NEET 2021: ವರ್ಷದಲ್ಲಿ ಒಂದೇ ಬಾರಿ ನಡೆಯಲಿದೆ NEET, ಶೀಘ್ರವೇ NTA ನಿಂದ ಡೇಟ್ ಶೀಟ್ ಬಿಡುಗಡೆ

NEET 2021: ಇನ್ಮುಂದೆ ವರ್ಷದಲ್ಲಿ ಒಂದೇ ಬಾರಿಗೆ NEET ಪರೀಕ್ಷೆಗಳು ನಡೆಯಲಿವೆ. ವರ್ಷದಲ್ಲಿ ಎರಡು ಬಾರಿ ಪರೀಕ್ಷೆಗಳನ್ನು ನಡೆಸುವ ಎಲ್ಲಾ ರೀತಿಯ ಊಹಾಪೋಹಗಳನ್ನು National Testing Agency ಡಿಜಿ ವಿನೀತಾ ಜೋಶಿ ಅಲ್ಲಗಳೆದಿದ್ದಾರೆ.

Written by - Nitin Tabib | Last Updated : Mar 12, 2021, 08:35 PM IST
  • ವರ್ಷದಲ್ಲಿ ಒಂದೇ ಬಾರಿಗೆ NEET 2021 ಪರೀಕ್ಷೆ.
  • National Testing Agency ಡಿಜಿ ವಿನೀತಾ ಜೋಶಿ ಸ್ಪಷ್ಟನೆ.
  • ಈ ಕುರಿತಾದ ಊಹಾಪೋಹಗಳನ್ನು ಅಲ್ಲಗಳೆದ DG.
NEET 2021: ವರ್ಷದಲ್ಲಿ ಒಂದೇ ಬಾರಿ ನಡೆಯಲಿದೆ NEET, ಶೀಘ್ರವೇ NTA ನಿಂದ ಡೇಟ್ ಶೀಟ್ ಬಿಡುಗಡೆ title=
NEET 2021 Exam (File Photo)

NEET 2021: ವರ್ಷದಲ್ಲಿ ಒಂದೇ ಬಾರಿಗೆ NEET ಪರೀಕ್ಷೆಗಳು ನಡೆಯಲಿವೆ. ವರ್ಷದಲ್ಲಿ ಎರಡು ಬಾರಿ ಪರೀಕ್ಷೆಗಳನ್ನು ನಡೆಸುವ ಎಲ್ಲಾ ರೀತಿಯ ಊಹಾಪೋಹಗಳನ್ನು National Testing Agency ಡಿಜಿ ವಿನೀತಾ ಜೋಶಿ ಅಲ್ಲಗಳೆದಿದ್ದಾರೆ. ವೈದ್ಯಕೀಯ ಕೋರ್ಸ್ಗಳ ಪ್ರವೇಶಕ್ಕಾಗಿ ವರ್ಷದಲ್ಲಿ ಒಂದೇ ಬಾರಿಗೆ ಪರೀಕ್ಷೆಗಳನ್ನು ಆಯೋಜಿಸಲಾಗುವುದು. ಶೀಘ್ರದಲ್ಲಿಯೇ NEET UG 2021 ಪರೀಕ್ಷೆಗಳ ವೇಳಾಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ವಿನೀತಾ ಜೋಶಿ ಹೇಳಿದ್ದಾರೆ.

ವರ್ಷದಲ್ಲಿ ಎರಡು ಬಾರಿ ಪರೀಕ್ಷೆ ಆಯೋಜಿಸಲಾಗುವುದಿಲ್ಲ
ಇಂಡಿಯನ್ ಎಕ್ಸ್ ಪ್ರೆಸ್ ನಲ್ಲಿ ಪ್ರಕಟಗೊಂಡ ವರದಿಯ ಪ್ರಕಾರ, ಶಿಕ್ಷಣ ಸಚಿವ ರಮೇಶ್ ಪೋಕರಿಯಾಲ್ ನಿಶಾಂಕ್ JEE MAIN ಪರೀಕ್ಷೆಗಳನ್ನು ವರ್ಷದಲ್ಲಿ ನಾಲ್ಕು ಬಾರಿ ಆಯೋಜಿಸುವ ಕುರಿತು ಘೋಷಣೆ ಮಾಡಿದ ಬಳಿಕ, NEET ಕುರಿತು ಊಹಾಪೋಹಗಳು ಸೃಷ್ಟಿಯಾಗಿದ್ದು, ಕೊವಿಡ್ 19 ಮಹಾಮಾರಿಯ ಹಿನ್ನೆಲೆ ಪರಿಸ್ಥಿತಿಯನ್ನು ಗಮನಿಸಿ ಪರೀಕ್ಷೆಗಳನ್ನು ಒಂದಕ್ಕಿಂತ ಹೆಚ್ಚು ಬಾರಿ ನಡೆಸಲು ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಬೇಡಿಕೆ ಇಟ್ಟಿದ್ದರು. ಇನ್ನೊಂದೆಡೆ ಜನವರಿಯಲ್ಲಿ ಈ ಕುರಿತು ಹೇಳಿಕೆ ನೀಡಿದ್ದ ಕೇಂದ್ರ ಶಿಕ್ಷಣ ಸಚಿವರು ಕೂಡ NEET 2021 ಗಾಗಿ ಅಧಿಕ ಆಂತರಿಕ ಆಯ್ಕೆ ಪ್ರಶ್ನೆಗಳನ್ನು (more internal choice questions) ನೀಡುವ ಸಂಕೇತ ನೀಡಿದ್ದರು. ಆದರೆ, ಸಿಲೆಬಸ್ ನಲ್ಲಿ ಯಾವುದೇ ರೀತಿಯ ಕಡಿತ ಮಾಡಲಾಗುವುದಿಲ್ಲ ಎಂದು ಹೇಳಿದ್ದರು. 

ಇದನ್ನೂ ಓದಿ-JEE Main 2021: ಪರೀಕ್ಷೆಯ ಅಧಿಸೂಚನೆಯನ್ನು ಅಧಿಕೃತ ವೆಬ್ ಸೈಟ್ ನಿಂದ ತೆಗೆದುಹಾಕಿದ NTA, ಕಾರಣ ಇಲ್ಲಿದೆ

NEET 2021ಗಾಗಿ ಅರ್ಜಿ ಆಹ್ವಾನ ಯಾವಾಗ?
ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (NTA) MBBS ಹಾಗೂ BDS ಸೇರಿದಂತೆ ವಿವಿಧ ಅಂಡರ್ ಗ್ರ್ಯಾಜ್ಯುಯೇಟ್ ಕೋರ್ಸ್ ಗಳ ಪ್ರವೇಶಕ್ಕಾಗಿ NEET ಪರೀಕ್ಷೆ ಆಯೋಜಿಸುತ್ತದೆ. NEET 2021ರ ದಿನಾಂಕಗಳ ಘೋಷಣೆಯಾದ ಬಳಿಕ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು. ಆನ್ಲೈನ್ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಹಾಗೂ ನೀಟ್ ಅಧಿಕೃತ ವೆಬ್ ಸೈಟ್ ವಿಳಾಸಗಳು ಈ ಕೆಳಗಿನಂತಿವೆ.

ಇದನ್ನೂ ಓದಿ-JEE NEET ಪರೀಕ್ಷೆಯಲ್ಲಿ ಮಹತ್ವದ ಬದಲಾವಣೆಗೆ ಮುಂದಾದ ಮೋದಿ ಸರ್ಕಾರ

NEET 2021ಗೆ ಆನ್ಲೈನ್ ನಲ್ಲಿ ಹೇಗೆ ಅರ್ಜಿ ಸಲ್ಲಿಸಬೇಕು
-ಅಧಿಕೃತ ವೆಬ್ ಸೈಟ್ ntaneet.nic.in ಗೆ ಭೇಟಿ ನೀಡಿ.
-ರಿಜಿಸ್ಟ್ರೇಶನ್ ಲಿಂಕ್ ಮೇಲೆ ಕ್ಲಿಕ್ಕಿಸಿ.
- ಅಲ್ಲಿ ಕೇಳಲಾಗಿರುವ ಡಿಟೇಲ್ಸ್ ಭರ್ತಿ ಮಾಡಿ ಹಾಗೂ ಲಾಗ್ ಇನ್ ಕ್ರೆಡೆನ್ಸಿಯಲ್ ಜನರೆತ್ ಮಾಡಿ.
-NEET 2021 ಅಪ್ಪ್ಲಿಕೆಶನ್ ಫಾರ್ಮ್ ಭರ್ತಿ ಮಾಡಲು ಲಾಗಿನ್ ಆಗಿ.
- ಅರ್ಜಿ ಶುಲ್ಕ ಪಾವತಿಸಿ, ಫಾರ್ಮ್ ಸಬ್ಮಿಟ್ ಮಾಡಿ.

ಇದನ್ನೂ ಓದಿ - NEET, JEE Main 2021 Syllabus Change! NTA ಗೆ ಶಿಕ್ಷಣ ಸಚಿವಾಲಯ ನೀಡಿದೆ ಈ ಗೈಡ್ ಲೈನ್ಸ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News