ನವದೆಹಲಿ: ಇನ್ಮುಂದೆ ಮಧ್ಯಪ್ರದೇಶದ ರೈತರು ತಮ್ಮ ಉತ್ಪನ್ನಗಳನ್ನು ಹೆಚ್ಚು ಸ್ಪರ್ಧೆಯೊಂದಿಗೆಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಸಾಧ್ಯವಾಗುತ್ತದೆ. ಇದಕ್ಕಾಗಿ ಅವರು ಮಾರುಕಟ್ಟೆಗೆ ಹೋಗಬೇಕಾಗಿಲ್ಲ. ರಫ್ತುದಾರರು, ವ್ಯಾಪಾರಿಗಳು, ಆಹಾರ ಸಂಸ್ಕರಣೆ ಮಾಡುವವರು ಎಲ್ಲರೂ ಇನ್ಮುಂದೆ ತಮ್ಮ ಖಾಸಗಿ ಮಾರುಕಟ್ಟೆಗಳನ್ನು ತೆರೆಯಬಹುದು ಮತ್ತು ರೈತರ ಜಮೀನು ಅಥವಾ ಅವರ ಮನೆಗೆ ಭೇಟಿ ನೀಡುವ ಮೂಲಕ ಕೃಷಿ ಉತ್ಪನ್ನಗಳನ್ನು ಖರೀದಿಸಬಹುದು ಎಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಘೋಷಿಸಿದ್ದಾರೆ. ಈ ಮಾರುಕಟ್ಟೆ ನಿಯಮಗಳನ್ನು ತಿದ್ದುಪಡಿ ಮಾಡುವ ಉದ್ದೇಶವು ರೈತರಿಗೆ ಉತ್ತಮ ಬೆಲೆ ಮತ್ತು ತಮ್ಮ ಆಯ್ಕೆಯ ಪ್ರಕಾರ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಸ್ವಾತಂತ್ರ್ಯ ನೀಡುವುದಾಗಿದೆ.
ಕೇವಲ ಒಂದೇ ಲೈಸನ್ಸ್ ಇರಲಿದೆ
ರೈತರ ಅನುಕೂಲಕ್ಕಾಗಿ ಈ ಕ್ರಮವು ಕ್ರಾಂತಿಕಾರಿ ಮತ್ತು ಅತ್ಯಂತ ಪ್ರಗತಿಪರ ಎಂದು ಮುಖ್ಯಮಂತ್ರಿಗಳು ಬಣ್ಣಿಸಿದ್ದಾರೆ. ಖಾಸಗಿ ಮಾರುಕಟ್ಟೆಗಳು ಸಾಮಾನ್ಯ ಮಾರುಕತ್ತೆಗಲಿಗಿಂತ ಭಿನ್ನವಾಗಿ ಮತ್ತು ಪ್ರತ್ಯೇಕವಾಗಿ ಕಾರ್ಯನಿರ್ವಹಿಸಲಿವೆ.
ಖಾಸಗಿ ಮಾರುಕತ್ತೆಗೆಳು ಕೃಷಿ ಉತ್ಪನ್ನಗಳನ್ನು ಖರೀದಿಸಲು ಕೇವಲ ಒಂದೇ ಲೈಸನ್ಸ್ ಇರಲಿದೆ ಎಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಉಲ್ಲೇಖಿಸಿದ್ದಾರೆ. ಅವರು ಇಡೀ ರಾಜ್ಯದಿಂದ ಕೃಷಿ ಉತ್ಪನ್ನಗಳನ್ನು ಖರೀದಿಸಬಹುದಾಗಿದ್ದು ಮಾರುಕಟ್ಟೆ ಶುಲ್ಕವನ್ನು ಕೂಡ ಕೇವಲ ಒಂದೇ ಮಾರುಕಟ್ಟೆಯಲ್ಲಿ ಮಾತ್ರ ವಿಧಿಸಲಾಗುವುದು ಎಂದು ಅವರು ಹೇಳಿದ್ದರೆ. ಇದೇ ವೇಳೆ ಇ-ಟ್ರೇಡಿಂಗ್ ಸೌಲಭ್ಯವನ್ನು ಪ್ರಾರಂಭಿಸಲು ಕೂಡ ರಾಜ್ಯ ಸರ್ಕಾರ ನಿರ್ಧರಿಸಿದೆ, ಇದರಿಂದಾಗಿ ರಾಜ್ಯದ ರೈತರು ಇಡೀ ದೇಶದ ಇತರ ಯಾವುದೇ ವ್ಯಾಪಾರ ಸಂಸ್ಥೆಗಳೊಂದಿಗೆ ವ್ಯಾಪಾರ ಮಾಡಲು ಅನುಕೂಲವಾಗಲಿದೆ.
ಮಾರುಕಟ್ಟೆ ಸುಂಕದಲ್ಲಿ ಯಾವುದೇ ಬದಲಾವಣೆ ಇಲ್ಲ
ಏತನ್ಮಧ್ಯೆ, ಮಾರುಕಟ್ಟೆ ತೆರಿಗೆಯಲ್ಲಿ ಸರ್ಕಾರ ಯಾವುದೇ ಬದಲಾವಣೆ ಮಾಡಿಲ್ಲ, ಇದರಿಂದ ಹೊರೆ ಹಾಗೇ ಉಳಿಯಲಿದೆ ಎಂಬ ಆತಂಕವಿದೆ. ದೇಶಾದ್ಯಂತ ಘೋಷಿಸಲಾಗಿರುವ ಲಾಕ್ ಡೌನ್ ನಿಂದ ಬೇಡಿಕೆಯಲ್ಲಿ ಭಾರಿ ಇಳಿಕೆಯಾಗಿದೆ ಮತ್ತು ರಫ್ತಿನ ಮೇಲೆ ನಿಷೇಧ ವಿಧಿಸಲಾಗಿದೆ ಎಂದು ಕೃಷಿ ವೆಚ್ಚ ಮತ್ತು ಬೆಲೆಗಳ ಆಯೋಗದ ಮಾಜಿ ಅಧ್ಯಕ್ಷ ಅಶೋಕ್ ವಿಶಾನಸ್ ದಾಸ್ ಹೇಳಿದ್ದಾರೆ. ಇದರಿಂದ ರೈತರ ಬಳಿ ಕೃಷಿ ಉತ್ಪನ್ನಗಳ ಅಗತ್ಯಕ್ಕಿಂತ ಹೆಚ್ಚಿನ ಸಪ್ಲೈ ಆಗಲಿದೆ.
ಇದಲ್ಲದೆ, ಪ್ರಯಾಣದ ಮೇಲಿನ ನಿರ್ಬಂಧಗಳು ರೈತರಿಗೆ ಮಾರುಕಟ್ಟೆಗಳಿಗೆ ಹೋಗುವುದನ್ನು ನಿಷೇಧಿಸಿವೆ. ಇಂತಹ ಪರಿಸ್ಥಿತಿಯಲ್ಲಿ, ವ್ಯಾಪಾರಿಗಳಿಗೆ ತಮ್ಮ ಉತ್ಪನ್ನಗಳನ್ನು ತೀರಾ ಕಡಿಮೆ ಬೆಲೆಗೆ ಮಾರಾಟ ಮಾದುಅ ಮಾನಸಿಕ ಒತ್ತಡ ಇರುತ್ತದೆ. ಕಾರಣ ರೈತರ ಬಳಿ ಸಾಕಷ್ಟು ಶೇಖರಣಾ ಸ್ಥಳವಿಲ್ಲ ಅಥವಾ ದೀರ್ಘಕಾಲದವರೆಗೆ ಆರ್ಥಿಕ ಹೊರೆ ಹೊರಲು ಅವರ ಬಳಿ ಇತರ ಯಾವುದೇ ಮಾರ್ಗವಿಲ್ಲ.