ಪ್ರಧಾನಿ ಮೋದಿಗೆ ಬಿಜೆಪಿಯ ಮುರಳಿ ಮನೋಹರ್ ಜೋಷಿ ನೇತೃತ್ವದ ಸಮಿತಿಯಿಂದ ಚಿಮಾರಿ!

 ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರ "ಚೌಕಿದಾರ್-ಚೋರ್-ಹೈ" ಆರೋಪವನ್ನು ಎದುರಿಸುತ್ತಿರುವ ಸಮಯದಲ್ಲಿಯೇ ಈಗ ಸಂಸದೀಯ ಸಮಿತಿಯು ಚಿಮಾರಿ ಹಾಕಿದೆ.

Last Updated : Sep 24, 2018, 07:44 PM IST
ಪ್ರಧಾನಿ ಮೋದಿಗೆ ಬಿಜೆಪಿಯ ಮುರಳಿ ಮನೋಹರ್ ಜೋಷಿ ನೇತೃತ್ವದ ಸಮಿತಿಯಿಂದ ಚಿಮಾರಿ!  title=

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರ "ಚೌಕಿದಾರ್-ಚೋರ್-ಹೈ" ಆರೋಪವನ್ನು ಎದುರಿಸುತ್ತಿರುವ ಸಮಯದಲ್ಲಿಯೇ ಈಗ ಸಂಸದೀಯ ಸಮಿತಿಯು ಚಿಮಾರಿ ಹಾಕಿದೆ.

ಬಿಜೆಪಿ ಹಿರಿಯ ಮುಖಂಡ ಮುರಳಿ ಮನೋಹರ್ ಜೋಶಿ ನೇತೃತ್ವದ ಸಂಸತ್ತಿನ ಅಂದಾಜು ಸಮಿತಿಯು ಭಾರೀ ಮೊತ್ತವನ್ನು ಸಂಗ್ರಹಿಸಿರುವ ಬೃಹತ್ ಕಾರ್ಪೋರೇಟ್ ಕಂಪನಿಗಳ ಪಟ್ಟಿ ವಿಚಾರವಾಗಿ ಪ್ರಧಾನ ಮಂತ್ರಿ ಕಚೇರಿ ಇದುವರೆಗೆ ಯಾವ ಯಾವ ಕ್ರಮಗಳನ್ನು ತೆಗೆದುಕೊಂಡಿದೆ ಎನ್ನುವುದರ ಬಗ್ಗೆ ಸಂಪೂರ್ಣ ವರದಿಯನ್ನು ಕೇಳಿದೆ.ಆ ಮೂಲಕ ಈಗ ಸರ್ಕಾರವು ಇಕ್ಕಟ್ಟಿಗೆ ಸಿಲುಕಿದಂತಾಗಿದೆ. ಈ ಪಟ್ಟಿಯನ್ನು ಆರ್ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್ ತಮ್ಮ ಅಧಿಕಾರಾವಧಿಯಲ್ಲಿ ಪ್ರಧಾನ ಮಂತ್ರಿ ಕಚೇರಿಗೆ ಸಲ್ಲಿಸಿದ್ದರು.

ಈಗಾಗಲೇ ಜೋಶಿ ನೇತೃತ್ವದ ಸಮಿತಿಯು ಕಲ್ಲಿದ್ದಲು ಮತ್ತು ವಿದ್ಯುತ್ ಸಚಿವರಿಗೆ ನೋಟಿಸ್ಗಳನ್ನು ಕಳುಹಿಸಿದೆ.ಆಯಾ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸದ ಸ್ವತ್ತುಗಳ ಕುರಿತಾಗಿ ವಿವರಣೆಯನ್ನು ಕೇಳಿದೆ.ಮುರಳಿ ಮನೋಹರ್ ಜೋಶಿಯವರು ನರೇಂದ್ರ ಮೋದಿ-ಅಮಿತ್ ಷಾ ಪಕ್ಷದ ಅಧಿಕಾರ ವಹಿಸಿಕೊಂಡ ನಂತರ ಅವರನ್ನು ತೆರೆಬದಿಗೆ ಸರಿಸಲಾಗಿತ್ತು ಅಲ್ಲದೆ ಅವರನ್ನು ಬಿಜೆಪಿಯ ಮಾರ್ಗದರ್ಶಕ ಮಂಡಲಕ್ಕೆ ಸೇರಿಸಲಾಗಿತ್ತು . 

ರಘುರಾಮ್ ರಾಜನ್ ಅವರು ಸಲ್ಲಿಸಿದ ಪಟ್ಟಿಯ ವಿರುದ್ಧ ತನಿಖೆ ಅಥವಾ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದ್ದು, ಕಾರ್ಯನಿರ್ವಹಿಸದ ಸ್ವತ್ತುಗಳ ಸಮಸ್ಯೆಯನ್ನು ಬಗೆಹರಿಸಲು ರಘುರಾಮ್ ರಾಜನ್ ಅವರ ಸಹಾಯವನ್ನು ಅಂದಾಜು ಸಮಿತಿ ಕೇಳಿದೆ.

Trending News