ಇಂಡಿಯನ್ ಪ್ರೀಮಿಯರ್ ಲೀಗ್ 2022ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ನಿರಾಶಾದಾಯಕ ಪ್ರದರ್ಶನ ನೀಡಿ ಹೊರಬಿದ್ದಿದೆ. ಮೊದಲ ಕೆಲ ಆಟಗಳಲ್ಲಿ ರವೀಂದ್ರ ಜಡೇಜಾ ನಾಯಕತ್ವ ವಹಿಸಿದರೆ, ಆ ಬಳಿಕ ಎಂ.ಎಸ್ ಧೋನಿ ಪಟ್ಟವನ್ನು ಕೈಗೆತ್ತಿಕೊಂಡರು. ಆದರೂ ಟೂರ್ನಿಯಲ್ಲಿ ನಿರೀಕ್ಷಿತ ಫಲ ದೊರಕಲಿಲ್ಲ. ಸಿಎಸ್‌ಕೆ ತಂಡವು ಪಾಯಿಂಟ್ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿತ್ತು.
ಇನ್ನು ಎಂ.ಎಸ್ ಧೋನಿ ಜಾರ್ಖಂಡ್‌ನ ರಾಜಧಾನಿ ರಾಂಚಿ ಮೂಲದವರು. ಪ್ರಸ್ತುತ ಜಾರ್ಖಂಡ್‌ನಲ್ಲಿ ಪಂಚಾಯತ್ ಚುನಾವಣೆಗಳು ನಡೆಯುತ್ತಿವೆ. ಇಲ್ಲಿನ ಚುನಾವಣಾ ಕರ್ತವ್ಯದಲ್ಲಿ ಧೋನಿ ಭಾಗಿಯಾಗಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಇದಕ್ಕೆ ಪೂರಕ ಎಂಬಂತೆ ಸಾಮಾಜಿಕ ಜಾಲತಾಣದಲ್ಲಿ ಫೋಟೋವೊಂದು ಸಖತ್ ವೈರಲ್ ಆಗುತ್ತಿದೆ. ಅದರಲ್ಲಿ ಒಬ್ಬ ವ್ಯಕ್ತಿ ಧೋನಿಯಂತೆ ಕಾಣುತ್ತಿದ್ದು, ಅಭಿಮಾನಿಗಳು ಅದು ಧೋನಿಯೇ ಎಂದು ಹೇಳುತ್ತಿದ್ದಾರೆ. ಆದರೆ ಸಂಪೂರ್ಣ ಸತ್ಯಾಂಶ ಇಲ್ಲಿದೆ.
ಇದನ್ನು ಓದಿ: RCB vs RR : ಆರ್‌ಸಿಬಿ ಸೋಲಿಗೆ ಕಾರಣನಾದ ಈ ಆಟಗಾರ, ರನ್ ಗಳಿಸಲಿಲ್ಲ, ಕ್ಯಾಚ್ ಹಿಡಿಯಲಿಲ್ಲ!
ವೈರಲ್ ಆದ ಫೋಟೋದ ಅಸಲಿಯತ್ತು:
ಚುನಾವಣಾ ಕರ್ತವ್ಯದಲ್ಲಿ ಎಂಎಸ್ ಧೋನಿ ನಿರತರಾಗಿದ್ದಾರೆ ಎಂದು ಹೇಳುವ ಫೋಟೋ ಎಲ್ಲೆಡೆ ವೈರಲ್ ಆಗಿದೆ. ಆದರೆ ಆ ಫೋಟೋದಲ್ಲಿ ಕಾಣುವ ವ್ಯಕ್ತಿ ಧೋನಿ ಅಲ್ಲ. ಇವರ ಹೆಸರು ವಿವೇಕ್ ಕುಮಾರ್. ಸಿಸಿಎಲ್ ವಿಭಾಗದಲ್ಲಿ ಸಹಾಯಕ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಚುನಾವಣಾ ಕರ್ತವ್ಯದಲ್ಲಿ ನಿರತರಾಗಿರುವ ಅವರು ಮತ ಎಣಿಕೆ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರು ನೋಡಲು ಧೋನಿಯಂತೆಯೇ ಇದ್ದು, ಇವರ ಫೋಟೋವನ್ನು ಯಾರೋ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಇದನ್ನು ಕಂಡ ಅಭಿಮಾನಿಗಳು ಕೊಂಚ ಗೊಂದಲಗೊಂಡು, ಧೋನಿ ಐಪಿಎಲ್ ಬಳಿಕ ಚುನಾವಣೆ ಡ್ಯೂಟಿಯಲ್ಲಿ ಭಾಗಿಯಗಿದ್ದಾರೆಯೇ ಎಂದು ಪ್ರಶ್ನಿಸುತ್ತಿದ್ದಾರೆ.
ಇದನ್ನು ಓದಿ: ಸೋಲಿನ ನಡುವೆಯೂ ದಾಖಲೆ ನಿರ್ಮಿಸಿದ ಆರ್ಸಿಬಿ ಬೌಲರ್ ಮೊಹಮ್ಮದ್ ಸಿರಾಜ್..!
ಐಪಿಎಲ್-2023ರಲ್ಲೂ ಧೋನಿ ಆಡಲಿದ್ದಾರೆ:
ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ 2022ರಲ್ಲಿ ರಾಜಸ್ಥಾನ ವಿರುದ್ಧ ಕೊನೆಯ ಪಂದ್ಯವನ್ನು ಆಡಿತ್ತು. ಈ ಪಂದ್ಯದ ಬಳಿಕ ಮಾತನಾಡಿದ ಧೋನಿ, "ಇದು ನನ್ನ ಕೊನೆಯ ಪಂದ್ಯವಲ್ಲ. ಐಪಿಎಲ್‌ನಲ್ಲಿ ಮತ್ತಷ್ಟು ಆಡಲಿದ್ದೇನೆ" ಎಂದು ಹೇಳಿದ್ದರು. ಈ ಮೂಲಕ ಕ್ಯಾಪ್ಟನ್ ಕೂಲ್ ಆಟವನ್ನು ಮತ್ತೆ ನೋಡುವ ಅವಕಾಶ ಅಭಿಮಾನಿಗಳಿಗೆ ಒದಗಿ ಬರಲಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.