2022 ರ ಜಿ-20 ಶೃಂಗಸಭೆಗೆ ಭಾರತದ್ದೇ ಆತಿಥ್ಯ- ಪ್ರಧಾನಿ ಮೋದಿ

ಭಾರತವು 2022 ರಲ್ಲಿ ಜಿ-20 ಶೃಂಗಸಭೆಯನ್ನು ಆಯೋಜಿಸಲಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.ಅದೇ ವರ್ಷ ಭಾರತ ತನ್ನ 75 ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿರುವುದರಿಂದ ಜಿ ಶೃಂಗಸಭೆಯನ್ನು ಭಾರತಕ್ಕೆ ಆಯೋಜಿಸಿಸುವ ಅವಕಾಶ ನೀಡಬೇಕೆಂದು ಪ್ರಧಾನಿ ವಿನಂತಿಸಿಕೊಂಡಿದ್ದರು.

Last Updated : Dec 2, 2018, 10:23 AM IST
2022 ರ ಜಿ-20 ಶೃಂಗಸಭೆಗೆ ಭಾರತದ್ದೇ ಆತಿಥ್ಯ- ಪ್ರಧಾನಿ ಮೋದಿ   title=

ನವದೆಹಲಿ: ಭಾರತವು 2022 ರಲ್ಲಿ ಜಿ-20 ಶೃಂಗಸಭೆಯನ್ನು ಆಯೋಜಿಸಲಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.ಅದೇ ವರ್ಷ ಭಾರತ ತನ್ನ 75 ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿರುವುದರಿಂದ ಜಿ ಶೃಂಗಸಭೆಯನ್ನು ಭಾರತಕ್ಕೆ ಆಯೋಜಿಸಿಸುವ ಅವಕಾಶ ನೀಡಬೇಕೆಂದು ಪ್ರಧಾನಿ ವಿನಂತಿಸಿಕೊಂಡಿದ್ದರು.

ಈಗ ಈ ಕುರಿತಾಗಿ ಟ್ವೀಟ್ ಮಾಡಿರುವ  ಪ್ರಧಾನಿ ಮೋದಿ "2022 ರಲ್ಲಿ ಭಾರತ ಸ್ವಾತಂತ್ರ್ಯಕ್ಕೆ 75 ವರ್ಷಗಳು ತುಂಬಲಿವೆ ಆದ್ದರಿಂದ ಆ ವಿಶೇಷ ವರ್ಷದಲ್ಲಿ, ಭಾರತವು G-20 ಶೃಂಗಸಭೆಗೆ ಜಗತ್ತನ್ನು ಸ್ವಾಗತಿಸಲು ಎದುರು ನೋಡುತ್ತಿದೆ! ವಿಶ್ವದಲ್ಲಿ ವೇಗವಾಗಿ ಬೆಳೆಯುತ್ತಿರುವ ಬೃಹತ್ ಆರ್ಥಿಕತೆಯಾದ ಭಾರತಕ್ಕೆ ಬನ್ನಿ! ಭಾರತದ ಶ್ರೀಮಂತ ಇತಿಹಾಸ ಮತ್ತು ವೈವಿಧ್ಯತೆಯನ್ನು ತಿಳಿಯಿರಿ ಮತ್ತು ಭಾರತೀಯ ಆತಿಥ್ಯವನ್ನು ಅನುಭವಿಸಿರಿ" ಎಂದು ಅವರು ಟ್ವೀಟ್ ಮಾಡಿದ್ದಾರೆ.

ವಿಶೇಷವೆಂದರೆ 2022 ರ ಜಿ-ಶೃಂಗಸಭೆಯನ್ನು ಇಟಲಿ ದೇಶವು ಆಯೋಜಿಸಬೇಕಾಗಿತ್ತು.ಆದರೆ ಆಗ ಭಾರತ ತನ್ನ 75ನೇ ವರ್ಷದ ಸ್ವಾತಂತ್ರ ದಿನಾಚರಣೆಯನ್ನು ಆಚರಿಸಲಿದೆ.ಈ ಹಿನ್ನಲೆಯಲ್ಲಿ  ಭಾರತ ಆ ಶೃಂಗಸಭೆಯನ್ನು ತಾನು ಆಯೋಜಿಸುವುದಾಗಿ ಕೇಳಿಕೊಂಡಿದೆ.

 

Trending News