2019 ರ ಲೋಕಸಭಾ ಚುನಾವಣೆಗೂ ಮುನ್ನ ಟ್ವಿಟ್ಟರ್ ಖಾತೆ ತೆರೆದ ಮಾಯಾವತಿ

 2019ರ ಲೋಕಸಭಾ ಚುನಾವಣೆಗೂ ಮುನ್ನ ಬಿಎಸ್ಪಿ ನಾಯಕಿ ಮಾಯಾವತಿ ಈಗ ಟ್ವಿಟ್ಟರ್ ಖಾತೆಯನ್ನು ತೆರೆದಿದ್ದಾರೆ.

Last Updated : Feb 6, 2019, 11:44 AM IST
2019 ರ ಲೋಕಸಭಾ ಚುನಾವಣೆಗೂ ಮುನ್ನ ಟ್ವಿಟ್ಟರ್ ಖಾತೆ ತೆರೆದ ಮಾಯಾವತಿ title=

ನವದೆಹಲಿ:  2019ರ ಲೋಕಸಭಾ ಚುನಾವಣೆಗೂ ಮುನ್ನ ಬಿಎಸ್ಪಿ ನಾಯಕಿ ಮಾಯಾವತಿ ಈಗ ಟ್ವಿಟ್ಟರ್ ಖಾತೆಯನ್ನು ತೆರೆದಿದ್ದಾರೆ.

ಖಾತೆ ತೆರೆದ ತಮ್ಮ ಟ್ವೀಟ್ ನಲ್ಲಿ "ಗೌರವಾನ್ವಿತ ಮಾಧ್ಯಮ ಸ್ನೇಹಿತರೆ, ನಿಮಗೆ ತಿಳಿಸುವುದೇನೆಂದರೆ ಬಿಎಸ್ಪಿ ರಾಷ್ಟ್ರೀಯ ಅಧ್ಯಕ್ಷೆ ಹಾಗೂ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿಯವರು ರಾಷ್ಟ್ರೀಯ ಹಾಗೂ ರಾಜಕೀಯವಾಗಿ ಪ್ರಮುಖ ವಿಷಯಗಳ ವಿಚಾರವಾಗಿ ಜನಸಾಮಾನ್ಯರನ್ನು ಹಾಗೂ ಮಾಧ್ಯಮವನ್ನು ತಲುಪಲು ಅಧಿಕೃತವಾಗಿ ಟ್ವಿಟ್ಟರ್ ಗೆ ಪ್ರವೇಶಿಸಿದ್ದಾರೆ".@SushriMayawati ಅವರ ಟ್ವಿಟ್ಟರ್ ಖಾತೆ ಎಂದು ಪತ್ರಿಕಾ ಪ್ರಕಟಣೆ ಹೊರಡಿಸಲಾಗಿದೆ.

ವಿಶೇಷವೆಂದರೆ ಈ ಟ್ವಿಟ್ಟರ್ ಜೊತೆಗೆ ಅವರು sushrimayawati .in ಎನ್ನುವ ವೆಬ್ ಸೈಟ್ ನ್ನು ಕೂಡ ಹೊಂದಿದ್ದಾರೆ. ಈ ಹಿಂದೆ ಹಲವು ಬಾರಿ ಪಕ್ಷದ ಹೆಸರಿನಲ್ಲಿ ಹಲವು ಖಾತೆಗಳು ತೆರೆದಿದ್ದವು ಆದರೆ ಪಕ್ಷ ಹೇಳುವಂತೆ ಯಾವುದೇ ರೀತಿಯ ಅಧಿಕೃತ ಖಾತೆಯನ್ನು ಹೊಂದಿಲ್ಲ ಎಂದು ತಿಳಿಸಿತ್ತು .2017 ರಲ್ಲಿ  ಬಿಎಸ್ಪಿ ರಾಮ್ ಅವತಾರ್ ಮಿತ್ತಲ್ ಅವರು  ಮಾಯವತಿ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿಸಿದ ವಿಚಾರವಾಗಿ ಪೊಲೀಸರಿಗೆ ದೂರು ನೀಡಿದ್ದರು.

ಈಗ ಮುಂಬರುವ ಲೋಕಸಭಾ ಚುನಾವಣೆಗೂ ಮುನ್ನ ಮಾಯಾವತಿಯವರು ಟ್ವಿಟ್ಟರ್ ಗೆ ಪ್ರವೇಶ ಪಡೆದಿರುವುದು ಈಗ ಮಹತ್ವ ಪಡೆದಿದೆ.

Trending News