ನವದೆಹಲಿ: ಜಗತ್ತಿಗಷ್ಟೇ ಜಿಡಿಪಿ ಮುಖ್ಯ ಎಂದು ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹೇಳಿದ್ದಾರೆ. ಈ ಮೂಲಕ ಭಾರತದ ಆರ್ಥಿಕತೆಯು ತೊಂದರೆಯಲ್ಲಿದೆ ಎಂದು ಪ್ರಣಬ್ ಮುಖರ್ಜಿ ಅರ್ಥೈಸಿದ್ದಾರೆ.
ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ 'ಶಿಕ್ಷಾ ದಿ ಬುಕ್' ಪುಸ್ತಕವನ್ನು ಬಿಡುಗಡೆ ಮಾಡಿ ಮಾತನಾಡಿದ ಪ್ರಣಬ್ ಮುಖರ್ಜಿ, ಇಂದು ಜಗತ್ತು ಒಟ್ಟು ದೇಶೀಯ ಉತ್ಪನ್ನದ ಬಗ್ಗೆ ಮಾತ್ರ ಮಾತನಾಡುತ್ತಿದೆ. ಏಕೆಂದರೆ ಜಗತ್ತಿಗೆ ಜಿಡಿಪಿ ಅಗತ್ಯ ಎಂಬ ಹೊಸ ಆಲೋಚನೆ ಹೊರಹೊಮ್ಮಿದೆ . ಆದರೆ ಜಿಡಿಪಿ ಜೊತೆ ಸಂತೋಷವೂ ಮುಖ್ಯವಾಗಿದೆ ಮತ್ತು ಶಿಕ್ಷಣ ಅದರ ಅಡಿಪಾಯವಾಗಿದೆ ಎಂದು ಹೇಳಿದರು.
Former President Pranab Mukherjee in Delhi: The world today is not merely talking about Gross Domestic Product (GDP), world wants more. A new concept has come that GDP is important but side by side Gross Happiness is also important & its basic foundation is education. (05.09.19) pic.twitter.com/Um2CAjq3Ux
— ANI (@ANI) September 5, 2019
ಗುರುವಾರ ನಡೆದ ಈ ಸಮಾರಂಭದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೂಡ ಉಪಸ್ಥಿತರಿದ್ದರು.