ರಾಹುಲ್ ಗಾಂಧಿ ವಿದೇಶಿ ಮೂಲ ಕೆದಕಿದ ಬಿಎಸ್ಪಿ ನಾಯಕನಿಗೆ ಮಾಯಾವತಿ ಗೇಟ್ ಪಾಸ್!

          

Last Updated : Jul 17, 2018, 01:08 PM IST
ರಾಹುಲ್ ಗಾಂಧಿ ವಿದೇಶಿ ಮೂಲ ಕೆದಕಿದ ಬಿಎಸ್ಪಿ ನಾಯಕನಿಗೆ ಮಾಯಾವತಿ ಗೇಟ್ ಪಾಸ್! title=

ನವದೆಹಲಿ: ರಾಹುಲ್ ಗಾಂಧಿಯವರ ವಿದೇಶಿ ಮೂಲವನ್ನು ಕೆಣಕುತ್ತಾ ಅವರು ಪ್ರಧಾನಿ ಹುದ್ದೆಗೆ ಅನರ್ಹರಾಗಿದ್ದಾರೆ ಎಂದ ಬಿಎಸ್ಪಿ ಮುಖಂಡ ಜೈಪ್ರಕಾಶ್ ಸಿಂಗ್ ರನ್ನು ಮಾಯಾವತಿ ಪಕ್ಷದಿಂದ ಉಚ್ಚಾಟಿಸಿದ್ದಾರೆ.

ಮಂಗಳವಾರ ರಾಜಧಾನಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿಯವರು ತಮ್ಮ ಪಕ್ಷದ ಸಿದ್ಧಾಂತದ ವಿರುದ್ಧ ಮಾತನಾಡಿದ ಸಿಂಗ್ ಅವರ ಭಾಷಣವನ್ನು ಸಹ ಉಲ್ಲೇಖಿಸಿತ್ತಾ ಈ ಕ್ರಮವನ್ನು ಜರುಗಿಸಿದ್ದಾರೆ ಎಂದು ತಿಳಿದುಬಂದಿದೆ.

ಬಿಎಸ್ಪಿ ರಾಷ್ಟ್ರೀಯ ಸಂಯೋಜಕರಾದ ಜೈ ಪ್ರಕಾಶ್ ಸಿಂಗ್ ಅವರ ಭಾಷಣವನ್ನು ಬಿಎಸ್ಪಿ ಸಿದ್ಧಾಂತದ ವಿರುದ್ಧ ಮಾತನಾಡಿದ್ದಾರೆ ಅಲ್ಲದೆ, ಪ್ರತಿಸ್ಪರ್ಧಿ ಪಕ್ಷಗಳ ನಾಯಕತ್ವದ ವಿರುದ್ಧ ವೈಯಕ್ತಿಕ ಟೀಕೆಗಳನ್ನು ಮಾಡಿದ್ದಾರೆ.ಇದು ಅವರ ವೈಯಕ್ತಿಕ ಅಭಿಪ್ರಾಯವಾಗಿದೆ.ಆದ್ದರಿಂದ ಅವರನ್ನು ಪಕ್ಷದ ಹುದ್ದೆಯಿಂದ ತೆಗೆಯಲಾಗುವುದು ಎಂದು  ತಿಳಿಸಿದ್ದಾರೆ.

ಅಲ್ಲದೆ ಇದೇ ರೀತಿಯ ತಪ್ಪುಗಳನ್ನು ಮಾಡುವ ಪಕ್ಷದ ಕಾರ್ಯಕರ್ತರಿಗೆ ಎಚ್ಚರಿಕೆಯನ್ನು ನೀಡಿದ್ದಾರೆ . ಈ ರೀತಿಯ ಹೇಳಿಕೆಗಳ ಬದಲಾಗಿ ಪಕ್ಷದ  ಕಾರ್ಯಕರ್ತರು ಪಕ್ಷದ ಸಿದ್ಧಾಂತ ಮತ್ತು ಈ ಹಿಂದೆ ಲಕ್ಷಾಂತರ ಜನರಿಗೆ ಸ್ಫೂರ್ತಿ ನೀಡಿದ ಹಿರಿಯ ನಾಯಕರ ಬಗ್ಗೆ ಮಾತ್ರ ಮಾತನಾಡಲು ಸಲಹೆ ನೀಡಿದರು.

ಇನ್ನು ಮುಂದೆ ಬಿಎಸ್ಪಿಯ ಪ್ರತಿಯೊಂದು ಮುಖಂಡರು ತಮ್ಮ ಅಭಿಪ್ರಾಯಗಳನ್ನು ಸಾರ್ವಜನಿಕವಾಗಿ ಯಾವುದೇ ಭಾಷಣವನ್ನು ನೀಡುವ ಮೊದಲು ಕಾಗದದ ಮೇಲೆ ಬರೆಯಬೇಕು ಎಂದು  ಮಾಯಾವತಿಯವರು ಸೂಚಿಸಿದರು.

Trending News