ನಿರ್ಮಲಾ ಸೀತಾರಾಮನ್ ಜೆಎನ್ಯು ನಲ್ಲಿ ನನ್ನ ಸಮಕಾಲೀನರಾಗಿದ್ದರು - ನೊಬೆಲ್ ಪುರಸ್ಕೃತ ಅಭಿಜಿತ್ ಬ್ಯಾನರ್ಜೀ

ಭಾರತದ ಆರ್ಥಿಕ ಕುಸಿತದ ವಿಚಾರವಾಗಿ ನೀಡಿದ್ದ ನೊಬೆಲ್ ಪುರಸ್ಕೃತ ಆರ್ಥಿಕ ತಜ್ಞ ಅಭಿಜಿತ್ ಬ್ಯಾನರ್ಜಿ ಅವರ ಹೇಳಿಕೆಗೆ ಬಿಜೆಪಿ ನಾಯಕರು ತೀವ್ರ ಟೀಕಾ ಪ್ರಹಾರ ನಡೆಸಿದ್ದರು.

Last Updated : Oct 20, 2019, 01:41 PM IST
ನಿರ್ಮಲಾ ಸೀತಾರಾಮನ್ ಜೆಎನ್ಯು ನಲ್ಲಿ ನನ್ನ ಸಮಕಾಲೀನರಾಗಿದ್ದರು - ನೊಬೆಲ್ ಪುರಸ್ಕೃತ ಅಭಿಜಿತ್ ಬ್ಯಾನರ್ಜೀ  title=
Photo courtesy: Facebook

ನವದೆಹಲಿ: ಭಾರತದ ಆರ್ಥಿಕ ಕುಸಿತದ ವಿಚಾರವಾಗಿ ನೊಬೆಲ್ ಪುರಸ್ಕೃತ ಆರ್ಥಿಕ ತಜ್ಞ ಅಭಿಜಿತ್ ಬ್ಯಾನರ್ಜಿ ನೀಡಿದ್ದ ಹೇಳಿಕೆಗೆ ಬಿಜೆಪಿ ನಾಯಕರು ತೀವ್ರ ಟೀಕಾ ಪ್ರಹಾರ ನಡೆಸಿದ್ದರು.

ಈಗ ಎನ್ದಿಟಿವಿ ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅಭಿಜಿತ್ ಬ್ಯಾನರ್ಜಿ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ತಮ್ಮ ಸಮಕಾಲೀನರಾಗಿದ್ದರು ಮತ್ತು ಅವರು ಹಲವಾರು ವಿಷಯಗಳ ಬಗ್ಗೆ ಇದೇ ರೀತಿಯ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ' ಎಂದು ತಿಳಿಸಿದ್ದಾರೆ.

ಇತ್ತೀಚಿಗೆ ಅಭಿಜಿತ್ ಬ್ಯಾನರ್ಜೀ ಅವರನ್ನು ಕೇಂದ್ರ ಸಚಿವ ಪಿಯುಶ್ ಗೋಯಲ್ ಎಡಪಂಥೀಯ ವಿಚಾರವುಳ್ಳವರು ಎಂದು ಹೇಳಿದ್ದರು, ಅಷ್ಟೇ ಅಲ್ಲದೆ ಕಾಂಗ್ರೆಸ್ ಪಕ್ಷದ ನ್ಯಾಯ ಯೋಜನೆಯನ್ನು ಅವರು ಪ್ರಸ್ತಾಪಿಸಿದ್ದರು ಎಂದು ಹೇಳಿದ್ದರು. ಕೇಂದ್ರ ಸಚಿವರ ಹೇಳಿಕೆ ಹಿನ್ನಲೆಯಲ್ಲಿ ಈಗ ಸಂದರ್ಶನದಲ್ಲಿ ಹಲವಾರು ವಿಚಾರಗಳ ಕುರಿತಾಗಿ ಮುಕ್ತವಾಗಿ ಮಾತನಾಡಿರುವ ಬ್ಯಾನರ್ಜೀ 'ನನಗೆ ಚೆನ್ನಾಗಿ ತಿಳಿದಿರುವ ಮತ್ತು ಕೆಲವು ವಿಷಯಗಳಲ್ಲಿ ಒಂದೇ ನಿಲುವು ಹೊಂದಿದ್ದವರೆಂದರೆ ಅದು ನಿರ್ಮಲಾ ಸೀತಾರಾಮನ್, ಅವರು ಜೆಎನ್‌ಯುನಲ್ಲಿ ನನ್ನ ಸಮಕಾಲೀನರಾಗಿದ್ದರು...ನಾವು ಆಪ್ತ ಸ್ನೇಹಿತರು ಎಂದು ನಾನು ಹೇಳುವುದಿಲ್ಲ, ಆದರೆ ನಾವು ಸ್ನೇಹಿತರಾಗಿದ್ದೇವೆ ಮತ್ತು ನಾವು ಆಳವಾದ ಭಿನ್ನಾಭಿಪ್ರಾಯಗಳನ್ನು ಹೊಂದಿರಲಿಲ್ಲ ಎಂದು ಹೇಳಿದರು.

ವಿಶ್ವವಿದ್ಯಾನಿಲಯವು ಬಹಳಷ್ಟು ಜನರು ವಿಭಿನ್ನ ಅಭಿಪ್ರಾಯಗಳನ್ನು ಮತ್ತು ವಿಭಿನ್ನ ಅಭಿಪ್ರಾಯಗಳನ್ನು ಹೊಂದಿರುವ ಸ್ಥಳವಾಗಿದೆ. ಇದು ಅದ್ಭುತ ಏಕೆಂದರೆ ಅದು ಭಾರತದ ಸ್ವಭಾವದೊಂದಿಗೆ ನಿಮ್ಮನ್ನು ಆಳವಾದ ರೀತಿಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡುತ್ತದೆ'.ಇನ್ನು ಮುಂದುವರೆದು, 'ವಿಮರ್ಶಾತ್ಮಕವಾಗಿರುವುದು ಒಂದು ವಿಷಯ ಮತ್ತು ನಾಗರಿಕತೆಯ ವೈವಿಧ್ಯಮಯ ದೃಷ್ಟಿಕೋನಗಳೊಂದಿಗೆ ಚರ್ಚಿಸಲು ಸಾಧ್ಯವಾಗುವುದು ಇನ್ನೊಂದು ವಿಷಯ ಮತ್ತು ಇವೆರಡೂ ಮುಖ್ಯ' ಎಂದು ಅವರು ಹೇಳಿದರು. 

Trending News