ನಾಯಿಯನ್ನು ಬೈಕ್‌ಗೆ ಕಟ್ಟಿ ಎಳೆದೊಯ್ದ ವ್ಯಕ್ತಿ, ಇಡೀ ಘಟನೆ ಸಿಸಿಟಿವಿಯಲ್ಲಿ ಸೆರೆ

Dog abuse : ವ್ಯಕ್ತಿಯೊಬ್ಬ ನಾಯಿಯನ್ನು ಬೈಕ್‌ಗೆ ಕಟ್ಟಿ ಎಳೆದೊಯ್ಯುತ್ತಿರುವ ವಿಡಿಯೋ ವೈರಲ್ ಆಗಿದೆ. ನಾಯಿ ನಾಲ್ಕೈದು ಮಂದಿಗೆ ಕಚ್ಚಿದೆ ಹಾಗಾಗಿ ಎಲ್ಲೋ ಬಿಟ್ಟು ಬರಲು ಹೋಗುತ್ತಿದ್ದೆ ಎಂದು ವ್ಯಕ್ತಿ ವಿಡಿಯೋದಲ್ಲಿ ಹೇಳುತ್ತಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.

Written by - Chetana Devarmani | Last Updated : Mar 20, 2023, 05:26 PM IST
  • ನಾಯಿಯನ್ನು ಬೈಕ್‌ಗೆ ಕಟ್ಟಿ ಎಳೆದೊಯ್ದ ವ್ಯಕ್ತಿ
  • ಇಡೀ ಘಟನೆ ಸಿಸಿಟಿವಿಯಲ್ಲಿ ಸೆರೆ
  • ಗಾಜಿಯಾಬಾದ್‌ನಲ್ಲಿ ನಡೆದ ಅಮಾನವೀಯ ಘಟನೆ
ನಾಯಿಯನ್ನು ಬೈಕ್‌ಗೆ ಕಟ್ಟಿ ಎಳೆದೊಯ್ದ ವ್ಯಕ್ತಿ, ಇಡೀ ಘಟನೆ ಸಿಸಿಟಿವಿಯಲ್ಲಿ ಸೆರೆ title=
dog

Dog abuse : ಗಾಜಿಯಾಬಾದ್‌ನ ವಿಜಯನಗರ ಪೊಲೀಸ್ ಠಾಣೆಯ ಪ್ರತಾಪ್ ವಿಹಾರ್ ಚೌಕಿ ಬಳಿ ವ್ಯಕ್ತಿಯೊಬ್ಬ ನಾಯಿಯನ್ನು ಬೈಕ್‌ಗೆ ಕಟ್ಟಿ ಎಳೆದೊಯ್ಯುತ್ತಿರುವ ವಿಡಿಯೋ ವೈರಲ್ ಆಗಿದೆ. ಮಾಹಿತಿ ಪಡೆದು ಪ್ರಾಣಿ ಪ್ರೇಮಿ ಸಂಘಟನೆಯ ಕೆಲವರು ಸ್ಥಳಕ್ಕೆ ಆಗಮಿಸಿ ನಾಯಿಯನ್ನು ಎಳೆದುಕೊಂಡು ಹೋಗುತ್ತಿದ್ದ ವ್ಯಕ್ತಿಯನ್ನು ಹಿಡಿದಿದ್ದಾರೆ. ಆದರೆ, ನಾಯಿ ನಾಲ್ಕೈದು ಮಂದಿಗೆ ಕಚ್ಚಿದೆ ಹಾಗಾಗಿ ಎಲ್ಲೋ ಬಿಟ್ಟು ಬರಲು ಹೋಗುತ್ತಿದ್ದೆ ಎಂದು ವ್ಯಕ್ತಿ ವಿಡಿಯೋದಲ್ಲಿ ಹೇಳುತ್ತಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.

ಗಾಜಿಯಾಬಾದ್ ಪೊಲೀಸ್ ಠಾಣೆಯ ವಿಜಯನಗರ ಪ್ರದೇಶದ ಪ್ರತಾಪ್ ವಿಹಾರ್ ಚೌಕಿ ಬಳಿ ನಾಯಿಯನ್ನು ಬೈಕ್‌ಗೆ ಕಟ್ಟಿಕೊಂಡು ಎಳೆದೊಯ್ಯುವ ದೃಶ್ಯ ಸೆರೆಯಾಗಿದೆ. ಸ್ಥಳೀಯರ ಮಾಹಿತಿ ಮೇರೆಗೆ ಪ್ರಾಣಿ ಪ್ರೇಮಿಗಳ ಸಂಘಟನೆಯ ಸದಸ್ಯರು ಕೂಡಲೇ ಸ್ಥಳಕ್ಕೆ ಆಗಮಿ ನಾಯಿಗೆ ಚಿಕಿತ್ಸೆ ನೀಡಲು ಪ್ರಾರಂಭಿಸಿದರು. 

ಇದನ್ನೂ ಓದಿ: ದೆಹಲಿ ತಲುಪಿದ ಲಕ್ಷಾಂತರ ರೈತರು! ರಾಮಲೀಲಾ ಮೈದಾನದಲ್ಲಿ ಇಂದು 'ಮಹಾಪಂಚಾಯತ್'

ಪ್ರತ್ಯಕ್ಷದರ್ಶಿಗಳ ಪ್ರಕಾರ, ಬೈಕ್ ಸವಾರ ನಾಯಿಯನ್ನು ಕಟ್ಟಿ ಒಂದರಿಂದ ಒಂದೂವರೆ ಕಿಲೋಮೀಟರ್ ದೂರಕ್ಕೆ ತಂದಿದ್ದಾನೆ. ಆತನನ್ನು ತಡೆದು ನಿಲ್ಲಿಸಿದಾಗ ಹಲವರಿಗೆ ನಾಯಿ ಕಚ್ಚಿದ್ದು, ‌ಅದಕ್ಕೆ ಬೈಕ್‌ಗೆ ಕಟ್ಟಿ ಎಳೆದುಕೊಂಡು ಹೋಗುತ್ತಿದ್ದ ಎನ್ನಲಾಗಿದೆ. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಪೊಲೀಸರು ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ.

ಪ್ರಾಣಿ ಪ್ರೇಮಿಗಳ ಸಂಘಟನೆಗೆ ಸಂಬಂಧಿಸಿದ ಮಹಿಳೆ ನೀಡಿದ ಮಾಹಿತಿಯಂತೆ, ಸ್ಥಳಕ್ಕಾಗಮಿಸಿ ನೋಡಿದಾಗ ನಾಯಿಯನ್ನು ಎಳೆದುಕೊಂಡು ಹೋಗುತ್ತಿರುವುದು ಕಂಡುಬಂದಿದೆ. ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಲಾಗುತ್ತಿದೆ. ನಾಯಿ ಕಡಿತದಿಂದ ಅನೇಕ ದೊಡ್ಡ ಅಪಘಾತಗಳು ಮತ್ತು ಘಟನೆಗಳು ಮುನ್ನೆಲೆಗೆ ಬಂದಿವೆ. ಮಾತು ಬಾರದ ಯಾವುದೇ ಪ್ರಾಣಿಯನ್ನು ಎಲ್ಲಿಂದಲಾದರೂ ಎಳೆದುಕೊಂಡು ಹೋಗುವ ಘಟನೆಗೆ ಮಾನವೀಯತೆ ಅವಕಾಶ ನೀಡುವುದಿಲ್ಲ ಎಂದಿದ್ದಾರೆ.

ಇದನ್ನೂ ಓದಿ:ಪಾಕ್‌ ಗಡಿ ದಾಟಿ ಭಾರತ ಪ್ರವೇಶಿಸಿದ ಚಿರತೆ..! ಸ್ಥಳಿಯರಿಗೆ ಬಿಎಸ್‌ಎಫ್‌ ಎಚ್ಚರಿಕೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News