ನವದೆಹಲಿ: ಸರ್ಕಾರವು ಈಗ ಡಿಜಿಟಿಲಿಕರಣ ಹಾಗೂ ಖಾಗದ ರಹಿತ ನಗಧಿಗೆ ಒತ್ತು ನೀಡುತ್ತಿರುವುದರಿಂದ ಅದರ ಭಾಗವಾಗಿ ಭಾರತೀಯ ರೈಲ್ವೆಯು ಕೂಡಾ ಆ ನಿಟ್ಟಿನಲ್ಲಿ ಹೆಜ್ಜೆ ಇಡುತ್ತಿದೆ. ಸರ್ಕಾರ ಇತ್ತೀಚಿಗೆ ಬಿಡುಗಡೆ ಮಾಡಿದ್ದ ಭೀಮ್ ಆಪ್ ಅನ್ನು ಸರ್ಕಾರವು ಎಲ್ಲ ಹಣಕಾಸು ವರ್ಗಾವಣೆಗೆ ಉಪಯೋಗಿಸಲು ಪ್ರಾರಂಭಿಸಿದೆ.
ಅದರ ಪ್ರತಿಫಲವಾಗಿ ರೈಲ್ವೆ ಇದೆ ಡಿಸೆಂಬರ್ 1 ರಿಂದ ಪ್ರಯಾಣಿಕರು ಈ ಆಪ್ ಮೂಲಕ ರೈಲಿನ ಟಿಕೆಟ್ ಅನ್ನು ತಮ್ಮ ಮೊಬೈಲ್ ನಲ್ಲಿ ಈ ಆಪ್ ಅನ್ನು ಅಳವಡಿಸಿಕೊಳ್ಳುವುದರ ಮೂಲಕ ಕಾಯ್ದಿರಿಸಬಹುದು. ಮೂರು ತಿಂಗಳುಗಳ ಕಾಲ ಈ ಸೌಲಭ್ಯಕ್ಕೆ ಯಾವುದೇ ಮೊತ್ತವನ್ನು ಪಾವತಿಸಬೇಕಾಗಿಲ್ಲ ಮತ್ತು ಯಾವುದೇ ಬ್ಯಾಂಕ್ ಅಥವಾ ಕ್ರೆಡಿಟ್ ಖಾತೆಯ ನಂಬರ್ಗಳನ್ನು ಸಹಿತ ಹಂಚಿಕೊಲ್ಲಬೇಕಾಗಿಲ್ಲ ಎಂದು ಹೇಳಲಾಗಿದೆ.
ಭೀಮ್ ಆಪ್ ಮೂಲಕ ರೈಲ್ವೆ ಟಿಕೆಟ್ ಬುಕಿಂಗ್ ಮಾಡುವ ವಿಧಾನ
- ಗ್ರಾಹಕರು ಕೌಂಟರ್ ನಲ್ಲಿ ತಮ್ಮ ಪ್ರಯಾಣದ ಸಂಪೂರ್ಣ ಮಾಹಿತಿಯನ್ನು ನೀಡಬೇಕು ಆಗ ಅವರು ಪಾವತಿಸಬೇಕಾದ ಪ್ರಯಾಣದ ಮೊತ್ತವನ್ನು ತಿಳಿಸುತ್ತಾರೆ.
- ಒಂದು ವೇಳೆ ಪ್ರಯಾಣಿಕರು ಭೀಮ್ ಆಪ್ ನ್ನು ಪಾವತಿಸುವ ಆಯ್ಕೆಯನ್ನಾಗಿ ಮಾಡಿಕೊಂಡರೆ ಆಗ ಅವರು ವಿಪಿಎ ಅಡ್ರೆಸ್ ನ್ನು ನೀಡಬೇಕಾಗುತ್ತದೆ.
- ಆಗ ಕೌಂಟರ್ ನಲ್ಲಿ ವಿಪಿಎ ಅಡ್ರೆಸ್ ಮೂಲಕ ಹಣಕಾಸಿನ ವ್ಯವಹಾರಕ್ಕೆ ಚಾಲನೆ ನೀಡಲಾಗುತ್ತದೆ.
- ಆಗ ಪ್ರಯಾಣಿಕರ ಮೊಬೈಲ್ ಗೆ ಹಣಕಾಸಿನ ವ್ಯವಹಾರಕ್ಕೆ ಒಪ್ಪಿಗೆ ನೀಡಲು ಸಂದೇಶ ನೀಡಲಾಗುತ್ತದೆ.ಆಗ ಅವರು ಅದಕ್ಕೆ ಒಪ್ಪಿಗೆ ಸೂಚಿಸಿದರೆ ಅದಕ್ಕೆ ಲಿಂಕ್ ಮಾಡಿದ ಅಕೌಂಟ್ ನಿಂದ ಪ್ರಯಾಣದ ಹಣವನ್ನು ಖಡಿತ ಗೊಳಿಸಲಾಗುತ್ತದೆ.
- ಈ ಪ್ರಯಾಣದ ಮೊತ್ತ ಖಡಿತಗೊಂಡ ನಂತರ ಟಿಕೆಟ್ ಅವನಿಗೆ ಲಭ್ಯವಾಗುತ್ತದೆ