ಈ ರಾಜ್ಯದಲ್ಲಿ ಈಗ ಮಾಸ್ಕ ಧರಿಸುವುದು ಕಡ್ಡಾಯ, ತಪ್ಪಿದಲ್ಲಿ 500 ರೂ.ದಂಡ...!

ದೆಹಲಿ, ಹರಿಯಾಣ ಮತ್ತು ಉತ್ತರ ಪ್ರದೇಶದ ನಂತರ, ಈಗ ದೇಶದಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳ ಮಧ್ಯೆ ತಮಿಳುನಾಡು ಸರ್ಕಾರವು ರಾಜ್ಯದಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಿದೆ.ಶುಕ್ರವಾರದಂದು (ಏಪ್ರಿಲ್ 22, 2022) ಹೊರಡಿಸಿದ ಆದೇಶದಲ್ಲಿ, ಉಲ್ಲಂಘಿಸುವವರು ರೂ 500 ದಂಡವನ್ನು ಪಾವತಿಸಬೇಕಾಗುತ್ತದೆ ಎಂದು ಸರ್ಕಾರ ಹೇಳಿದೆ.

Written by - Zee Kannada News Desk | Last Updated : Apr 22, 2022, 08:12 PM IST
  • ಹನ್ನೆರಡು ವಿದ್ಯಾರ್ಥಿಗಳಿಗೆ ಕೊರೊನಾ ಇರುವುದು ಧೃಡಪಟ್ಟ ನಂತರ ಗುರುವಾರದಂದು, ಐಐಟಿ ಮದ್ರಾಸ್ ಗುರುವಾರ ಕೋವಿಡ್ ವಲಯ ಎಂದು ಘೋಷಿಸಿದೆ.
  • ಗಿಂಡಿ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದರೂ ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲಾಗಲಿಲ್ಲ ಎನ್ನಲಾಗಿದೆ.
ಈ ರಾಜ್ಯದಲ್ಲಿ ಈಗ ಮಾಸ್ಕ ಧರಿಸುವುದು ಕಡ್ಡಾಯ, ತಪ್ಪಿದಲ್ಲಿ 500 ರೂ.ದಂಡ...! title=

ನವದೆಹಲಿ: ದೆಹಲಿ, ಹರಿಯಾಣ ಮತ್ತು ಉತ್ತರ ಪ್ರದೇಶದ ನಂತರ, ಈಗ ದೇಶದಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳ ಮಧ್ಯೆ ತಮಿಳುನಾಡು ಸರ್ಕಾರವು ರಾಜ್ಯದಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಿದೆ.ಶುಕ್ರವಾರದಂದು (ಏಪ್ರಿಲ್ 22, 2022) ಹೊರಡಿಸಿದ ಆದೇಶದಲ್ಲಿ, ಉಲ್ಲಂಘಿಸುವವರು ರೂ 500 ದಂಡವನ್ನು ಪಾವತಿಸಬೇಕಾಗುತ್ತದೆ ಎಂದು ಸರ್ಕಾರ ಹೇಳಿದೆ.

ಇದನ್ನೂ ಓದಿ: RR vs KKR: ಬಟ್ಲರ್ ಶತಕ, ಚಹಾಲ್ ಹ್ಯಾಟ್ರಿಕ್ ಕೈಚಳಕ, ರಾಜಸ್ಥಾನಕ್ಕೆ ಗೆಲುವಿನ ಪುಳಕ

ದೇಶದಲ್ಲಿ, ವಿಶೇಷವಾಗಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹೆಚ್ಚುತ್ತಿರುವ ಕೋವಿಡ್ -19 ಪ್ರಕರಣಗಳನ್ನು ಪರಿಗಣಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಇಲಾಖೆ ಹೇಳಿದೆ.ತಮಿಳುನಾಡು ಕೂಡ ಕಳೆದೆರಡು ದಿನಗಳಿಂದ ಹೊಸ ಪ್ರಕರಣಗಳಲ್ಲಿ ಸ್ವಲ್ಪ ಹೆಚ್ಚಳವಾಗಿದೆ.ತಮಿಳುನಾಡಿನಲ್ಲಿ ಗುರುವಾರದಂದು 39 ಜನರಿಗೆ ಕೊರೊನಾ ಇರುವುದು ಧೃಡಪಟ್ಟಿತ್ತು, ಇದರ ಹಿಂದಿನ ದಿನ ಸುಮಾರು 31 ಜನರಿಗೆ ಸೋಂಕು ಇರುವುದು ಧೃಡಪಟ್ಟಿತ್ತು.ಈ ಹಿಂದೆ, ಸೋಂಕುಗಳ ಸಂಖ್ಯೆಯಲ್ಲಿ ಇಳಿಮುಖವಾದ ನಂತರ ಇಲಾಖೆ ಈ ಹಿಂದೆ ಮಾಸ್ಕ್ ಕಡ್ಡಾಯವನ್ನು ಹಿಂಪಡೆದಿತ್ತು.

ಇದನ್ನೂ ಓದಿ: IPL 2022: ಐಪಿಎಲ್ ಕ್ರಿಕೆಟ್ ಇತಿಹಾಸದಲ್ಲಿ ಅಪರೂಪದ ದಾಖಲೆ ನಿರ್ಮಿಸಿದ ಉಮ್ರಾನ್ ಮಲಿಕ್

ಹನ್ನೆರಡು ವಿದ್ಯಾರ್ಥಿಗಳಿಗೆ ಕೊರೊನಾ ಇರುವುದು ಧೃಡಪಟ್ಟ ನಂತರ ಗುರುವಾರದಂದು, ಐಐಟಿ ಮದ್ರಾಸ್ ಗುರುವಾರ ಕೋವಿಡ್ ವಲಯ ಎಂದು ಘೋಷಿಸಿದೆ. ಗಿಂಡಿ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದರೂ ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲಾಗಲಿಲ್ಲ ಎನ್ನಲಾಗಿದೆ.

ಏತನ್ಮಧ್ಯೆ, ಭಾರತವು ಶುಕ್ರವಾರದಂದು 2,451 ಹೊಸ ಕೋವಿಡ್ -19 ಪ್ರಕರಣಗಳ ಏಕದಿನ ಏರಿಕೆಯನ್ನು ವರದಿ ಮಾಡಿದೆ, ಆ ಮೂಲಕ ಒಟ್ಟು ಸಂಖ್ಯೆ 4,30,52,425 ಕ್ಕೆ ತಲುಪಿದೆ. ಈಗ 54 ಹೊಸ ಕೊರೊನಾ ಸಾವುಗಳೊಂದಿಗೆ ಸಾವಿನ ಸಂಖ್ಯೆ 5,22,116 ಕ್ಕೆ ಏರಿದೆ ಎಂದು ಬೆಳಿಗ್ಗೆ 8 ಗಂಟೆಗೆ ನವೀಕರಿಸಿದ ಡೇಟಾ ತಿಳಿಸಿದೆ. 24 ಗಂಟೆಗಳ ಅವಧಿಯಲ್ಲಿ ಸಕ್ರಿಯ COVID-19 ಕ್ಯಾಸೆಲೋಡ್‌ನಲ್ಲಿ 808 ಪ್ರಕರಣಗಳ ಹೆಚ್ಚಳ ದಾಖಲಾಗಿದೆ ಎಂದು ಡೇಟಾ ತಿಳಿಸಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News