Nirbhaya Case: ಕ್ಷಮಾದಾನ ಅರ್ಜಿ ತಿರಸ್ಕಾರ ಪ್ರಶ್ನಿಸಿ ಮುಕೇಶ್ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ SC

Nirbhaya Case: ವರ್ಷ 2012ರ ನಿರ್ಭಯಾ ಗ್ಯಾಂಗ್ ರೇಪ್ ಪ್ರಕರಣದ ಪ್ರಮುಖ ನಾಲ್ವರು ಅಪರಾಧಿಗಳ ಪೈಕಿ ಓರ್ವ ಅಪರಾಧಿಯಗಿರುವ ದೋಷಿ ಅಕ್ಷಯ್ ಸಿಂಗ್ ಮಂಗಳವಾರ ಸುಪ್ರೀಂ ನ್ಯಾಯಾಲಯದಲ್ಲಿ ಕ್ಯೂರೆಟಿವ್ ಅರ್ಜಿ ದಾಖಲಿಸಿದ್ದಾನೆ.

Last Updated : Jan 29, 2020, 12:06 PM IST
Nirbhaya Case: ಕ್ಷಮಾದಾನ ಅರ್ಜಿ ತಿರಸ್ಕಾರ ಪ್ರಶ್ನಿಸಿ ಮುಕೇಶ್ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ SC title=

Nirbhaya Case: ವರ್ಷ 2012ರ ನಿರ್ಭಯಾ ಗ್ಯಾಂಗ್ ರೇಪ್ ಪ್ರಕರಣದ ಪ್ರಮುಖ ನಾಲ್ವರು ಅಪರಾಧಿಗಳ ಪೈಕಿ ಓರ್ವ ಅಪರಾಧಿಯಗಿರುವ ದೋಷಿ ಅಕ್ಷಯ್ ಸಿಂಗ್ ಮಂಗಳವಾರ ಸುಪ್ರೀಂ ನ್ಯಾಯಾಲಯದಲ್ಲಿ ಕ್ಯೂರೆಟಿವ್ ಅರ್ಜಿ ದಾಖಲಿಸಿದ್ದಾನೆ. ಅಕ್ಷಯ್ ಹೊರತುಪಡಿಸಿ ಪ್ರಕರಣದಲ್ಲಿ ಮತ್ತೋರ್ವ ದೊಶಿಯಾಗಿರುವ ವಿನಯ್ ಕ್ಷಮಾದಾನ ಅರ್ಜಿ ದಾಖಲಿಸಲಿದ್ದಾನೆ. ಗಲ್ಲುಶಿಕ್ಷೆಯಿಂದ ಪಾರಾಗಲು ಗಲ್ಲುಶಿಕ್ಷೆ ನೀಡುವ ವಿಧಾನವನ್ನು ಪ್ರಶ್ನಿಸಿ ಅಕ್ಷಯ್ ತನ್ನ ಅರ್ಜಿಯನ್ನು ದಾಖಲಿಸಿದ್ದಾನೆ. ಹೀಗಾಗಿ ಬರುವ ಶನಿವಾರ ಗಲ್ಲುಶಿಕ್ಷೆ ನೀಡಲಾಗುವುದೇ ಅಥವಾ ಇಲ್ಲವೇ ಎಂಬ ಸ್ಥಿತಿ ಉದ್ಭವಿಸಿದೆ.

ಕಳೆದ ತಿಂಗಳು ಅಕ್ಷಯ್ ದಾಖಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿತ್ತು. ಈ ವೇಳೆ ಹಿಂದೂ ಧಾರ್ಮಿಕ ಗ್ರಂಥಗಳ ಸಹಾಯ ಪಡೆದು ದೆಹಲಿಯಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ವಾಯುಮಾಲಿನ್ಯದಿಂದ ಉಂಟಾಗುತ್ತಿರುವ ಸಾವುಗಳನ್ನು ಉಲ್ಲೇಖಿಸಿ ತಮ್ಮ ಗಲ್ಲುಶಿಕ್ಷೆ ರದ್ದುಗೊಳಿಸಬೇಕು ಎಂದು ಕೋರಿದ್ದ. ಆತನ ಕ್ಯುರೆಟಿವ್ ಅರ್ಜಿಯ ಕುರಿತು ನ್ಯಾಯಾಧೀಶರು ತಮ್ಮ ಚೇಂಬರ್ ನಲ್ಲಿ ವಿಚಾರಣೆ ನಡೆಸುವ ಸಾಧ್ಯತೆ ಇದೆ. ಇಲ್ಲಿ ಒಂದು ವೇಳೆ ಆತನ ಕ್ಯುರೆಟಿವ್ ಅರ್ಜಿ ವಜಾಗೊಂಡರೆ ಆತನ ಬಳಿ ರಾಷ್ಟ್ರಪತಿ ರಾಮನಾಥ್ ಕೊವಿಂದ್ ಅವರಿಗೆ ಕ್ಷಮಾದಾನ ಅರ್ಜಿ ಸಲ್ಲಿಸುವ ವಿಕಲ್ಪ ಮಾತ್ರ ಉಳಿಯಲಿದೆ.

ಇಂದು ನಿರ್ಭಯಾ 'ಹ'ತ್ಯಾಚಾರದ ದೋಷಿಗಳಲ್ಲಿ ಒಬ್ಬನಾದ ಮುಕೇಶ್ ಕುಮಾರ್ ಸಿಂಗ್ ಸಲ್ಲಿಸಿದ್ದ ಅರ್ಜಿ ಕುರಿತು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿದ್ದು, ಆತ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ್ದು, ರಾಷ್ಟ್ರಪತಿ ರಾಮನಾಥ್ ಕೊವಿಂದ್ ಅವರು ಮುಕೇಶ್ ಕುಮಾರ್ ಸಿಂಗ್ ಕ್ಷಮಾದಾನ ಅರ್ಜಿಯನ್ನು ತಿರಸ್ಕರಿಸಿದ್ದಾರೆ ಮೇಲೆ ಜಸ್ಟಿಸ್ ಆರ್. ಅನುಭೂತಿ ಅಧ್ಯಕ್ಷತೆಯ ಮೂವರು ನ್ಯಾಯಮೂರ್ತಿಗಳ ಪೀಠ ತನ್ನ ಮುದ್ರೆ ಒತ್ತಿದೆ. ಇದರಿಂದ ಗಲ್ಲುಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಮುಕೇಶ್ ಬಳಿಯಿದ್ದ ಎಲ್ಲ ವಿಕಲ್ಪಗಳು ಮುಗಿದುಹೋಗಿವೆ ಹಾಗೂ ಫೆಬ್ರುವರಿ 1ರಂದು ಆತನಿಗೆ ಗಲ್ಲುಶಿಕ್ಷೆ ವಿಧಿಸುವುದು ಖಚಿತವಾಗಿದೆ.

ಆದರೆ, ಪ್ರಕರಣದಲ್ಲಿ ದೋಷಿಗಳಾಗಿರುವ ಇನ್ನೂ ಇಬ್ಬರು ಆರೋಪಿಗಳು ನ್ಯಾಯಾಲಯದಲ್ಲಿ ಕ್ಯುರೆಟಿವ್ ಅರ್ಜಿ ದಾಖಲಿಸುವ ಹಾಗೂ ಮೂವರು ಆರೋಪಿಗಳು ರಾಷ್ಟ್ರಪತಿಗಳ ಬಳಿ ಕ್ಷಮಾದಾನ ಅರ್ಜಿ ದಾಖಲಿಸುವ ಕಾನೂನಾತ್ಮಕ ವಿಕಲ್ಪ ಇರುವುದು ಇಲ್ಲಿ ಗಮನಾರ್ಥ. ಮುಕೇಶ್ ಕುಮಾರ್ ಸಿಂಗ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್, ದೆಹಲಿ ಸರ್ಕಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲ ದಾಖಲೆಗಳನ್ನು ರಾಷ್ಟ್ರಪತಿಗಳಿಗೆ ಸಲ್ಲಿಸಿದ್ದು, ದಾಖಲೆಗಳನ್ನು ಪರಿಶೀಲಿಸಿರುವ ರಾಷ್ಟ್ರಪತಿಗಳು ಆತನ ದಯಾ ಅರ್ಜಿಯನ್ನು ತಿರಸ್ಕರಿಸಿದ್ದಾರೆ ಎಂದು ಹೇಳಿದೆ.

Trending News