ಮನೋಹರ್ ಪರಿಕರ್ ಗೋವಾ ಸಿಎಂ ಆಗಿ ಮುಂದುವರೆಯಲಿದ್ದಾರೆ-ಅಮಿತ್ ಶಾ

ಕ್ಯಾನ್ಸರ್ ಕಾಯಿಲೆಗೆ ತುತ್ತಾಗಿರುವ ಮನೋಹರ್ ಪರಿಕ್ಕರ್ ಆರೋಗ್ಯದ ದೃಷ್ಟಿಯಿಂದ ಗೋವಾದ ಮುಖ್ಯಮಂತ್ರಿಯನ್ನು ಬದಲಿಸುವ ಚರ್ಚೆ ನಡೆದಿತ್ತು ಆದರೆ ಈಗ ಆ ಎಲ್ಲ ವದಂತಿಗಳಿಗೆ ಬಿಜೆಪಿ ರಾಷ್ಟ್ರಾಧ್ಯಕ್ಷ  ಅಮಿತ್ ಶಾ ತೆರೆ ಎಳೆದಿದ್ದಾರೆ. ಪರಿಕರ್ ಅವರೇ ಗೋವಾ ಸಿಎಂ ಆಗಿ ಮುಂದುವರೆಯಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

Last Updated : Sep 23, 2018, 06:03 PM IST
ಮನೋಹರ್ ಪರಿಕರ್ ಗೋವಾ ಸಿಎಂ ಆಗಿ ಮುಂದುವರೆಯಲಿದ್ದಾರೆ-ಅಮಿತ್ ಶಾ  title=

ನವದೆಹಲಿ: ಕ್ಯಾನ್ಸರ್ ಕಾಯಿಲೆಗೆ ತುತ್ತಾಗಿರುವ ಮನೋಹರ್ ಪರಿಕ್ಕರ್ ಆರೋಗ್ಯದ ದೃಷ್ಟಿಯಿಂದ ಗೋವಾದ ಮುಖ್ಯಮಂತ್ರಿಯನ್ನು ಬದಲಿಸುವ ಚರ್ಚೆ ನಡೆದಿತ್ತು ಆದರೆ ಈಗ ಆ ಎಲ್ಲ ವದಂತಿಗಳಿಗೆ ಬಿಜೆಪಿ ರಾಷ್ಟ್ರಾಧ್ಯಕ್ಷ  ಅಮಿತ್ ಶಾ ತೆರೆ ಎಳೆದಿದ್ದಾರೆ. ಪರಿಕರ್ ಅವರೇ ಗೋವಾ ಸಿಎಂ ಆಗಿ ಮುಂದುವರೆಯಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಈಗ ಟ್ವೀಟ್ ಮಾಡಿರುವ  ಅಮಿತ್ ಶಾ" ಗೋವಾದಲ್ಲಿನ ಪಕ್ಷದ ಕೋರ್ ಟೀಮ್ ಜೊತೆ ಚರ್ಚಿಸಿ ಮನೋಹರ್ ಪರಿಕರ್ ಅವರನ್ನೇ ಸರ್ಕಾರ ನಡೆಸಲು ನಿರ್ಧರಿಸಲಾಗಿದೆ.ಆದರೆ ಹಲವಾರು ವಿಭಾಗಗಳಲ್ಲಿ ಮತ್ತು ಕ್ಯಾಬಿನೆಟ್ ನಲ್ಲಿ  ಬದಲಾವಣೆ ತರಲಾಗುವುದು ಎಂದು ಅವರು ಟ್ವೀಟ್ ಮೂಲಕ ಸ್ಪಷ್ಟಪಡಿಸಿದ್ದಾರೆ. 

ಇನ್ನೊಂದೆಡೆ ಗೋವಾ ಕಾಂಗ್ರೆಸ್ ರಾಜ್ಯಪಾಲರಿಗೆ  ಸದನವನ್ನು ವಿಸರ್ಜಿಸುವ ಬದಲು ತಮಗೆ ಸರ್ಕಾರ ರಚಿಸಲು ಅವಕಾಶ ನೀಡಿ ಎಂದು ಆಗ್ರಹಿಸಿತ್ತು.ಅಲ್ಲದೆ ಈಗ ಬಿಜೆಪಿಗೆ ಬೆಂಬಲ ನೀಡಿರುವ ಕೆಲವು ಪಕ್ಷಗಳು ತಮ್ಮ ಸಂಪರ್ಕದಲ್ಲಿದ್ದಾರೆ ಎಂದು ಕಾಂಗ್ರೆಸ್ ತಿಳಿಸಿತ್ತು.

Trending News