ಭೀಕರ ಅಪಘಾತ: ಎರಡು ಟ್ರಕ್​ಗಳ ನಡುವೆ ಮುಖಾಮುಖಿ ಢಿಕ್ಕಿ 11 ಸಾವು, 17 ಮಂದಿಗೆ ಗಂಭೀರ ಗಾಯ..!

ನಸುಕಿನಲ್ಲಿ ಎರಡು ಟ್ರಕ್​ಗಳ ನಡುವೆ ಮುಖಾಮುಖಿ ಢಿಕ್ಕಿ

Last Updated : Nov 18, 2020, 11:41 AM IST
  • ನಸುಕಿನಲ್ಲಿ ಎರಡು ಟ್ರಕ್​ಗಳ ನಡುವೆ ಮುಖಾಮುಖಿ ಢಿಕ್ಕಿ
  • 11 ಮಂದಿ ಮೃತಪಟ್ಟು, 17 ಜನ ಗಂಭೀರ ಗಾಯ
  • ವಡೋದರ ಹೈವೇ ರಸ್ತೆಯ ವಾಘೋಡಿಯಾ ಕ್ರಾಸಿಂಗ್ ಬಳಿ ಟ್ರಕ್​ಗಳು ಢಿಕ್ಕಿ
ಭೀಕರ ಅಪಘಾತ: ಎರಡು ಟ್ರಕ್​ಗಳ ನಡುವೆ ಮುಖಾಮುಖಿ ಢಿಕ್ಕಿ 11 ಸಾವು, 17 ಮಂದಿಗೆ ಗಂಭೀರ ಗಾಯ..! title=
Image Courtesy-ANI

ಗುಜರಾತ್: ಇಂದು ನಸುಕಿನಲ್ಲಿ ಎರಡು ಟ್ರಕ್​ಗಳ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿದ ಪರಿಣಾಮ 11 ಮಂದಿ ಮೃತಪಟ್ಟು, 17 ಜನ ಗಂಭೀರವಾಗಿ ಗಾಯಗೊಂಡಿರುವ ಭೀಕರ ಅಪಘಾತ ಗುಜರಾತ್​ನ ವಡೋದರದಲ್ಲಿ ನಡೆದಿದೆ.

ಎರಡು ಟ್ರಕ್​ಗಳ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿದ ಪರಿಣಾಮವಾಗಿ ಈ ದುರ್ಘಟನೆ ನಡೆದಿದೆ. ವಡೋದರ(Vadodara) ಹೈವೇ ರಸ್ತೆಯ ವಾಘೋಡಿಯಾ ಕ್ರಾಸಿಂಗ್ ಬಳಿ ಟ್ರಕ್​ಗಳು ಢಿಕ್ಕಿ ಹೊಡೆದಿವೆ.

ಖ್ಯಾತ ನಟಿ, ಬಿಜೆಪಿ ನಾಯಕಿ ಖುಷ್ಬೂ ಸುಂದರ್ ಕಾರು ಅಪಘಾತ

ನಸುಕಿನ ಸುಮಾರು ಮೂರು ಗಂಟೆಗೆ ಈ ಘಟನೆ ನಡೆದಿದೆ. ಟ್ರಕ್ ನಲ್ಲಿದ್ದ ಪ್ರಯಣಿಕರೆಲ್ಲಾ ಸೂರತ್ ನಿಂದ ಪಾವಗಢದ ಕಡೆಗೆ ಪ್ರಯಾಣಿಸುತ್ತಿದ್ದರು. ಗಾಯಗೊಂಡವರನ್ನು ವಡೋದರದ ಎಸ್ ಎಸ್ ಜಿ ಹಾಸ್ಪತ್ರೆಗೆ ದಾಖಲಿಸಲಾಗಿದೆ.

Life certificate : 67 ಲಕ್ಷ EPS ಪಿಂಚಣಿದಾರರಿಗಾಗಿ ನೆಮ್ಮದಿ ಸುದ್ದಿ

ಅಪಘಾತ ಸುದ್ದಿ ತಿಳಿಯುತ್ತಿದ್ದಂತೆಯ್ ಸ್ಥಳಕ್ಕಾಗಮಿಸಿರುವ ಪೊಲೀಸರು ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿದ್ದು, ಮೃತಪಟ್ಟರ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಅಪಘಾತ ಸಂಭವಿಸುತ್ತಿದ್ದಂತೆಯೇ ಸ್ಥಳದಲ್ಲಿ ಭಾರೀ ಸಂಚಾರ ದಟ್ಟಣೆ ಎದುರಾಗಿದೆ.

ಈ ಬ್ಯಾಂಕಿನಿಂದ ತಿಂಗಳಿಗೆ ₹ 25,000 ಮಾತ್ರ ವಿತ್ ಡ್ರಾ ಮಾಡಲು ಆರ್‌ಬಿಐ ಆದೇಶ

Trending News