ವಿಚಿತ್ರ ವಂಚನೆ: ದೇವರು ತೀರಿಕೊಂಡಿದ್ದಾನೆಂದು ಹೇಳಿ ದೇವಸ್ಥಾನದ ಜಮೀನು ಕಬಳಿಸಿದ ಭೂಪರು

Land Grabbing Case - ವಿಚಿತ್ರ ವಂಚನೆಯ ಪ್ರಕರಣ- ದೇವರು ಮೊದಲು ತೀರಿಕೊಂಡಿದ್ದಾನೆ ಎಂದು ಘೋಷಿಸಿ ನಂತರ ನಕಲಿ ದಾಖಲೆಗಳನ್ನು ಸೃಷ್ಟಿಸಿ, ದೇವಾಲಯಕ್ಕೆ ಸೇರಿರುವ ಭೂಮಿಯನ್ನು ಕಬಳಿಸಿದ ಪ್ರಕರಣ ಲಖನೌನಿಂದ ವರದಿಯಾಗಿದೆ. ವಿಶೇಷ ಎಂದರೆ, ಈ ದೇವಸ್ಥಾನ 100 ವರ್ಷಗಳ ಇತಿಹಾಸ ಹೊಂದಿದ್ದು, ಸದ್ಯ ಪ್ರಕರಣದಲ್ಲಿ ಉಪಮುಖ್ಯಮಂತ್ರಿಗಳು ತನಿಖೆಗೆ ಆದೇಶಿಸಿದ್ದಾರೆ.

Written by - Nitin Tabib | Last Updated : Feb 16, 2021, 04:32 PM IST
  • ದೇವರನ್ನು ನಿಧನರಾಗಿದ್ದಾರೆ ಎಂದು ಹೇಳಿ ಭೂಮಿ ಕಬಳಿಸಿದ ಭೂಪರು.
  • ಈ ಕುರಿತು ಉಪಮುಖ್ಯಮಂತ್ರಿಗಳಿಗೆ ದೂರು ನೀಡಿದ ದೇವಸ್ಥಾನದ ಟ್ರಸ್ಟ್
  • ಈ ದೇವಸ್ಥಾನ ಸುಮಾರು 100 ವರ್ಷಗಳ ಇತಿಹಾಸ ಹೊಂದಿದೆ.
ವಿಚಿತ್ರ ವಂಚನೆ: ದೇವರು ತೀರಿಕೊಂಡಿದ್ದಾನೆಂದು ಹೇಳಿ ದೇವಸ್ಥಾನದ ಜಮೀನು ಕಬಳಿಸಿದ ಭೂಪರು title=
Land Grabbing Case (Representational Image)

ಲಖನೌ:  Land Grabbing Case - ಉತ್ತರ ಪ್ರದೇಶದ ರಾಜಧಾನಿಯಾದ ಲಕ್ನೋ (Lucknow) ದಿಂದ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಲ್ಲಿ ಭೂ ಕಬಳಿಕೆಯ ಹೆಸರಿನಲ್ಲಿ ದೇವರು ತೀರಿಕೊಂಡಿದ್ದಾನೆ ಎಂದು ಘೋಷಿಸಲಾಗಿದೆ. ದೇವರನ್ನು ಮೊದಲು ಸತ್ತನೆಂದು ಘೋಷಿಸಿ,  ನಂತರ ನಕಲಿ ದಾಖಲೆ ಸೃಷ್ಟಿಸಿ, ದೇವಾಲಯದ ಜಮೀನನ್ನು ಕಬಳಿಸಲಾಗಿದೆ. ಪ್ರಕರಣದಲ್ಲಿ ತನಿಖೆ ನಡೆಸಿದಾಗ, ಈ ಭೂಮಿಯ ಸಂಪೂರ್ಣ ಆಟ ಬೆಳಕಿಗೆ ಬಂದಿದೆ.

ದೇವಸ್ಥಾನದ ಟ್ರಸ್ಟಿ ದೂರಿನ ಮೇರೆಗೆ ಕ್ರಮ - ಯುಪಿ ಡೆಪ್ಯುಟಿ ಸಿಎಮ್ ಅವರಿಂದ ತನಿಖೆಗೆ ಆದೇಶ
ಈ ವಂಚನೆಯ ಪ್ರಕರಣದ ಸುದ್ದಿ ನಾಪತ್ತೆಯಾದ ತಹಸಿಲ್ದಾರ್ ಮೂಲಕ ಕಲೆಕ್ಟರ್ ವರೆಗೆ ತಲುಪಿದೆ. ಆದರೂ ಕೂಡ ಇದರ ತನಿಖೆ ಇನ್ನೂ ಪೂರ್ಣಗೊಂಡಿಲ್ಲ. ಈ ದೇವಸ್ಥಾನದ ಟ್ರುಸ್ಟಿ  2016 ರ ತಹಸೀಲ್ ದಿನಾಚರಣೆಯ ವೇಳೆಯೂ ಕೂಡ ಇದರ ತನಿಖೆಗೆ ವಿನಂತಿಸಿದ್ದರು. ಆದರೂ ಕೂಡಾ ಅಗ ಯಾವುದೇ  ನಿಷ್ಕರ್ಷಕ್ಕೆ ಬರಲಾಗಿರಲಿಲ್ಲ.  ನಂತರ 2018ರಲ್ಲಿ ಈ ಕುರಿತು ದೇವಸ್ಥಾನದ ಟ್ರಸ್ಟ್ ಮಂಡಳಿ ಉತ್ತರ ಪ್ರದೇಶದ (UP) ಉಪಮುಖ್ಯಮಂತ್ರಿ ದಿನೇಶ್ ವರ್ಮಾ ಅವರ ಬಳಿ ತನ್ನ ಫಿರ್ಯಾದನ್ನು ತೆಗೆದುಕೊಂಡು ಹೋಗಿದೆ ಹಾಗೂ ತನ್ನ ವ್ಯಥೆಯನ್ನು ತೊದಿಕೊಂಡಿದೆ. ಇದಾದ ಬಳಿಕ ಉಪಮುಖ್ಯಮಂತ್ರಿಗಳು ಈ ಪ್ರಕರಣದ ತನಿಖೆ ಕೈಗೊಳ್ಳುವಂತೆ ಲಖನೌ (Lucknow) DM ಗೆ ಆದೇಶ ನೀಡಿದ್ದಾರೆ.

ಇನ್ನೂ ನಡೆದಿದೆ ಮತ್ತೊಂದು ಪ್ರಕರಣದ ತನಿಖೆ
ಆಗಿನ ಕಾಲದಲ್ಲಿ ತಹಸಿಲ್ದಾರರಿಗೆ ನೇರವಾಗಿ ಮಧ್ಯಪ್ರವೇಶಿಸಿ ಪಟ್ಟಾ ಮಾಡುವ ಅಧಿಕಾರವಿತ್ತೆ ಅಥವಾ ಇಲ್ಲವೇ? ಎಂಬುದರ ತನಿಖೆ ಇಂದಿಗೂ ಕೂಡ ಮುಂದುವರೆದಿದೆ.

ಶ್ರೀ ಕೃಷ್ಣ ಹಾಗೂ ಶ್ರೀರಾಮನ ಮಂದಿರದ ಹೆಸರಿನಲ್ಲಿದೆ ಭೂಮಿ
ಇಲ್ಲಿ ಮೊದಲು ಕಾನೂನು ದಾಖಲೆಗಳಲ್ಲಿ ಓರ್ವ ಸಾಮಾನ್ಯ ವ್ಯಕ್ತಿಯನ್ನು ಶ್ರೀಕೃಷ್ಣ-ಶ್ರೀ ರಾಮನ ನಕಲಿ ತಂದೆಯನ್ನಾಗಿ ಮಾಡಲಾಯಿತು. ತದನಂತರ ಶ್ರೀಕೃಷ್ಣ - ಶ್ರೀರಾಮ್ ನಿಧನರಾದರು ಎಂದು ತೋರಿಸಲಾಗಿದೆ. ಅದರ ನಂತರ ಭೂಮಿಯ ಮಾಲೀಕತ್ವವನ್ನು ಕಾನೂನುಬದ್ಧವಾಗಿ ನಕಲಿ ತಂದೆಗೆ ನೀಡಲಾಗಿದೆ. ತನಿಖೆಯ ಪ್ರಕಾರ, ದೇವಾಲಯದ ಭೂಮಿ ಶ್ರೀಕೃಷ್ಣ ಮತ್ತು ಶ್ರೀ ರಾಮನ ಹೆಸರಿನಲ್ಲಿತ್ತು. ಅಂದರೆ  ವಾಸ್ತವಿಕವಾಗಿ ಈ ಇಬ್ಬರ ದೇವರ ವಿಗ್ರಹಗಳನ್ನೂ ದಾಖಲೆಗಳಲ್ಲಿ ವ್ಯಕ್ತಿಗಳನ್ನಾಗಿ ಗುರುತಿಸಲಾಗಿದೆ. ಕೆಲವು ಜನರು ಹೇರಾಫೇರಿ ನಡೆಸಿ ಅದೇ ಹೆಸರಿನ ವ್ಯಕ್ತಿಗಳನ್ನು ದಾಖಲೆಗಳಲ್ಲಿ ದಾಖಲಿಸಿದ್ದಾರೆ. ಆಗ  ಬೆಳಕಿಗೆ ಬಂದಿದೆ ಸಂತ್ರಸ್ತ ಈ ದೇವಸ್ಥಾನದ ಟ್ರಸ್ಟ್. ಚಕಬಂದಿಯಲ್ಲಿ ಮಂದಿರದ ವಿಗ್ರಹಗಳ ಹೆಸರಿನ ಮೇಲೆ ದೇವಸ್ಥಾನದ ಜಮೀನಿತ್ತು. ನಂತರ ಅದೇ ಹೆಸರಿನ ನಕಲಿ ದಾಖಲೆಗಳನ್ನು ಸೃಷ್ಟಿಸಿ ವಂಚನೆ ಎಸಗಲಾಗಿದೆ.

ಇದನ್ನೂ ಓದಿ- Bizarre News: ವಿಷಕಾರಿ ಹಾವಿನ ರಕ್ತ ಕುಡಿಯುತ್ತಾರಂತೆ ಈ ದೇಶದ ಜನ, ಸೌಂದರ್ಯ-ಆರೋಗ್ಯಕ್ಕೆ ಸಂಬಂಧಿಸಿದೆ ಈ ವಿಷಯ

ಟ್ರಸ್ಟ್ ವತಿಯಿಂದ ಅರ್ಜಿ ದಾಖಲಿಸಲಾಗಿದೆ
ಈ ಸಂಪೂರ್ಣ ಪ್ರಕರಣ ಯುಪಿಯ ಮೋಹನ್‌ಲಾಲ್‌ಗಂಜ್‌ನ (Mohanlalganj) ಕುಶ್ಮೌರಾ ಹಲುವಾಪುರದದ್ದಾಗಿದೆ. ಇಲ್ಲಿ ದೇವಾಲಯದ ಟ್ರಸ್ಟ್ ಜಮೀನು ಬಗ್ಗೆ ವಿವಾದ ಹುಟ್ಟಿಕೊಂಡಿತು. ಟ್ರಸ್ಟ್ ಸಲ್ಲಿಸಿದ ಅರ್ಜಿಯಲ್ಲಿ, ಮೋಹನ್ ಲಾಲ್ಗಂಜ್, ಖಸರಾ ಸಂಖ್ಯೆ 138, 159 ಮತ್ತು 2161 ರಲ್ಲಿ, ಒಟ್ಟು 0.730 ಹೆಕ್ಟೇರ್ ಜಮೀನನ್ನು ಭಗವಾನ್ ಕೃಷ್ಣರಾಮ್ ಹೆಸರಿನ ವ್ಯಕ್ತಿಯ ಹೆಸರಿನಲ್ಲಿ ದಾಖಲಿಸಲಾಗಿದೆ.

ಇದನ್ನೂ ಓದಿ-Girls To Turn Into Boys: ಈ ಗ್ರಾಮದ ಹುಡುಗಿಯರು ಕ್ರಮೇಣ ಹುಡುಗರಾಗುತ್ತಾರಂತೆ. ಇಲ್ಲಿದೆ ಈ ವಿಶಿಷ್ಠ ಗ್ರಾಮದ ಕಥೆ

100 ವರ್ಷಗಳಷ್ಟು ಹಳೆಯದಾಗಿದೆ ಈ ದೇವಸ್ಥಾನ
ಇಲ್ಲಿ 1397 ಅಡಿ ಭೂಮಿಯನ್ನು ದೇವರ ಹೆಸರಿನಲ್ಲಿ ದಾಖಲಿಸಲಾಗಿತು. 1987 ರಲ್ಲಿ ಚಕಬಂಡಿ ಪ್ರಕ್ರಿಯೆಯ ವೇಳೆ  ಕೃಷ್ಣರಾಮ್ ನಿಧನರಾದರೆಂದು ತೋರಿಸಲಾಗಿದೆ.  ಅವರ ನಕಲಿ ತಂದೆ ಗಯಾ ಪ್ರಸಾದ್ ಅವರನ್ನು ಜಮೀನಿನ ಉತ್ತರಾಧಿಕಾರಿ  ಎಂದು ಘೋಷಿಸಲಾಗಿದೆ.  ನಂತರ ಗಯಾ ಪ್ರಸಾದ್ ಅವರನ್ನು 1991 ರಲ್ಲಿ ಸತ್ತರು ಮತ್ತು ಅವರ ಸಹೋದರರಾದ ರಾಮನಾಥ್ ಮತ್ತು ಹರಿದ್ವಾರ್ ಅವರ ಹೆಸರನ್ನು ವಂಚಿಸಿ ದಾಖಲಿಸಲಾಗಿದೆ. ಈ ವಂಚನೆಯ ಆಧಾರದ ಮೇಲೆ ಭೂಮಿಯನ್ನು ಕಬಳಿಸಲಾಗಿದೆ. ಈ ದೇವಾಲಯವು 100 ವರ್ಷಗಳಷ್ಟು ಹಳೆಯದು ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ-ಎಚ್ಚರಿಕೆ! ವಿಶ್ವದ ಅತ್ಯಂತ ಅಪಶಕುನಿ Mobile Number ಇದು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News