ಮಂದಿರ ಮುಚ್ಚಲು ಯಾರೂ ಬಯಸುವುದಿಲ್ಲ, ಆದರೆ ಜನರನ್ನು ಉಳಿಸಬೇಕಾಗಿದೆ-ಸಂಜಯ್ ರೌತ್

ದೇವಾಲಯಗಳನ್ನು ಮುಚ್ಚಿಡಲು ಯಾರೂ ಬಯಸುವುದಿಲ್ಲ ಆದರೆ COVID-19 ಸಾಂಕ್ರಾಮಿಕ ರೋಗದ ನಡುವೆ ನಾವು ಜನರ ಜೀವವನ್ನು ಉಳಿಸಬೇಕಾಗಿದೆ ಎಂದು ಶಿವಸೇನೆ ಸಂಸದ ಸಂಜಯ್ ರೌತ್ ಗುರುವಾರ ಹೇಳಿದ್ದಾರೆ.

Last Updated : Oct 15, 2020, 05:14 PM IST
ಮಂದಿರ ಮುಚ್ಚಲು ಯಾರೂ ಬಯಸುವುದಿಲ್ಲ, ಆದರೆ ಜನರನ್ನು ಉಳಿಸಬೇಕಾಗಿದೆ-ಸಂಜಯ್ ರೌತ್  title=

ನವದೆಹಲಿ: ದೇವಾಲಯಗಳನ್ನು ಮುಚ್ಚಿಡಲು ಯಾರೂ ಬಯಸುವುದಿಲ್ಲ ಆದರೆ COVID-19 ಸಾಂಕ್ರಾಮಿಕ ರೋಗದ ನಡುವೆ ನಾವು ಜನರ ಜೀವವನ್ನು ಉಳಿಸಬೇಕಾಗಿದೆ ಎಂದು ಶಿವಸೇನೆ ಸಂಸದ ಸಂಜಯ್ ರೌತ್ ಗುರುವಾರ ಹೇಳಿದ್ದಾರೆ.

ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯರಿ ಅವರು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಬರೆದ ಪತ್ರದಲ್ಲಿ ಸಂಜಯ್ ರೌತ್ ಎಎನ್‌ಐಗೆ, “ರಾಜ್ಯಪಾಲರು ಸಿಎಂ ಅವರ ಜಾತ್ಯತೀತತೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದರೆ, ರಾಷ್ಟ್ರಪತಿ ಮತ್ತು ಪ್ರಧಾನಿ ಅವರು ರಾಜ್ಯಪಾಲರನ್ನು ಕೇಳಬೇಕು ಅವರು ಜಾತ್ಯತೀತರು ಅಥವಾ ಇಲ್ಲವೇ ಎನ್ನುವುದನ್ನು, ಇನ್ನು ದೇವಾಲಯಗಳನ್ನು  ಯಾರೂ ಮುಚ್ಚಲು ಬಯಸುವುದಿಲ್ಲ,ಆದರೆ ನಾವು ಜನರ ಜೀವವನ್ನು ಉಳಿಸಬೇಕಾಗಿದೆ ಎಂದು ಹೇಳಿದರು.

ನಕಲಿ ಸಾಮಾಜಿಕ ಮಾಧ್ಯಮ ಖಾತೆಗಳ ನಿಯಂತ್ರಣವನ್ನು ಅಮಿತ್ ಶಾ ತಮ್ಮ ಪಕ್ಷದಿಂದಲೇ ಆರಂಭಿಸಲಿ-ಸಂಜಯ್ ರೌತ್

"ನಮ್ಮ ಸಂವಿಧಾನದ ಸ್ವರೂಪ ಮತ್ತು ಪ್ರಧಾನಿ, ರಾಷ್ಟ್ರಪತಿ ಮತ್ತು ರಾಜ್ಯಪಾಲರ ಹುದ್ದೆಗಳು ಜಾತ್ಯತೀತವಾಗಿವೆ. ಹಿಂದುತ್ವವು ನಮ್ಮ ಹೃದಯದಲ್ಲಿದೆ ಮತ್ತು ಆಚರಣೆಯಲ್ಲಿದೆ, ಆದರೆ ದೇಶವು ಸಂವಿಧಾನದ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತದೆ, ಅದು ಜಾತ್ಯತೀತ ಸ್ವರೂಪದಲ್ಲಿದೆ" ಎಂದು ಅವರು ಹೇಳಿದರು.

ವಿಶೇಷವೆಂದರೆ, ರಾಜ್ಯಪಾಲ ಕೊಶಾರಿ ಇತ್ತೀಚೆಗೆ ಸಿಎಂ ಉದ್ಧವ್ ಠಾಕ್ರೆ ಅವರಿಗೆ  ಪತ್ರ ಬರೆದು ರಾಜ್ಯದಲ್ಲಿ ದೇವಾಲಯಗಳನ್ನು ತೆರೆಯುವುದನ್ನು ಉಲ್ಲೇಖಿಸುತ್ತಾ ಸಿಎಂ ಇದ್ದಕ್ಕಿದ್ದಂತೆ ಜಾತ್ಯತೀತವಾಗಿದ್ದಾರೆಯೇ" ಎಂದು ಪ್ರಶ್ನಿಸಿದರು.

ಸುಶಾಂತ್ ಎಫೆಕ್ಟ್ ನಿಲ್ಲಲಿ, ಮುಂದುವರಿದರೆ ಆತ್ಮಹತ್ಯೆ ಶೀಘ್ರದಲ್ಲೇ ಪ್ರವೃತ್ತಿಯಾಗಲಿದೆ--ಸಂಜಯ್ ರೌತ್

ಮುಖ್ಯಮಂತ್ರಿಗೆ ರಾಜ್ಯಪಾಲರು ಬರೆದ ಪತ್ರದ ಸಮಯವನ್ನು ಶಿವಸೇನೆ ಪ್ರಶ್ನಿಸಿದ್ದು, ಬಿಜೆಪಿಯ ಕಾರ್ಯಸೂಚಿಯನ್ನು ರವಾನಿಸುತ್ತಿದೆ ಎಂದು ಆರೋಪಿಸಿದರು.ರಾಜ್ ಭವನ "ಪ್ರತಿಷ್ಠೆಯನ್ನು" ಕಾಪಾಡಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಷಾ ಬಯಸಿದರೆ ಮಹಾರಾಷ್ಟ್ರ ರಾಜ್ಯಪಾಲರನ್ನು ವಾಪಸ್ ಕರೆಸಿಕೊಳ್ಳಬೇಕು ಎಂದು ಪಕ್ಷ ಹೇಳಿದೆ.

Trending News