Agriculture Laws - ಕೃಷಿ ಕಾನೂನುಗಳನ್ನು ಮುಕ್ತ ಕಂಠದಿಂದ ಹೊಗಳಿದ IMF...ಹೇಳಿದ್ದೇನು?

International Monetary Fund- ಕೃಷಿ ಕಾನೂನುಗಳನ್ನು ಮುಕ್ತ ಕಂಠದಿಂದ ಶ್ಲಾಘಿಸಿರುವ ಅಂತರರಾಷ್ಟ್ರೀಯ ಹಣಕಾಸು ನಿಧಿ, ಈ ಕಾನೂನುಗಳು ಕೃಷಿ ಕ್ಷೇತ್ರದಲ್ಲಿ ಸುಧಾರಣೆಗಾಗಿ ಮಹತ್ವದ ಹೆಜ್ಜೆಯಾಗಲಿದ್ದು, ಇವುಗಳಿಂದ ರೈತರ ಆದಾಯ ಕೂಡ ಹೆಚ್ಚಾಗಲಿದೆ ಎಂದು ಹೇಳಿದೆ.

Written by - Nitin Tabib | Last Updated : Jan 15, 2021, 12:35 PM IST
  • ಕೃಷಿ ಕಾನೂನುಗಳ ಕುರಿತು ಶ್ಲಾಘನೆ ವ್ಯಕ್ತಪಡಿಸಿದ IMF.
  • ಈ ಕಾನೂನುಗಳಿಂದ ರೈತರ ಆದಾಯ ಹೆಚ್ಚಾಗಲಿದೆ ಎಂದ IMF.
  • ಆದರೆ ಪ್ರಭಾವಿತಕ್ಕೊಳಗಾಗುವರಿಗೆ ಸಾಮಾಜಿಕ ಭದ್ರತೆ ಕಲ್ಪಿಸುವುದು ಕೂಡ ಅವಶ್ಯಕತೆಯಾಗಿದೆ ಎಂದ IMF.
Agriculture Laws - ಕೃಷಿ ಕಾನೂನುಗಳನ್ನು ಮುಕ್ತ ಕಂಠದಿಂದ ಹೊಗಳಿದ IMF...ಹೇಳಿದ್ದೇನು? title=
Agriculture Laws And IMF (File Photo)

International Monetary Fund-ನವದೆಹಲಿ: ನೂತನ ಕೃಷಿ ಕಾನೂನುಗಳ ವಿರುದ್ಧ ರೈತರ ಪ್ರತಿಭಟನೆ 51ನೇ ದಿನಕ್ಕೆ ಕಾಲಿಟ್ಟಿದೆ. ಮುಂದಿನ ಆದೇಶದವರೆಗೆ ಕಾನೂನುಗಳ ಅನುಷ್ಠಾನ ಬೇಡ ಎಂದು  ಸುಪ್ರೀಂ ಕೋರ್ಟ್ ಕೂಡ ಹೇಳಿದೆ. ಏತನ್ಮಧ್ಯೆ ಅಂತರರಾಷ್ಟ್ರೀಯ ಹಣಕಾಸು ನಿಧಿ (IMF) ಕೃಷಿ ಕಾನೂನುಗಳನ್ನು ಶ್ಲಾಘಿಸಿದೆ ಮತ್ತು ಕೃಷಿ ಸುಧಾರಣೆಗೆ ನಿಟ್ಟಿನಲ್ಲಿ ಇದೊಂದು ಮಹತ್ವದ ಹೆಜ್ಜೆಯಾಗಿದೆ ಎಂದು ಹೇಳಿದೆ. 

ಕೃಷಿ ಕ್ಷೇತ್ರದ ಸುಧಾರಣೆಯಲ್ಲಿ ಮಹತ್ವದ ಹೆಜ್ಜೆ
ವಾಷಿಂಗ್ಟನ್ ನಲ್ಲಿ ನಡೆದ ಒಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಅಂತರರಾಷ್ಟ್ರೀಯ ಹಣಕಾಸು ನಿಧಿಯ ಸಂವಹನ ನಿರ್ದೇಶಕ ಗೇರಿ ರೈಸ್ , 'ಭಾರತ ಸರ್ಕಾರವು ಅಂಗೀಕರಿಸಿದ ಕೃಷಿ ಕಾನೂನುಗಳು ಕೃಷಿ ಸುಧಾರಣೆ ನಿಟ್ಟಿನಲ್ಲಿ ಒಂದು ಪ್ರಮುಖ ಹೆಜ್ಜೆಯನ್ನು ಪ್ರತಿನಿಧಿಸುವ ಸಾಮರ್ಥ್ಯವನ್ನು ಹೊಂದಿವೆ ಎಂದು ನಾವು ನಂಬುತ್ತೇವೆ. ಆದರೆ, ಹೊಸ ವ್ಯವಸ್ಥೆಯಿಂದ ಪ್ರಭಾವಿತರಾಗುವವರಿಗೆ ಸಾಮಾಜಿಕ ಭದ್ರತೆಯನ್ನು ಬಲಪಡಿಸುವ ಅವಶ್ಯಕತೆ ಇದೆ' ಎಂದು ಹೇಳಿದ್ದಾರೆ.

ಇದನ್ನು ಓದಿ-ಕೃಷಿ ಕಾನೂನುಗಳ ಕುರಿತಾದ ಸುಪ್ರೀಂ ಸಮಿತಿಯಿಂದ ಹೊರಬಂದ ಭೂಪಿಂದರ್ ಸಿಂಗ್ ಮಾನ್ ಹೇಳಿದ್ದೇನು?

ಹೆಚ್ಚು ಆದಾಯ ಗಳಿಸಲು ರೈತರಿಗೆ ನೆರವಾಗಲಿವೆ
'ಈ ಕಾನೂನು ರೈತರಿಗೆ ಹೆಚ್ಚಿನ ಆದಾಯ ಗಳಿಸಲು ಸಹಾಯ ಮಾಡಲಿವೆ ಮತ್ತು ಮಾರಾಟಗಾರರೊಂದಿಗೆ ನೇರವಾಗಿ ಒಪ್ಪಂದ ಮಾಡಿಕೊಳ್ಳುವಲ್ಲಿ ಮಧ್ಯವರ್ತಿಗಳ ಪಾತ್ರವನ್ನು ಕಡಿಮೆ ಮಾಡಲಿವೆ. . ಇದಲ್ಲದೆ, ಹೊಸ ಕಾನೂನುಗಳು ದಕ್ಷತೆ ಮತ್ತು ಗ್ರಾಮೀಣಾಭಿವೃದ್ಧಿಯಲ್ಲಿಯೂ ಕೂಡ ಪರಿಣಾಮಕಾರಿ ಎಂದು ಸಾಬೀತಾಗಲಿವೆ' ಎಂದು ರೈಸ್ ಹೇಳಿದ್ದಾರೆ.

ಇದನ್ನು ಓದಿ-Breaking - ವಿವಾದಿತ Agriculture laws ತಡೆ ಹಿಡಿದ ಸುಪ್ರೀಂಕೋರ್ಟ್

ಪ್ರಭಾವಕ್ಕೆ ಒಳಗಾದವರಿಗೆ ಸುರಕ್ಷತೆ ಒದಗಿಸಬೇಕು
ಭಾರತದಲ್ಲಿ ಕೃಷಿ ಕಾನೂನುಗಳ (Agriculture Laws) ವಿರುದ್ಧ ನಡೆಯುತ್ತಿರುವ ಹೋರಾಟದ ಕುರಿತಾದ ಪ್ರಶ್ನೆಗೆ ಉತ್ತರಿಸಿರುವ ಅಂತರರಾಷ್ಟ್ರೀಯ ಹಣಕಾಸು ನಿಧಿಯ ವಕ್ತಾರ, 'ನೂನತ ವ್ಯವಸ್ಥೆಯ ಅನುಷ್ಠಾನದಿಂದ ಪ್ರಭಾವಿತಕ್ಕೊಳಗಾಗುವವರಿಗೆ ಸಾಕಷ್ಟು ಸಾಮಾಜಿಕ ಭದ್ರತೆ ಒದಗಿಸುವುದು ಆವಶ್ಯಕವಾಗಿದೆ' ಎಂದು ಹೇಳಿದ್ದಾರೆ. ನೂತನ ವ್ಯವಸ್ಥೆ ಜಾರಿಗೆ ಬರುವುದರಿಂದ ಪೀಡಿತಕ್ಕೆ ಒಳಗಾಗುವವರಿಗೆ ಉದ್ಯೋಗ ಖಾತರಿಪಡಿಸುವ ಮೂಲಕ ಇದನ್ನು ಸರಿಪಡಿಸಬಹುದು ಎಂದು ವಕ್ತಾರರು ಹೇಳಿದ್ದಾರೆ.

ಇದನ್ನು ಓದಿ-Farmers Protest: 'ಕೃಷಿ ಕಾನೂನುಗಳಿಗೆ ನೀವು ತಡೆ ನೀಡದಿದ್ದರೆ, ಆ ಕೆಲಸ ನಾವು ಮಾಡಬೇಕಾದೀತು'

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News