ನವದೆಹಲಿ: ಮುಂಬರುವ ʼಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ 400ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ ಧನ್ಯವಾದ ಸಲ್ಲಿಸುವ ನಿರ್ಣಯಕ್ಕೆ ಪ್ರಧಾನಿ ಮೋದಿ ಸೋಮವಾರ ಉತ್ತರಿಸಿದರು.
ಚುನಾವಣೆಗೂ ಮುನ್ನ ಪ್ರಧಾನಿ ಮೋದಿ ವಿಶ್ವಾಸ!
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 370 ಸ್ಥಾನಗಳನ್ನು ಮತ್ತು ಎನ್‌ಡಿಎ 400ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ದೃಢವಾದ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಕಾಂಗ್ರೆಸ್‌ನ ಕುಟುಂಬ ರಾಜಕಾರಣದ ವಿರುದ್ಧ ಹರಿಹಾಯ್ದಿರುವ ಪ್ರಧಾನಿ ಮೋದಿ, ʼದೇಶವು ಕುಟುಂಬವಾದದ ಭಾರವನ್ನು ಹೊತ್ತುಕೊಂಡಿದೆ ಮತ್ತು ಕಾಂಗ್ರೆಸ್ ಕೂಡ ಅದನ್ನು ಅನುಭವಿಸಿದೆ. ಮಲ್ಲಿಕಾರ್ಜುನ್ ಖರ್ಗೆಯವರು ಈ ಸದನದಿಂದ ಆ ಸದನಕ್ಕೆ (ರಾಜ್ಯಸಭೆ) ಮತ್ತು ಗುಲಾಂ ನಬಿ ಆಜಾದ್ ಅವರು ಪಕ್ಷದಿಂದ ಹೊರಗುಳಿದಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ಅವರೆಲ್ಲರೂ ಕುಟುಂಬವಾದದ ಬಲಿಪಶುಗಳಾದರು ಎಂದು ಟೀಕಿಸಿದರು.
ಇದನ್ನೂ ಓದಿ: ಏಕರೂಪ ನಾಗರಿಕ ಸಂಹಿತೆಗೆ ಅಸ್ತು ಎಂದ ಕ್ಯಾಬಿನೆಟ್: ಈ ರಾಜ್ಯದಲ್ಲಿ ಮೊದಲ ಬಾರಿಗೆ ಜಾರಿಯಾಗಲಿದೆ UCC!
ಇಂಡಿಯಾ ಮೈತ್ರಿಕೂಟದ ವಿರುದ್ಧ ಮೋದಿ ವಾಗ್ದಾಳಿ!
#WATCH | PM Modi hails Ayodhya Ram temple in Parliament; The PM also says "The third term of our government is not far now, 100-125 days maximum..." pic.twitter.com/0yGzTheE8m
— ANI (@ANI) February 5, 2024
ʼಈ 75ನೇ ಗಣರಾಜ್ಯೋತ್ಸವ, ಹೊಸ ಸಂಸತ್ತು, ಸೆಂಗೋಲ್ ಇವೆಲ್ಲವೂ ಬಹಳ ಪ್ರಭಾವಶಾಲಿಯಾಗಿದೆ. ನಾವು ಇದನ್ನು ಯಾವಾಗಲೂ ನೆನಪಿಸಿಕೊಳ್ಳುತ್ತೇವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಇದೇ ವೇಳೆ ವಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ, ʼದೀರ್ಘಕಾಲ ವಿರೋಧ ಪಕ್ಷದಲ್ಲಿ ಉಳಿಯುವ ಪ್ರತಿಪಕ್ಷಗಳ ಸಂಕಲ್ಪವನ್ನು ನಾನು ಶ್ಲಾಘಿಸುತ್ತೇನೆ... ಹಲವು ದಶಕಗಳಿಂದ ನೀವು ಇಲ್ಲಿ (ಸರ್ಕಾರದಲ್ಲಿ) ಹೇಗೆ ಕುಳಿತಿದ್ದೀರಿ, ಅದೇ ರೀತಿ ನೀವು ಅಲ್ಲಿ (ವಿಪಕ್ಷದಲ್ಲಿ) ಕುಳಿತುಕೊಳ್ಳಲು ನಿರ್ಧರಿಸುತ್ತೀರಿ. ಈ ದೇಶದ ಜನರು ಖಂಡಿತವಾಗಿಯೂ ನಮಗೆ ಮತ್ತೊಮ್ಮೆ ಆಶೀರ್ವಾದ ನೀಡುತ್ತಾರೆʼ ಎಂದು ಪ್ರಧಾನಿ ಮೋದಿ ೩ನೇ ಬಾರಿಗೆ ಅಧಿಕಾರಕ್ಕೆ ಬರುವ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಚುನಾವಣೆಯಲ್ಲಿ ಸ್ಪರ್ಧಿಸಲು ಧೈರ್ಯವಿಲ್ಲ!
#WATCH | PM Narendra Modi says, "Congress' mindset is that it has never trusted the capability of the country. It considered itself rulers and the public as someone lesser, someone smaller..."
He reads out a statement of the then PM Jawaharlal Nehru, "...It means that Nehru ji… pic.twitter.com/69D6kTgmLO
— ANI (@ANI) February 5, 2024
ʼನಿಮ್ಮಲ್ಲಿ ಅನೇಕರು(ವಿಪಕ್ಷದವರು) ಚುನಾವಣೆಯಲ್ಲಿ ಸ್ಪರ್ಧಿಸುವ ಧೈರ್ಯವನ್ನು ಕಳೆದುಕೊಂಡಿರುವುದನ್ನು ನಾನು ನೋಡುತ್ತಿದ್ದೇನೆ. ಕಳೆದ ಬಾರಿಯೂ ಕೆಲವು ಸ್ಥಾನಗಳನ್ನು ಬದಲಾಯಿಸಲಾಗಿದೆ, ಈ ಬಾರಿಯೂ ಅನೇಕ ಜನರು ತಮ್ಮ ಸ್ಥಾನವನ್ನು ಬದಲಾಯಿಸಲು ಬಯಸುತ್ತಿದ್ದಾರೆ. ಅನೇಕರು ಈಗ ಲೋಕಸಭೆಗೆ ಬದಲಾಗಿ ರಾಜ್ಯಸಭೆಗೆ ಹೋಗಲು ಬಯಸುತ್ತಾರೆಂದು ಕೇಳಿದೆ. ಅವರು ಪರಿಸ್ಥಿತಿಯನ್ನು ನಿರ್ಣಯಿಸುವ ಮೂಲಕ ತಮ್ಮ ಮಾರ್ಗಗಳನ್ನು ಹುಡುಕುತ್ತಿದ್ದಾರೆ. ಚುನಾವಣೆಯಲ್ಲಿ ಸ್ಪರ್ಧಿಸಲು ಅನೇಕರು ಧೈರ್ಯವನ್ನು ಕಳೆದುಕೊಂಡಿದ್ದಾರೆʼ ಎಂದು ಪ್ರಧಾನಿ ಮೋದಿ ಕುಟುಕಿದ್ದಾರೆ.
ಇದನ್ನೂ ಓದಿ: Hindu Mythology: ಕೃಷ್ಣನ ಸಾವು ಮತ್ತು ದ್ವಾರಕೆಯ ನಾಶ..! ಆ ತಾಯಿಯ ಕಣ್ಣೀರೇ ಕಾರಣ..
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.