ಮೊದಲ ರಾತ್ರಿಯಂದೇ ಟೆರೇಸ್‌ನಿಂದ ಜಿಗಿದು ಓಡಿಹೋದ ನವವಧು..!: ಕಾರಣ ಏನು ಗೊತ್ತಾ?

ವರ ಸೋನು ಜೈನ್‌ಗೆ ಸೂಕ್ತ ವಧುವನ್ನು ಹುಡುಕಲು ಸಾಧ್ಯವಾಗಿರಲಿಲ್ಲ.

Written by - Puttaraj K Alur | Last Updated : Aug 1, 2021, 03:59 PM IST
  • ಮಧ್ಯಪ್ರದೇಶದ ಭಿಂಡ್ ಜಿಲ್ಲೆಯಲ್ಲಿ ಮದುವೆ ಜಾಲಕ್ಕೆ ಸಿಲುಕಿ ಮೋಸ ಹೋಗಿದ್ದ ವ್ಯಕ್ತಿ
  • ಮದುವೆಯ ಮೊದಲೇ ರಾತ್ರಿಯಂದೇ ವರನಿಗೆ ಚಳ್ಳೆ ಹಣ್ಣು ತಿನ್ನಿಸಿ ಎಸ್ಕೇಪ್ ಆಗಿದ್ದ ನವವಧು
  • ಪ್ರಕರಣ ಸಂಬಂಧ ಐವರ ವಿರುದ್ಧ ಪ್ರಕರಣ ದಾಖಲು, ವಧು ಸೇರಿ ಮೂವರ ಬಂಧನ
ಮೊದಲ ರಾತ್ರಿಯಂದೇ ಟೆರೇಸ್‌ನಿಂದ ಜಿಗಿದು ಓಡಿಹೋದ ನವವಧು..!: ಕಾರಣ ಏನು ಗೊತ್ತಾ? title=
ವರನಿಗೆ ಟೋಪಿ ಹಾಕಿ ಎಸ್ಕೇಪ್ ಆಗಿದ್ದ ನವವಧು

ಭಿಂಡ್​: ಮದುವೆಯ ಮೊದಲ ರಾತ್ರಿಯಂದೇ ನವವಿವಾಹಿತ ವಧು(Newly Wed Bride)ಟೆರೇಸ್‌ನಿಂದ ಜಿಗಿದು ಓಡಿಹೋಗಿರುವ ಘಟನೆ ಮಧ್ಯಪ್ರದೇಶದ ಭಿಂಡ್ ಜಿಲ್ಲೆಯ ಗೋರ್ಮಿ ಪ್ರದೇಶದಲ್ಲಿ ನಡೆದಿದೆ. ವರದಿಗಳ ಪ್ರಕಾರ ಮದುವೆಯಾಗಲು ವಧುವಿಗೆ 90 ಸಾವಿರ ರೂ. ನೀಡಲಾಗಿತ್ತು. ಮದುವೆ ಜಾಲದ ವಂಚನೆಗೆ ಬಲಿಯಾದ ವರ ಪೊಲೀಸರಿಗೆ ದೂರು ನೀಡಿದ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ.   

ಘಟನೆಗೆ ಸಂಬಂಧಿಸಿದಂತೆ ಒಟ್ಟು ಐವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದು, ಮೂವರನ್ನು ಬಂಧಿಸಿದ್ದಾರೆ. ವರ ಸೋನು ಜೈನ್‌ಗೆ ಸೂಕ್ತ ವಧು(Bride)ವನ್ನು ಹುಡುಕಲು ಸಾಧ್ಯವಾಗಿರಲಿಲ್ಲ. ವಧು ಹುಡುಕುತ್ತಿದ್ದ ಅವರಿಗೆ ಪರಿಚಯಸ್ಥ ಗ್ವಾಲಿಯರ್ ನಿವಾಸಿ ಉದಲ್ ಖಾತಿಕ್ ಎಂಬುವರು, ‘ನಾನು ನಿನಗೆ ಸೂಕ್ತ ವಧು ನೋಡಿ ಮದುವೆ ಮಾಡಿಸುತ್ತೇನೆ. ಆದರೆ ನೀನು ನನಗೆ 1 ಲಕ್ಷ ರೂ. ನೀಡಬೇಕು’ ಎಂದು ಹೇಳಿದ್ದ. ಇಬ್ಬರ ನಡುವೆ 90 ಸಾವಿರ ರೂ. ಗೆ ಕೊಡು-ತೆಗೆದುಕೊಳ್ಳುವ ಡೀಲ್ ಆಗಿತ್ತು. ಬಳಿಕ ಖಾತಿಕ್ ಅವರು ಅನಿತಾ ರತ್ನಾಕರ್, ಜಿತೇಂದ್ರ ರತ್ನಾಕರ್ ಮತ್ತು ಅರುಣ್ ಖಾತಿಕ್ ಎಂಬುವವರನ್ನು ಗೋರ್ಮಿಗೆ ಕರೆದುಕೊಂಡು ಬಂದು ಪರಿಚಯಿಸಿದ್ದ.

ಇದನ್ನೂ ಓದಿ: New RBI Rules : ಇಂದಿನಿಂದ ಬದಲಾಗಲಿದೆ ವೇತನ, ಪಿಂಚಣಿ, EMI ಪಾವತಿ ನಿಯಮ

ಅತ್ಯಂತ ಖುಷಿಯಿಂದಲೇ ಸೋನು ಜೈನ್ ಎಲ್ಲಾ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಅನಿತಾಳನ್ನು ವಿವಾಹ(Marriage)ವಾಗಿದ್ದ. ಮದುವೆ ಮುಗಿದ ನಂತರ ವರನ ಸ್ವಗೃಹ ತಲುಪಿದ ಸೋನು ಕುಟುಂಬ ಸದಸ್ಯರೆಲ್ಲರೂ ನವವಿವಾಹಿತರನ್ನು ಆಶೀರ್ವದಿಸಿದರು. ಆಗಲೇ ತಡರಾತ್ರಿಯಾಗಿದ್ದರಿಂದ ಎಲ್ಲರೂ ತಮ್ಮ ತಮ್ಮ ಕೋಣೆಯಲ್ಲಿ ಮಲಗಲು ತೆರಳಿದರು. ಅನಿತಾ ಜೊತೆಗೆ ಬಂದಿದ್ದ ಜಿತೇಂದ್ರ ರತ್ನಾಕರ್ ಮತ್ತು ಅರುಣ್ ಖಾತಿಕ್ ಇಬ್ಬರೂ ಹೊರಗೆ ಮಲಗಲು ಹೋಗಿದ್ದರು.  ಈ ವೇಳೆ ಅನಿತಾ ಅಸ್ವಸ್ಥಳಂತೆ ನಟಿಸಿ ಟೆರೇಸ್‌ ಮೇಲ್ಗಡೆ ಹೋಗಿದ್ದಳು.

ವಧು ಟೆರೇಸ್‌ ಮೇಲ್ಗಡೆ ಹೋಗಿದ್ದನ್ನು ಸೋನು ಜೈನ್ ಕುಟುಂಬದ ಯಾರೋ ಒಬ್ಬರು ಗಮನಿಸಿದ್ದರು. ಬಳಿಕ ಏನಾಗಿರಬಹುದೆಂದು ವಧು(Bride)ಗಾಗಿ ಹುಡುಕಾಟ ನಡೆಸಿದರು. ಆದರೆ ಆಕೆ ಅದಾಗಲೇ ಸ್ಥಳದಿಂದಲೇ ಎಸ್ಕೇಪ್ ಆಗಿದ್ದಳು. ವಧುವನ್ನು ಹುಡುಕಿ ಹುಡುಕಿ  ಸುಸ್ತಾದ ವರ ಮತ್ತು ಆತನ ಕುಟುಂಬಸ್ಥರಿಗೆ ಮುಂದೇನು ಮಾಡುವುದೆಂದು ದಿಕ್ಕು ತೋಚಲಿಲ್ಲ. ಹೀಗಾಗಿ ಅವರು ಪೊಲೀಸ್ ಠಾಣೆ(Police Station)ಗೆ ತೆರಳಿ ವಧು ಕಾಣೆಯಾದ ಬಗ್ಗೆ ದೂರು ನೀಡಿದ್ದರು. ಪೊಲೀಸರು ಎಸ್ಕೇಪ್ ಆಗಿದ್ದ ಅನಿತಾಳನ್ನು ಪತ್ತೆ ಹಚ್ಚಿದ್ದಾರೆ.

ಇದನ್ನೂ ಓದಿ:  ಕೇರಳದ ನಂತರ ಇದೀಗ ಈ ರಾಜ್ಯದಲ್ಲೂ Zika Virus ಪತ್ತೆ, 50 ವರ್ಷದ ಮಹಿಳೆಗೆ ಸೋಂಕು

ಮದುವೆಯ ಮೊದಲೇ ರಾತ್ರಿಯೇ ವರನಿಗೆ ಚಳ್ಳೆಹಣ್ಣು ತಿನ್ನಿಸಿ ಅನಿತಾ ಟೆರೇಸ್‌ನಿಂದ ಜಿಗಿದು ಪರಾರಿಯಾಗಿದ್ದಳು. ಬಳಿಕ ಆಕೆ ರಾತ್ರಿ ವೇಳೆ ಗಸ್ತಿನಲ್ಲಿದ್ದ ಪೊಲೀಸ(Police)ರ ಕೈಗೆ ಸಿಕ್ಕಿಬಿದ್ದಿದ್ದಾಳೆ. ವಧು ಪತ್ತೆಯಾದ ಬಳಿಕ ಸೋನು ಜೈನ್ ಗೋರ್ಮಿ ಪೊಲೀಸ್ ಠಾಣೆಗೆ ಬಂದು ತಾನು ಮೋಸ ಹೋಗಿರುವುದಾಗಿ ದೂರು ನೀಡಿದ್ದಾರೆ. ಮದುವೆ ಹೆಸರಲ್ಲಿ ವಂಚಿಸುತ್ತಿದ್ದ ಎಲ್ಲಾ ಆರೋಪಿಗಳ ವಿರುದ್ಧ ಪೊಲೀಸರು ವಂಚನೆ ಪ್ರಕರಣ ದಾಖಲಿಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

 

Trending News