ಈ ಸೇವೆಗಳಿಗೆ ಕಡ್ಡಾಯವಾಗಿ ಆಧಾರ್ ಲಿಂಕ್ ಮಾಡಿ

ಬ್ಯಾಂಕಿಂಗ್, ಮೊಬೈಲ್ ಸಿಮ್, ಪ್ಯಾನ್ ಕಾರ್ಡ್, ಪಿಪಿಎಫ್ ಹೀಗೆ ಜನಸಾಮಾನ್ಯರು ವ್ಯಾಪಕವಾಗಿ ಬಳಕೆ ಮಾಡುವ ಬಹುತೇಕ ಸೇವೆಗಳಿಗೆ ಕೇಂದ್ರ ಸರ್ಕಾರ ಆಧಾರ್ ನಂಬರ್ ಲಿಂಕ್ ಮಾಡುವುದನ್ನು ಕಡ್ಡಾಯಗೊಳಿಸಿದೆ. 

Last Updated : Dec 7, 2017, 02:40 PM IST
ಈ ಸೇವೆಗಳಿಗೆ ಕಡ್ಡಾಯವಾಗಿ ಆಧಾರ್ ಲಿಂಕ್ ಮಾಡಿ title=

ನವದೆಹಲಿ: ಬ್ಯಾಂಕಿಂಗ್, ಮೊಬೈಲ್ ಸಿಮ್, ಪ್ಯಾನ್ ಕಾರ್ಡ್, ಪಿಪಿಎಫ್ ಹೀಗೆ ಜನಸಾಮಾನ್ಯರು ವ್ಯಾಪಕವಾಗಿ ಬಳಕೆ ಮಾಡುವ ಬಹುತೇಕ ಸೇವೆಗಳಿಗೆ ಕೇಂದ್ರ ಸರ್ಕಾರ ಆಧಾರ್ ನಂಬರ್ ಲಿಂಕ್ ಮಾಡುವುದನ್ನು ಕಡ್ಡಾಯಗೊಳಿಸಿದೆ. 

ಈ ಹಿನ್ನೆಲೆಯಲ್ಲಿ ವಿವಿಧ ಸೇವೆಗಳಿಗೆ ಆಧಾರ್ ಕಾರ್ಡ್ ನ್ನು ಲಿಂಕ್ ಮಾಡುವುದಕ್ಕೆ ವಿಧಿಸಲಾಗಿರುವ ಗಡುವನ್ನು 2018ರ ಮಾರ್ಚ್.31 ರ ರವರೆಗೆ ವಿಸ್ತರಿಸಲಾಗಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ಹೇಳಿದೆ. 

ಹಾಗಾಗಿ ಯಾವ ಯಾವ ಸೇವೆಗಳಿಗೆ ಆಧಾರ್ ಲಿಂಕ್ ಮಾಡುವುದು ಕಡ್ಡಾಯ ಎಂಬುದರ ಸಂಪೂರ್ಣ ವಿವರ ಇಲ್ಲಿದೆ. 

ಬ್ಯಾಂಕ್ ಖಾತೆ: 
ಗ್ರಾಹಕರು ಬ್ಯಾಂಕ್ ಖಾತೆಗಳಿಗೆ ಆಧಾರ್ ಕಾರ್ಡ್ ನ್ನು ಲಿಂಕ್ ಮಾಡುವುದಕ್ಕೆ ಸುಲಭವಾಗಲೆಂದು ಬ್ಯಾಂಕ್ ಗಳಲ್ಲಿ ಆಧಾರ್ ಕೇಂದ್ರಗಳನ್ನು ತೆರೆಯಲಾಗಿದೆ.  ಹಾಗಾಗಿ, ಮೊಬೈಲ್ ಬ್ಯಾಂಕಿಂಗ್, ಇಂಟರ್ ನೆಟ್ ಮೂಲಕವೂ ಸಹ ಬ್ಯಾಂಕ್ ಖಾತೆಗೆ ಆಧಾರ್ ಅನ್ನು ಲಿಂಕ್ ಮಾಡಬಹುದಾಗಿದೆ. 

ಪ್ಯಾನ್ ಕಾರ್ಡ್ 
ನಕಲಿ ಪ್ಯಾನ್ ಕಾರ್ಡ್ಗಳ ಮೂಲಕ ಅಕ್ರಮ ಹಣ ವಹಿವಾಟು ತಡೆಯುವ ಉದ್ದೇಶದಿಂದ ಪ್ಯಾನ್ ಕಾರ್ಡ್ ಗಳಿಗೆ ಆಧಾರ್ ಜೋಡಣೆಯನ್ನು ಕಡ್ಡಾಯಗೊಳಿಸಲಾಗಿದೆ.

 ಪಿಪಿಎಫ್, ಎನ್ಎಸ್ ಸಿ, ಕೆವಿಪಿ, ಪೋಸ್ಟ್ ಆಫೀಸ್
ಪೋಸ್ಟ್ ಆಫೀಸ್ನ ಎಲ್ಲಾ ಠೇವಣಿಗಳಿಗೆ ಪಿಪಿಎಫ್, ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ ಯೋಜನೆ ಮತ್ತು ಕಿಸಾನ್ ವಿಕಾಸ್ ಪತ್ರಗಳಿಗೆ ಬಯೋಮೆಟ್ರಿಕ್ ಗುರುತಿನ ಆಧಾರ್ ಕಡ್ಡಾಯ ಮಾಡಲಾಗಿದೆ. ಹಾಗಾಗಿ ಗ್ರಾಹಕರು ತಮ್ಮ ಅಸ್ತಿತ್ವದಲ್ಲಿರುವ ಠೇವಣಿಗಳಿಗೆ 12-ಅಂಕಿಯ ಆಧಾರ್ ಗುರುತಿನ ಸಂಖ್ಯೆಯನ್ನು ಒದಗಿಸುವುದು ಕಡ್ಡಾಯ.

ಸಾಮಾಜಿಕ ಯೋಜನೆಗಳು 
ಮನ್ರೇಗಾ, ಪಡಿತರ, ಎಲ್ ಪಿಜಿ, ಸೇರಿದಂತೆ ಸುಮಾರು 135 ಸಾಮಾಜಿಕ ಯೋಜನೆಗಳಿದ್ದು ಇವುಗಳ ಫಲಾನುಭವಿಗಳು ತಮ್ಮ ಆಧಾರ್ ಕಾರ್ಡನ್ನು ತಮಗೆ ಸಂಬಂಧಪಟ್ಟ ಯೋಜನೆಗಳಿಗೆ ಜೋಡಣೆ ಮಾಡಬೇಕಿದೆ. 

ಮೊಬೈಲ್ ಸಿಮ್ 
ಮೊಬೈಲ್ ನೊಂದಿಗೆ ಆಧಾರ್ ಕಾರ್ಡ್ ನ್ನು ಜೋಡಣೆ ಮಾಡಲು 2018 ರ ಫೆ.6 ವರೆಗೆ ಕಾಲಾವಕಾಶ ಇದೆ. 

ಮ್ಯುಚುಯಲ್ ಫಂಡ್ಸ್ 
ಮ್ಯುಚ್ಯುಯಲ್ ಫಂಡ್ಸ್ ಗಳಿಗೂ ಸಹ ಆಧಾರ್ ಸಂಖ್ಯೆ ಲಿಂಕ್  ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ.

Trending News