ಮುಂಬೈ: ಬಾಂದ್ರಾ ಬಳಿ ಭಾರೀ ಬೆಂಕಿ ಅವಘಡ

ಬೆಂಕಿಯ ತೀವ್ರತೆ ಹೆಚ್ಚಾಗಿರುವ ಕಾರಣದಿಂದ ಕಪ್ಪು ಮತ್ತು ಬೂದು ಬಣ್ಣದ ದಟ್ಟವಾದ ಹೊಗೆ ಎಲ್ಲೆಡೆ ಆವರಿಸಿದೆ.

Last Updated : Oct 30, 2018, 03:23 PM IST
ಮುಂಬೈ: ಬಾಂದ್ರಾ ಬಳಿ ಭಾರೀ ಬೆಂಕಿ ಅವಘಡ title=
Photo: ANI

ಮುಂಬೈ: ಇಲ್ಲಿನ ನಗರದಾಸ್ ರಸ್ತೆಯಲ್ಲಿರುವ ಬಾಂದ್ರಾ ಫೈರ್ ಸ್ಟೇಶನ್ ಬಳಿಯಿರುವ ನರ್ಗೀಸ್ ದತ್ ನಗರದ ಸ್ಲಂ ನಲ್ಲಿ ಮಂಗಳವಾರ ಭಾರೀ ಬೆಂಕಿ ಅವಘಡ ಸಂಭವಿಸಿದೆ. 

ಈಗಾಗಲೇ ಸ್ಥಳಕ್ಕೆ 8 ನೀರಿನ ಟ್ಯಾಂಕರ್ಗಳು ಮತ್ತು 9 ಅಗ್ನಿಶಾಮಕ ವಾಹನಗಳು ಧಾವಿಸಿದ್ದು, ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತವಾಗಿವೆ. ವರದಿಗಳ ಪ್ರಕಾರ, ಬೆಳಿಗ್ಗೆ 11.30ರ ಸಮಯದಲ್ಲಿ ಬೆಂಕಿ ಹತ್ತಿಕೊಂಡಿದೆ ಎನ್ನಲಾಗಿದೆ. ಆದರೆ, ಬೆಂಕಿ ಅವಘಡಕ್ಕೆ ಕಾರಣವೇನು ಎಂಬುದು ಇದುವರೆಗೂ ತಿಳಿದು ಬಂದಿಲ್ಲ. ಬೆಂಕಿಯ ತೀವ್ರತೆ ಹೆಚ್ಚಾಗಿರುವ ಕಾರಣದಿಂದ ಕಪ್ಪು ಮತ್ತು ಬೂದು ಬಣ್ಣದ ದಟ್ಟವಾದ ಹೊಗೆ ಎಲ್ಲೆಡೆ ಆವರಿಸಿದೆ. 

ಮುಂಬೈನಲ್ಲಿ ನಿರಂತರವಾಗಿ ಬೆಂಕಿ ಅನಾಹುತಗಳು ಕಾಣಿಸಿಕೊಳ್ಳುತ್ತಿದ್ದು, ಕೆಲ ತಿಂಗಳ ಹಿಂದೆಯಷ್ಟೇ ಬಾಂದ್ರಾ ರೈಲ್ವೆ ನಿಲ್ದಾಣದ ಬಳಿ ಭಾರಿ ಬೆಂಕಿ ಅನಾಹುತ ಸಂಭವಿಸಿ, ಸ್ಥಳಿಯರನ್ನು ಬೆಚ್ಚಿ ಬೀಳಿಸಿತ್ತು

Trending News