Viral Video: ದೂರದರ್ಶನದ ಸಿಗ್ನೇಚರ್ ಟ್ಯೂನ್‌ಗೆ ಬ್ರೇಕ್ ಡ್ಯಾನ್ಸ್ ಮಾಡಿದ ಭೂಪ!

ದೂರದರ್ಶನದ ಸಿಗ್ನೇಚರ್ ಟ್ಯೂನ್‌ಗೆ ಯುವಕನೊಬ್ಬ ಬ್ರೇಕ್ ಡ್ಯಾನ್ಸ್ ಮಾಡಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

Last Updated : Mar 8, 2019, 04:49 PM IST
Viral Video: ದೂರದರ್ಶನದ ಸಿಗ್ನೇಚರ್ ಟ್ಯೂನ್‌ಗೆ ಬ್ರೇಕ್ ಡ್ಯಾನ್ಸ್ ಮಾಡಿದ ಭೂಪ! title=

ನವದೆಹಲಿ: ದೂರದರ್ಶನದ ಸಿಗ್ನೇಚರ್ ಟ್ಯೂನ್ ಎಲ್ಲರಿಗೂ ಚಿರಪರಿಚಿತ. ಆದರೆ ಈ ಟ್ಯೂನ್‌ಗೆ ಯುವಕನೊಬ್ಬ ಡ್ಯಾನ್ಸ್ ಮಾಡಿ ಅಚ್ಚರಿ ಮೂಡಿಸಿದ್ದಾನೆ. ಅದು ಸಾಮಾನ್ಯ ಡ್ಯಾನ್ಸ್ ಅಲ್ಲ, ಬ್ರೇಕ್ ಡ್ಯಾನ್ಸ್!!!

ಹೌದು, ದೂರದರ್ಶನದ ಸಿಗ್ನೇಚರ್ ಟ್ಯೂನ್‌ಗೆ ಯುವಕನೊಬ್ಬ ಬ್ರೇಕ್ ಡ್ಯಾನ್ಸ್ ಮಾಡಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಅಷ್ಟೇ ಅಲ್ಲ, ಸಾಕಷ್ಟು ಲೈಕ್ ಗಳು, ಕಾಮೆಂಟ್ ಗಳನ್ನೂ ಸಹ ಈ ವೀಡಿಯೋ ಗಳಿಸಿದೆ. ಪ್ರಸಿದ್ಧ ವೀಡಿಯೋ ಶೇರಿಂಗ್ ಆಪ್ ಟಿಕ್ ಟಾಕ್'ನಲ್ಲಿ ಮೊದಲು ಶೇರ್ ಆದ ಈ ವೀಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಮಾತ್ರ, ಟ್ವಿಟ್ಟರ್'ನಲ್ಲಿ ಟ್ವೀಟ್ ಮಾಡಿದ ಬಳಿಕ. 

ಈ ವೀಡಿಯೋದಲ್ಲಿ ಡ್ಯಾನ್ಸ್ ಮಾಡುತ್ತಿರುವ ಯುವಕ ವೈಶಾಕ್ ನೈಯರ್ ಎಂದು ಗುರುತಿಸಲಾಗಿದ್ದು, ಆತನ ಡ್ಯಾನ್ಸ್ ಮೆಚ್ಚಿ ನೆಟ್ಟಿಗರು ಭೇಷ್ ಎಂದಿದ್ದಾರೆ. ಈಗಾಗಲೇ ಈ ವೀಡಿಯೋ 2 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದಿದ್ದು, 14 ಸಾವಿರಕ್ಕೂ ಅಧಿಕ ಜನ ಲೈಕ್ ಮಾಡಿದ್ದಾರೆ.

ದೂರದರ್ಶನದ ಪ್ರಧಾನ ನಿರ್ದೇಶಕಿ ಸುಪ್ರಿಯಾ ಸಾಹು ಅವರು ಈ ವೀಡಿಯೋವನ್ನು ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ್ದು, "ನಿಜಕ್ಕೂ ಅದ್ಭುತ, ದೂರದರ್ಶನದ ಐಕಾನಿಕ್ ಟ್ಯೂನ್ ನಂತೆಯೇ ಡ್ಯಾನ್ಸ್ ಕೂಡ ಎನರ್ಜೆಟಿಕ್ ಆಗಿದೆ " ಎಂದು ಪ್ರಶಂಶಿಸಿದ್ದಾರೆ.
 

Trending News