ಭಾರತದಲ್ಲಿ ಮುಂಬೈ ಶ್ರೀಮಂತ ನಗರ, ಜಾಗತಿಕ ಶ್ರೇಯಾಂಕದಲ್ಲಿ 12 ನೇ ಸ್ಥಾನ !

ದೇಶದ ಅತಿ ಶ್ರೀಮಂತ ನಗರಗಳಲ್ಲಿ ದೇಶದ ಆರ್ಥಿಕ ರಾಜಧಾನಿ ಮುಂಬೈ ಪ್ರಥಮ ಸ್ಥಾನ ಗಳಿಸಿದೆ. 

Last Updated : Feb 12, 2018, 10:08 AM IST
  • ಒಟ್ಟು 950 ಬಿಲಿಯನ್ ಡಾಲರ್ ಸಂಪತ್ತಿನೊಂದಿಗೆ, ಮುಂಬೈ ಜಾಗತಿಕ ಮಟ್ಟದಲ್ಲಿ ಅಗ್ರ 15 ನಗರಗಳಲ್ಲಿ ಒಂದಾಗಿದೆ.
  • ಅತಿಹೆಚ್ಚು ಬಿಲಿಯನೇರ್ ಗಳಿರುವ ಟಾಪ್ 10 ನಗರಗಳಲ್ಲಿ ಮುಂಬೈ ಸಹ ಸ್ಥಾನ ಪಡೆಡಿದೆ.
  • ಇದು ವಿಶ್ವದ 12ನೇ ಅತಿ ದೊಡ್ಡ ಷೇರು ವಿನಿಮಯ ಕೇಂದ್ರವಾದ ಬಾಂಬೆ ಸ್ಟಾಕ್ ಎಕ್ಸ್ಚೇಂಜ್ (ಬಿಎಸ್ಇ) ಗೆ ನೆಲೆಯಾಗಿದೆ.
ಭಾರತದಲ್ಲಿ ಮುಂಬೈ ಶ್ರೀಮಂತ ನಗರ, ಜಾಗತಿಕ ಶ್ರೇಯಾಂಕದಲ್ಲಿ 12 ನೇ ಸ್ಥಾನ ! title=

ಮುಂಬೈ: ದೇಶದ ಅತಿ ಶ್ರೀಮಂತ ನಗರಗಳಲ್ಲಿ ದೇಶದ ಆರ್ಥಿಕ ರಾಜಧಾನಿ ಮುಂಬೈ ಪ್ರಥಮ ಸ್ಥಾನ ಗಳಿಸಿದೆ. 

ಒಟ್ಟು 950 ಬಿಲಿಯನ್ ಡಾಲರ್ ಸಂಪತ್ತಿನೊಂದಿಗೆ, ಮುಂಬೈ ಜಾಗತಿಕ ಮಟ್ಟದಲ್ಲಿ ಅಗ್ರ 15 ನಗರಗಳಲ್ಲಿ ಒಂದಾಗಿದೆ. ಹಾಗೆಯೇ ಒಟ್ಟು 3 ಟ್ರಿಲಿಯನ್ ಡಾಲರ್ ಸಂಪತ್ತಿನೊಂದಿಗೆ, ಜಾಗತಿಕ ಪಟ್ಟಿಯಲ್ಲಿ ನ್ಯೂಯಾರ್ಕ್ ಅತ್ಯಂತ ಶ್ರೀಮಂತ ನಗರವಾಗಿದೆ.

ನ್ಯೂ ವರ್ಲ್ಡ್ ವೆಲ್ತ್ ವರದಿಯ ಪ್ರಕಾರ, ಭಾರತದ ಆರ್ಥಿಕ ಕೇಂದ್ರವಾಗಿರುವ ಮುಂಬೈ 12 ನೇ ಶ್ರೀಮಂತ ನಗರವಾಗಿದ್ದು, ನಂತರದ ಸ್ಥಾನದಲ್ಲಿ ಟೊರೊಂಟೊ 944 ಬಿಲಿಯನ್ ಡಾಲರ್ ಸಂಪತ್ತು, ಫ್ರಾಂಕ್ಫರ್ಟ್ (14 ನೇ, ಯುಎಸ್ಡಿ 912 ಬಿಲಿಯನ್) ಮತ್ತು ಪ್ಯಾರಿಸ್ (15 ನೇ, ಯುಎಸ್ಡಿ 860 ಬಿಲಿಯನ್) ಇದೆ ಎಂದು ಹೇಳಿದೆ. 

ಒಟ್ಟು ಸಂಪತ್ತು ಪ್ರತಿ ನಗರದಲ್ಲೂ ವಾಸಿಸುವ ಎಲ್ಲಾ ವ್ಯಕ್ತಿಗಳ ಖಾಸಗಿ ಸಂಪತ್ತನ್ನು ಉಲ್ಲೇಖಿಸುತ್ತದೆ. ಅಲ್ಲದೆ, ಇದು ಅವರ ಎಲ್ಲಾ ಆಸ್ತಿ, ನಗದು, ಇಕ್ವಿಟಿಗಳು, ವ್ಯವಹಾರದ ಆಸಕ್ತಿಗಳನ್ನು ಒಳಗೊಂಡಿದೆ. ಆದಾಗ್ಯೂ, ಸರ್ಕಾರದ ಹಣವನ್ನು ಹೊರತುಪಡಿಸಿ ಅಂಕಿ ಅಂಶಗಳನ್ನು ನೀಡಲಾಗಿದೆ. 

ಅತಿಹೆಚ್ಚು ಬಿಲಿಯನೇರ್ ಗಳಿರುವ ಟಾಪ್ 10 ನಗರಗಳಲ್ಲಿ ಮುಂಬೈ ಸಹ ಸ್ಥಾನ ಪಡೆದಿದೆ ಎಂದು ವರದಿ ಹೇಳಿದ್ದು, ಮುಂಬೈ ನಗರವೊಂದರಲ್ಲೀ 28 ಬಿಲಿಯನೇರ್ಗಳಿದ್ದು, ನಿವ್ವಳ ಆಸ್ತಿಯಲ್ಲಿ 1 ಶತಕೋಟಿ ಡಾಲರ್ ಅಥವಾ ಅದಕ್ಕಿಂತ ಹೆಚ್ಚು ಹೊಂದಿರುವ ಜನರಿದ್ದಾರೆ ಎಂದು ತಿಳಿಸಿದೆ. 

"ನಗರದ ಒಟ್ಟು ಸಂಪತ್ತು ಯುಎಸ್ಡಿ 950 ಬಿಲಿಯನ್ ಇದ್ದು, ಮುಂಬೈ ಭಾರತದ ಆರ್ಥಿಕ ಕೇಂದ್ರವಾಗಿದೆ. ಇದು ವಿಶ್ವದ 12 ನೇ ಅತಿ ದೊಡ್ಡ ಷೇರು ವಿನಿಮಯ ಕೇಂದ್ರವಾದ ಬಾಂಬೆ ಸ್ಟಾಕ್ ಎಕ್ಸ್ಚೇಂಜ್ (ಬಿಎಸ್ಇ) ಗೆ ನೆಲೆಯಾಗಿದ್ದು, ಮುಖ್ಯ ಉದ್ಯಮಗಳಾದ ಹಣಕಾಸು ಸೇವೆಗಳು, ರಿಯಲ್ ಎಸ್ಟೇಟ್ ಮತ್ತು ಮಾಧ್ಯಮಗಳನ್ನು ಒಳಗೊಂಡಿದೆ"ಎಂದು ವರದಿ ತಿಳಿಸಿದೆ.

ಮುಂದಿನ 10 ವರ್ಷಗಳಲ್ಲಿ ಸಂಪತ್ತು ಬೆಳವಣಿಗೆಯ ವಿಷಯದಲ್ಲಿ ಮುಂಬೈ ವೇಗವಾಗಿ ಬೆಳೆಯುತ್ತಿರುವ ನಗರವೆಂದು ನಿರೀಕ್ಷಿಸಲಾಗಿದೆ ಎಂದು ವರದಿ ತಿಳಿಸಿದೆ. 

Trending News