ಜಬಲ್ಪುರ್: ಕಾಂಗ್ರೆಸ್ ಶಾಸಕರ 17ರ ಹರೆಯದ ಪುತ್ರನೊಬ್ಬ ಗುಂಡು ಹಾರಿಸಿಕೊಂಡು ಆತ್ಮಹತ್ಯೆ(MLA Son Suicide) ಮಾಡಿಕೊಂಡಿಕೊಂಡಿರುವ ಘಟನೆ ಮಧ್ಯಪ್ರದೇಶದ ಜಬಲ್ಪುರದಲ್ಲಿ ನಡೆದಿದೆ. ಜಬಲ್ಪುರ ಜಿಲ್ಲೆಯ ಗ್ರಾಮಾಂತರ ಪ್ರದೇಶದಲ್ಲಿರುವ ಬಾರ್ಗಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಸಂಜಯ್ ಯಾದವ್(MLA Sanjay Yadav) ಅವರ ಪುತ್ರ ವೈಭವ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.
ವೈಭವ್ ಜಬಲ್ಪುರ(Jabalpur Congress MLA)ದಲ್ಲಿ ತನ್ನ ತಂದೆಯ ಪರವಾನಗಿ ಪಡೆದ ರಿವಾಲ್ವರ್ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತನ ಡೇತ್ ನೋಟ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಅದರಲ್ಲಿತನ್ನ ಸಾವಿಗೆ ತಾನೇ ಕಾರಣ ಎಂದು ಬರೆದಿದ್ದಾನೆ.
ಇದನ್ನೂ ಓದಿ: ಏನಿದು ನೊರೊವೈರಸ್? ಇದರ ಬಗ್ಗೆ ನಿಮಗೆಷ್ಟು ಗೊತ್ತು?
ದ್ವಿತೀಯ ಪಿಯುಸಿ ಓದುತ್ತಿದ್ದ ವೈಭವ್ ಜಬಲ್ಪುರ ಪಟ್ಟಣದ ಗೋರಖ್ಪುರ ಪ್ರದೇಶ(Gorakhpur Area Madhya Pradesh)ದಲ್ಲಿನ ಅವರ ಮನೆಯಲ್ಲಿತನ್ನ ತಂದೆಗೆ ಸೇರಿದ ರಿವಾಲ್ವರ್ನೊಂದಿಗೆ ತಲೆಗೆ ಗುಂಡು ಹಾರಿಸಿಕೊಂಡಿದ್ದಾನೆ. ಸ್ನಾನದ ಕೋಣೆಗೆ ಹೋಗಿ ಈ ರೀತಿ ಮಾಡಿಕೊಂಡಿದ್ದಾನೆ. ಗುಂಡಿನ ಶಬ್ದ ಕೇಳುತ್ತಲೇ ಧಾವಿಸಿದ ಕುಟುಂಬಸ್ಥರು ಕೂಡಲೇ ಆತನನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಿದರೂ ಆತ ಅದಾಗಲೇ ಸಾವನ್ನಪ್ಪಿದ್ದ.
ಮೃತ ಯುವಕನ ಮನೆಯಲ್ಲಿ ಡೇತ್ ನೋಟ್(Death Note) ವಶಪಡಿಸಿಕೊಳ್ಳಲಾಗಿದೆ. ವೈಭವ್ ಆತ್ಮಹತ್ಯೆಗೆ ಯಾರನ್ನೂ ದೂಷಿಸಿಲ್ಲ ಮತ್ತು ಆತ್ಮಹತ್ಯೆಗೆ ಯಾವುದೇ ನಿರ್ದಿಷ್ಟ ಕಾರಣವನ್ನು ಉಲ್ಲೇಖಿಸಿಲ್ಲವೆಂದು ಜಬಲ್ಪುರದ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಸಿದ್ಧಾರ್ಥ್ ಬಹುಗುಣ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ತನ್ನೆಲ್ಲಾ ಸ್ನೇಹಿತರಿಗೆ ಕರೆ ಮಾಡಿದ್ದ ವೈಭವ್ ಇಷ್ಟು ದಿನ ತನ್ನ ಜೊತೆಗೆ ಸಮಯ ಕಳೆದಿದ್ದಕ್ಕೆ ಹಾಗೂ ತನ್ನ ಸ್ನೇಹಿತರಾಗಿರುವುದಕ್ಕೆ ಧನ್ಯವಾದ ಹೇಳಿದ್ದಾನೆ. ಕೊನೆಗೆ ನನ್ನ ಸಾವಿಗೆ ನಾನೇ ಕಾರಣ ಎಂದು ಪತ್ರ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈತನ ಸಾವಿಗೆ ನಿಖರ ಕಾರಣ ಏನೆಂಬುದು ಕುಟುಂಬಸ್ಥರಿಗೂ ತಿಳಿದಿಲ್ಲ.
ಇದನ್ನೂ ಓದಿ: ಈ ಸಾಫ್ಟ್ ವೇರ್ ಇಂಜಿನಿಯರ್ ಭಾನುವಾರ ಟ್ಯಾಕ್ಸಿ ಓಡಿಸುತ್ತಾನೆ!: ಏಕೆ ಗೊತ್ತಾ..?
ಆತ್ಮಹತ್ಯೆ ಮಾಡಿಕೊಂಡಿರುವ ವೈಭವ್ ಗೆ 23 ವರ್ಷದ ಹಿರಿಯ ಸಹೋದರನಿದ್ದಾನೆ. ಆತನ ಆತ್ಮಹತ್ಯೆಗೆ ನಿಖರ ಕಾರಣ ತಿಳಿಯುವ ನಿಟ್ಟಿನಲ್ಲಿ ಪೊಲೀಸರು(Madhya Pradesh Police) ತನಿಖೆ ನಡೆಸುತ್ತಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.