ಮುಂಬೈ ಪೋಲಿಸ್ ಸಬ್ ಇನ್ಸ್ಪೆಕ್ಟರ್ ರಿಂದ ಮಹಿಳಾ ಪೇದೆ ಮೇಲೆ ಅತ್ಯಾಚಾರ

ನವಿ ಮುಂಬೈ ಪೊಲೀಸ ಅಪರಾಧ ಶಾಖೆಯ ಸಬ್ ಇನ್ಸ್ಪೆಕ್ಟರ್ ಶನಿವಾರದಂದು ಮಹಿಳಾ ಕಾನ್ಸ್ಟೇಬಲ್ ಅನ್ನು ಅತ್ಯಾಚಾರಗೊಳಿಸಿದ್ದಾನೆಂದು ಬುಧವಾರ ಪ್ರಕರಣ ದಾಖಲಿಸಲಾಗಿದೆ.

Last Updated : Nov 18, 2018, 10:54 AM IST
ಮುಂಬೈ ಪೋಲಿಸ್ ಸಬ್ ಇನ್ಸ್ಪೆಕ್ಟರ್ ರಿಂದ ಮಹಿಳಾ ಪೇದೆ ಮೇಲೆ ಅತ್ಯಾಚಾರ title=

ಮುಂಬೈ: ನವಿ ಮುಂಬೈ ಪೊಲೀಸ ಅಪರಾಧ ಶಾಖೆಯ ಸಬ್ ಇನ್ಸ್ಪೆಕ್ಟರ್ ಶನಿವಾರದಂದು ಮಹಿಳಾ ಕಾನ್ಸ್ಟೇಬಲ್ ಅನ್ನು ಅತ್ಯಾಚಾರಗೊಳಿಸಿದ್ದಾನೆಂದು ಬುಧವಾರ ಪ್ರಕರಣ ದಾಖಲಿಸಲಾಗಿದೆ.

ಶನಿವಾರದಂದು ಸಿಬಿಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು  ಸಬ್ ಇನ್ಸ್ಪೆಕ್ಟರ್ ಅಮಿತ್ ಶಲಾರ್ ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಮಹಿಳಾ ಕಾನ್ಸ್ಟೆಬಲ್ ಗೆ ತಂಪು ಪಾನಿಯದಲ್ಲಿ ಪ್ರಜ್ಞೆ ಹೀನವಾಗುವ ಔಷಧಿ ಮಿಶ್ರಣ ಮಾಡಿ ಅವರನ್ನು ಅತ್ಯಾಚಾರ ಮಾಡಿದ್ದಾನೆ ಎಂದು ಆ ಸಂತ್ರಸ್ತ ಮಹಿಳೆ ದೂರು ನೀಡಿದ್ದಾಳೆ.  

31 ವರ್ಷದ ಮಹಿಳಾ ಪೇದೆ ಹೇಳುವಂತೆ ಅತ್ಯಾಚಾರ ಮಾಡಿರುವುದನ್ನು ರಿಕಾರ್ಡ್ ಮಾಡಿದ್ದು ಇದನ್ನು ಇತರ ಕಡೆ ಶೇರ್ ಮಾಡುವ ಬೆದರಿಕೆಯನ್ನು ಸಹ ಒಡ್ಡಿದ್ದಾನೆ. ಸಬ್ ಇನ್ಸ್ಪೆಕ್ಟರ್ ಸಿಬಿಡಿ, ಪನ್ವೇಲ್, ಕಾಮೋಥೆ ಮತ್ತು ಖರ್ಘರ್ ಮುಂತಾದ ಸ್ಥಳಗಳಲ್ಲಿ  ಹಲವಾರು ಬಾರಿ ಅತ್ಯಾಚಾರ ಮಾಡಿದ್ದಾರೆ ಎಂದು ಆ ಮಹಿಳಾ ಪೋಲಿಸ್ ಪೇದೆ  ಆರೋಪಿಸಿದ್ದಾಳೆ.ಆಕೆಯ ದೂರಿನ ಆಧಾರದ ಮೇಲೆ ಪೊಲೀಸರು ಐಪಿಸಿ ಅಡಿಯಲ್ಲಿ ಅತ್ಯಾಚಾರ ಮತ್ತು ಹಲ್ಲೆಗಾಗಿ ಎಸ್ಸಿ / ಎಸ್ಟಿ (ದೌರ್ಜನ್ಯ ತಡೆಗಟ್ಟುವಿಕೆ) ಕಾಯ್ದೆಯಡಿ ಸಬ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಆದರೆ ಆರೋಪಿಯನ್ನು ಇನ್ನೂ ಬಂಧಿಸಿಲ್ಲ ಎಂದು ತಿಳಿದು ಬಂದಿದೆ.

Trending News