ಏರ್ ಏಷ್ಯಾ ವಿಮಾನದಲ್ಲಿ ನವಜಾತ ಶಿಶು ಮೃತದೇಹ ಪತ್ತೆ

ವಿಮಾನದ ಶೌಚಾಲಯದಲ್ಲಿ ಶಿಶು ಮೃತದೇಹ ಪತ್ತೆಯಾಗಿದ್ದಾಗಿ ವಿಮಾನ ಸಿಬ್ಬಂದಿ ತಿಳಿಸಿದ್ದಾರೆ.

Last Updated : Jul 25, 2018, 08:07 PM IST
ಏರ್ ಏಷ್ಯಾ ವಿಮಾನದಲ್ಲಿ ನವಜಾತ ಶಿಶು ಮೃತದೇಹ ಪತ್ತೆ title=

ನವದೆಹಲಿ: ದೆಹಲಿ-ಇಂಫಾಲ್ ಮಾರ್ಗವಾಗಿ ಚಲಿಸುತ್ತಿದ್ದ ಏರ್ ಏಷ್ಯಾ ವಿಮಾನದಲ್ಲಿ ಬುಧವಾರ ನವಜಾತ ಶಿಶುವಿನ ಮೃತದೇಹ ಪತ್ತೆಯಾಗಿದೆ.

ವಿಮಾನದ ಶೌಚಾಲಯದಲ್ಲಿ ಶಿಶು ಮೃತದೇಹ ಪತ್ತೆಯಾಗಿದ್ದಾಗಿ ವಿಮಾನ ಸಿಬ್ಬಂದಿ ತಿಳಿಸಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ ಆ ಮಗುವಿನ ಬಾಯಿಗೆ ಟಾಯ್ಲೆಟ್ ಕಾಗದವನ್ನು ತುರುಕಲಾಗಿತ್ತು ಎನ್ನಲಾಗಿದೆ.

ಇದೇ ವಿಮಾನದಲ್ಲಿ ಚಲಿಸುತ್ತಿದ್ದ ಆ ಮಗುವಿನ ತಾಯಿ ಯಾರೆಂಬುದು ಇನ್ನೂ ಪತ್ತೆಯಾಗಿಲ್ಲ. ಪ್ರಾಥಮಿಕ ವರದಿಗಳ ಪ್ರಕಾರ ಇಂಫಾಲ ಮೂಲದ ಅಪ್ರಾಪ್ತೆ ಎಂದು ತಿಳಿದುಬಂದಿದೆ. ಅಲ್ಲದೆ, ವಿಮಾನದಲ್ಲಿಯೇ ಹೆರಿಗೆಯಾಗಿರುವುದಾಗಿ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ. ಈ ಸಂಬಂಧ ದೆಹಲಿ ಪೋಲಿಸ್ ಮತ್ತು ವಿಮಾನ ನಿಲ್ದಾಣ ಭದ್ರತಾ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.

ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.

Trending News