿ ನ್ಯೂಸ್, ಇನ್ಮುಂದೆ ಚಾಟಿಂಗ್ ಮೂಲಕ ಈ ಕೆಲ್ಸಾನೂ ಮಾಡಿ title=

ನವದೆಹಲಿ: ವಿಶ್ವಾದ್ಯಂತ ಚಾಟಿಂಗ್ ಗಾಗಿ ಖ್ಯಾತವಾಗಿರುವ WhatsApp ಇನ್ಮುಂದೆ ನಿಮಗಾಗಿ ಅತ್ಯಂತ ಉಪಯುಕ್ತ ಕೆಲಸ ಕೂಡ ಮಾಡಲಿದೆ. ಹೌದು, ಇನ್ಮುಂದೆ ನೀವು ನಿಮ್ಮ ಬಂಧು-ಮಿತ್ರರ ಜೊತೆಗೆ ಚಾಟಿಂಗ್ ಮಾಡುತ್ತಾ ನಿಮ್ಮ ಟ್ರಾವೆಲ್ ಪ್ಲಾನ್ ಕೂಡ ಮಾಡಬಹುದಾಗಿದೆ. ಅಷ್ಟೇ ಅಲ್ಲ ಇದರಲ್ಲಿ ನೀವು ಅಗ್ಗದ ಟಿಕೆಟ್ ಗಳ ಮಾಹಿತಿ ಕೂಡ ಪಡೆಯಬಹುದು.

ಈ ಟ್ರಾವೆಲ್ ಕಂಪನಿ ಒದಗಿಸಲಿದೆ ಸೌಲಭ್ಯ
ಭಾರತದಲ್ಲಿ ಪ್ರವಾಸೋದ್ಯಮ ಕ್ಷೇತ್ರಕ್ಕಾಗಿ ಕಾರ್ಯ ನಿರ್ವಹಿಸುವ EaseMyTrip ವಾಟ್ಸ್ ಆಪ್ ಜೊತೆ ಒಪ್ಪಂದವೊಂದಕ್ಕೆ ಸಹಿ ಹಾಕಿದ್ದು, ತನ್ಮೂಲಕ ನೀವು ವಾಟ್ಸ್ ಆಪ್ ನಲ್ಲಿ ಕೇವಲ ಚಾಟಿಂಗ್ ನಡೆಸಿ ನಿಮ್ಮ ಫ್ಲೈಟ್ ಟಿಕೆಟ್ ಬುಕ್ ಮಾಡಬಹುದಾಗಿದೆ. ಈ ಸೇವೆಯನ್ನು ಸಕ್ರೀಯಗೊಳಿಸಲು ಗ್ರಾಹಕರು ತಮ್ಮ ವಾಟ್ಸ್ ಆಪ್ ನಂಬರ್ ಮೂಲಕ ಸಂದೇಶ ಕಳುಹಿಸಬೇಕು. ನಿಮ್ಮ ಸಂಖ್ಯೆ ರಜಿಸ್ಟರ್ ಆದ ಬಳಿಕ ನೀವು ಕೇವಲ ವಾಟ್ಸ್ ಆಪ್ ಬಳಸಿ ನಿಮ್ಮ ಫ್ಲೈಟ್ ಟಿಕೆಟ್ ಬುಕ್ ಮಾಡಬಹುದು.

ಈ ಕುರಿತು ಹೇಳಿಕೆ ನೀಡಿರುವ EaseMyTrip ನಿರ್ದೇಶಕ ಪ್ರಶಾಂತ್ ಪಿಟ್ಟಿ, "EaseMyTrip ಸಂಸ್ಥೆ WhatsApp for business ಜೊತೆಗೆ ಒಪ್ಪಂದವೊಂದಕ್ಕೆ ಸಹಿ ಹಾಕಿದ್ದು, ಎರಡೂ ಕಂಪನಿಗಳು ಜಂಟಿಯಾಗಿ ಈ ಸೇವೆ ನೀಡಲಿವೆ. ಓಡಾಟದಿಂದ ಒಳಗೊಂಡ ನೌಕರಿಯ ಕಾರಣ ಅಗ್ಗದ ದರದ ಟಿಕೆಟ್ ಗಳನ್ನು ಖರೀದಿಸಲು ವಿಫಲವಾಗುವವರ ಪಾಲಿಗೆ ಈ ಯೋಜನೆ ತುಂಬಾ ಲಾಭಕಾರಿಯಾಗಿ ಪರಿಣಮಿಸಲಿದೆ. ಸಮಯದ ಕೊರತೆ ಕಾರಣ ನೌಕರರು ಹಾಗೂ ಉದ್ಯೋಗ ಕ್ಷೇತ್ರದ ಜನರು ಕೊನೆ ಹಂತದಲ್ಲಿ ಟಿಕೆಟ್ ಬುಕ್ ಮಾಡುತ್ತಾರೆ. ಇದು ಅವರ ಜೇಬಿಗೆ ಭಾರಿ ದುಬಾರಿಯಾಗಿ ಪರಿಣಮಿಸುತ್ತದೆ. ಈ ಹೊಸ ಸೇವೆಯ ಮೂಲಕ ಅಂತಹ ಗ್ರಾಹಕರು ಕೂಡಲೇ ಅಗ್ಗದ ದರಗಳ ಟಿಕೆಟ್ ಪರಿಶೀಲಿಸಿ ವಾಟ್ಸ್ ಆಪ್ ಮೂಲಕವೇ ಅವುಗಳನ್ನು ಬುಕ್ ಮಾಡಬಹುದು.

ಅಷ್ಟೇ ಅಲ್ಲ ವಿಭಿನ್ನ ಟ್ರಾವೆಲ್ ವೆಬ್ಸೈಟ್ ಹಾಗೂ ಆಪ್ ಗಳ ಮೂಲಕ ಅಗ್ಗದ ದರದಲ್ಲಿ ಟಿಕೆಟ್ ಪಡೆಯದ ಗ್ರಾಹಕರೂ ಕೂಡ ವಾಟ್ಸ್ ಆಪ್ ನ ಈ ಸೇವೆಯನ್ನು ಬಳಸಿ ಅಗ್ಗದ ದರದಲ್ಲಿ ಟಿಕೆಟ್ ಬುಕ್ ಮಾಡಬಹುದು. ಈ ಹೊಸ ಸೇವೆಯ ಅಡಿ ಗ್ರಾಹಕರು ಕೇವಲ ಒಂದು ಮೆಸೇಜ್ ಕಳುಹಿಸುವ ಮೂಲಕ ಟಿಕೆಟ್ ಬುಕ್ ಮಾಡಬಹುದು. ಜೊತೆಗೆ ಅಗ್ಗದ ಟಿಕೆಟ್ ದರಗಳ ಕುರಿತು ಅಲರ್ಟ್ ಕೂಡ ಪಡೆಯಬಹುದಾಗಿದೆ.

Trending News