Worlds Largest Zoo - ವಿಶ್ವದ ಅತಿ ದೊಡ್ಡ ಮೃಗಾಲಯ ತೆರೆಯಲು ಮುಂದಾದ Mukesh Ambani

 Worlds Largest Zoo - ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿ (Mukesh Ambani) ವಿಶ್ವದ ಅತಿದೊಡ್ಡ ಮೃಗಾಲಯ (Zoo) ಒಂದನ್ನು ನಿರ್ಮಿಸುತ್ತಿದ್ದಾರೆ. 

Written by - Nitin Tabib | Last Updated : Feb 21, 2021, 08:33 PM IST
  • ವಿಶ್ವದ ಅತಿ ದೊಡ್ಡ ಮೃಗಾಲಯ ನಿರ್ಮಿಸಲು ಹೊರಟ ಮುಕೇಶ್ ಅಂಬಾನಿ
  • ತವರು ರಾಜ್ಯದಲ್ಲಿ ತಲೆ ಎತ್ತಲಿದೆ ಈ ಮೃಗಾಲಯ.
  • 2023 ರಲ್ಲಿ ಪೂರ್ಣಗೊಳ್ಳಲಿದೆ ಎಂದು ನಿರೀಕ್ಷೆ ವ್ಯಕ್ತಪಡಿಸಲಾಗುತ್ತಿದೆ
Worlds Largest Zoo - ವಿಶ್ವದ ಅತಿ ದೊಡ್ಡ ಮೃಗಾಲಯ ತೆರೆಯಲು ಮುಂದಾದ Mukesh Ambani title=
Worlds Largest Zoo (File Zoo)

ನವದೆಹಲಿ :  Worlds Largest Zoo - ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿ (Mukesh Ambani) ವಿಶ್ವದ ಅತಿದೊಡ್ಡ ಮೃಗಾಲಯ (Zoo) ಒಂದನ್ನು ನಿರ್ಮಿಸುತ್ತಿದ್ದಾರೆ. ಬ್ಲೂಮ್‌ಬರ್ಗ್ (Bloomberg) ವರದಿಯ ಪ್ರಕಾರ, ಮೃಗಾಲಯವನ್ನು ಅಂಬಾನಿ ತನ್ನ ತವರು ರಾಜ್ಯವಾದ ಗುಜರಾತ್‌ನಲ್ಲಿ (Gujarat) ನಿರ್ಮಿಸುತ್ತಿದ್ದು, ಅಲ್ಲಿ ಅವರ ಗುಂಪು ಅತಿದೊಡ್ಡ ತೈಲ ಸಂಸ್ಕರಣಾ ಸಂಕೀರ್ಣವನ್ನು ನಿರ್ವಹಿಸುತ್ತಿದೆ. ರಿಲಯನ್ಸ್‌ನ (Reliance) ಕಾರ್ಪೊರೇಟ್ ವ್ಯವಹಾರಗಳ ನಿರ್ದೇಶಕ ಪರಿಮಲ್ ನಾಥ್ವಾನಿ ಅವರ ಪ್ರಕಾರ, ಇದು 2023 ರಲ್ಲಿ ತೆರೆಯುವ ನಿರೀಕ್ಷೆಯಿದೆ. ಮತ್ತು ಇದು ಸ್ಥಳೀಯ ಸರ್ಕಾರಕ್ಕೆ ಸಹಾಯ ಮಾಡುವ ರಕ್ಷಣಾ ಕೇಂದ್ರವನ್ನೂ ಒಳಗೊಂಡಿರುತ್ತದೆ.

ಇದನ್ನೂ ಓದಿ-20 ವರ್ಷಗಳಲ್ಲಿ ಭಾರತ ವಿಶ್ವದ 3 ನೇ ಅತಿದೊಡ್ಡ ಆರ್ಥಿಕತೆಯಾಗಲಿದೆ- ಮುಖೇಶ್ ಅಂಬಾನಿ

ಟೆಕ್ ನಿಂದ ಇ-ಕಾಮರ್ಸ್ ವರೆಗೆ ವ್ಯವಹಾರ
ವರದಿಯ ಪ್ರಕಾರ, ರಿಲಯನ್ಸ್‌ನ ಪ್ರತಿನಿಧಿಯೊಬ್ಬರು ಯೋಜನೆಗೆ ತಗಲುವ ವೆಚ್ಚ ಅಥವಾ ಇತರ ವಿವರಗಳನ್ನು ನೀಡಲು ನಿರಾಕರಿಸಿದ್ದಾರೆ. ಅಂಬಾನಿಗಳು   80 ಬಿಲಿಯನ್ ನಿವ್ವಳ ಮೌಲ್ಯಮೌಲ್ಯದ ಆಸ್ತಿ ಹೊಂದಿದ್ದಾರೆ. ಇದರಲ್ಲಿ ಟೆಕ್ ನಿಂದ ಇ-ಕಾಮರ್ಸ್ ವಲಯದವರೆಗಿನ ಎಲ್ಲ ವ್ಯವಹಾರಗಳು ಶಾಮೀಲಾಗಿವೆ. ಮತ್ತೊಂದೆಡೆ, ಅವರು ಐಪಿಎಲ್ನಲ್ಲಿ ಆಡುತ್ತಿರುವ ಮುಂಬೈ ಇಂಡಿಯನ್ಸ್ ಕ್ರಿಕೆಟ್ ತಂಡವನ್ನು ಹೊಂದಿದ್ದಾರೆ ಮತ್ತು 2014 ರಲ್ಲಿ ಸಾಕರ್ ಲೀಗ್ ಅನ್ನು ಸಹ ಪ್ರಾರಂಭಿಸಿದ್ದಾರೆ. ಹೆಚ್ಚುತ್ತಿರುವ ಕುಟುಂಬ ಸಂಪತ್ತಿನೊಂದಿಗೆ, ಅವರು ಸಾರ್ವಜನಿಕ ಉದ್ಯಮಗಳತ್ತ ತಮ್ಮ ಗಮನವನ್ನು ಕೇಂದ್ರೀಕರಿಸಿದ್ದಾರೆ. ಮುಖೇಶ್ ಅಂಬಾನಿ (Mukesh Ambani) ಅವರ ಪತ್ನಿ ನೀತಾ ಅಂಬಾನಿ ಅವರು 2019 ರಲ್ಲಿ ನ್ಯೂಯಾರ್ಕ್ ಮೆಟ್ರೋಪಾಲಿಟನ್ ಮ್ಯೂಸಿಯಂ ಆಫ್ ಆರ್ಟ್ ಮಂಡಳಿಗೆ ಸೇರಿದ್ದಾರೆ.

ಇದನ್ನೂ ಓದಿ-Jeff Bezos Reclaim World Richest Title - ವಿಶ್ವದ ಟಾಪ್ 10 ಧಣಿಗಳ ಪಟ್ಟಿಯಿಂದ Mukesh Ambani ಔಟ್, ನಂ.1 ಧಣಿ ಯಾರು ?

ಕೋಟ್ಯಾಧಿಪತಿಗಳು ಯಾಕೆ ಈ ರೀತಿಯ ಯೋಜನೆಗಳಲ್ಲಿ ಹೂಡಿಕೆ ಮಾಡುತ್ತಾರೆ
Campden Wealth ನಲ್ಲಿ ಸಂಶೋಧನಾ ನಿರ್ದೇಶಕಿಯಾಗಿರುವ ರೆಬೆಕಾ ಗೂಚ್ (Rebecca Gooch), ಅವರು ಕಲ್ಪನೆಯನ್ನು ವಾಸ್ತವಕ್ಕೆ ತಿರುಗಿಸುವ ಆರ್ಥಿಕ ಶಕ್ತಿಯನ್ನು ಹೊಂದಿದ್ದಾರೆ ಎಂದು ಹೇಳಿದ್ದಾರೆ. ಕೋಟ್ಯಾಧಿಪತಿಗಳು ಇಂತಹ ಯೋಜನೆಗಳಿಗೆ ಹಣವನ್ನು ಏಕೆ ಹೂಡಿಕೆ ಮಾಡುತ್ತಾರೆ ಎಂಬುದಕ್ಕೆ ವಿವರಣೆ ನೀಡಿರುವ ಅವರು,  ಸಾರ್ವಜನಿಕ ಸ್ಥಳಗಳಲ್ಲಿ ಹೂಡಿಕೆ ಮಾಡುವುದು ಕುಟುಂಬ ಮತ್ತು ಕಂಪನಿಯ ಪ್ರತಿಷ್ಠೆ ಸುಧಾರಿಸಲು ಸಹಾಯ ಮಾಡುತ್ತದೆ, ಇದು ಲಾಭವನ್ನು ಕಡಿಮೆ ಮಾಡಲು ಮತ್ತು ಹಲವು ಋಣಾತ್ಮಕ  ವಿಷಯಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದ್ದಾರೆ. ಅವರ ಪ್ರಕಾರ, ಇದು ಸಮಾಜದಲ್ಲಿ ವ್ಯಕ್ತಿಯ ಪ್ರತಿಷ್ಠೆಯನ್ನು ಬಲಪಡಿಸುತ್ತದೆ ಮತ್ತು ಭವಿಷ್ಯಕ್ಕಾಗಿ ಕುಟುಂಬದ ಪರಂಪರೆಯನ್ನು ಸ್ಥಾಪಿಸುತ್ತದೆ.

ಇದನ್ನೂ ಓದಿ-'ಅದಾನಿ, ಅಂಬಾನಿಯಂತಹ ಬಂಡವಾಳಶಾಹಿಗಳಿಗೆ ಈ ಕಾಯಿದೆಗಳನ್ನು ಜಾರಿಗೆ ತಂದಿದೆಯೇ ಹೊರತು ರೈತರಿಗಲ್ಲ'

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News