ಲೋಕಸಭಾ ಚುನಾವಣೆ: ಸಮಾಜವಾದಿ ಪಕ್ಷದಿಂದ 4 ಅಭ್ಯರ್ಥಿಗಳ ಘೋಷಣೆ

ಹೊಸದಾಗಿ ಬಿಡುಗಡೆಯಾಗಿರುವ ಪಟ್ಟಿಯಲ್ಲಿ ಕೈರಾನಾ ಕ್ಷೇತ್ರದಿಂದ  ತಬಾಸುಂ ಹಸನ್ ಅವರನ್ನು ಅಭ್ಯರ್ಥಿಯಾಗಿ ಘೋಷಿಸಲಾಗಿದೆ.   

Last Updated : Mar 15, 2019, 04:00 PM IST
ಲೋಕಸಭಾ ಚುನಾವಣೆ: ಸಮಾಜವಾದಿ ಪಕ್ಷದಿಂದ 4 ಅಭ್ಯರ್ಥಿಗಳ ಘೋಷಣೆ   title=
File Image

ಲಕ್ನೋ: ಲೋಕಸಭಾ ಚುನಾವಣೆಗಾಗಿ ಸಮಾಜವಾದಿ ಪಕ್ಷ ಶುಕ್ರವಾರ ಮತ್ತೊಂದು ಪಟ್ಟಿ ಬಿಡುಗಡೆ ಮಾಡಿದ್ದು, ನಾಲ್ಕು ಅಭ್ಯರ್ಥಿಗಳ ಹೆಸರನ್ನು ಘೋಷಿಸಿದೆ. 

ಹೊಸದಾಗಿ ಬಿಡುಗಡೆಯಾಗಿರುವ ಪಟ್ಟಿಯಲ್ಲಿ ಕೈರಾನಾ ಕ್ಷೇತ್ರದಿಂದ  ತಬಾಸುಂ ಹಸನ್ ಅವರನ್ನು ಅಭ್ಯರ್ಥಿಯಾಗಿ ಘೋಷಿಸಲಾಗಿದೆ. ಅದೇ ವೇಳೆ, ಗೊಂಡಾ ಕ್ಷೇತ್ರದಿಂದ ಪಂಡಿತ್ ಸಿಂಗ್, ಬರಾಬಂಕಿ ಕ್ಷೆತ್ರದಿಡ್ನ ರಾಮ್ ಸಾಗರ್ ರಾವತ್, ಸಂಭಾಲ್ ಕ್ಷೇತ್ರದಿಂದ ಶಫಿಕುರ್ ರಹಮಾನ್ ಬರ್ಕ್ ರನ್ನು ಅಭ್ಯರ್ಥಿಗಳಾಗಿ ಘೋಷಿಸಲಾಗಿದೆ.

ಎಸ್​ಪಿ ಬಿಡುಗಡೆ ಮಾಡಿರುವ ಈ ಹೊಸ ಪಟ್ಟಿಯಲ್ಲಿ ಸಮಾಜವಾದಿ ಪಕ್ಷವು ಆರ್ ಎಲ್ ದಿ ಪಕ್ಷದ ತಬಾಸುಂ ಹಸನ್ ಅವರಿಗೆ ಕೈರಾನಾ ಕ್ಷೇತ್ರದ ಟಿಕೆಟ್ ನೀಡಿದೆ.

2018ರ ಮೇ ತಿಂಗಳಲ್ಲಿ ನಡೆದಿದ್ದ ಕೈರನಾ ಲೋಕಸಭಾ ಉಪಚುನಾವಣೆಯಲ್ಲಿ ಆರ್ ಎಲ್ ಡಿ ಪಕ್ಷದ ಅಭ್ಯರ್ಥಿ ತಬಸ್ಸುಮ್ ಹಸ್ಸನ್ ಗೆಲವು ಸಾಧಿಸಿದರು. ರಾಷ್ಟ್ರಿಯ ಲೋಕದಳದ ತಬಸ್ಸುಮ್ ಹಸ್ಸನ್  ಬಿಜೆಪಿ ಅಭ್ಯರ್ಥಿ ಮೃಗಂಕಾ ಸಿಂಗ್ ಅವರನ್ನು ಸುಮಾರು 55 ಸಾವಿರ ಮತಗಳ ಅಂತರದಿಂದ ಸೋಲಿಸಿದ್ದರು. 

ಕೈರಾನಾ ಲೋಕಸಭಾ ಕ್ಷೇತ್ರ ಬಹಳ ವಿಶೇಷ:
ಉತ್ತರ ಪ್ರದೇಶದ 80 ಲೋಕಸಭಾ ಕ್ಷೇತ್ರಗಳಲ್ಲಿ ಕೈರಾನಾ ಲೋಕಸಭಾ ಕ್ಷೇತ್ರವನ್ನು ಪ್ರಮುಖ ಕ್ಷೇತ್ರಗಳಲ್ಲಿ ಒಂದಾಗಿದೆ ಎಂದು ಪರಿಗಣಿಸಲಾಗಿದೆ. . 2014 ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಈ ಸ್ಥಾನವನ್ನು ಆಕ್ರಮಿಸಿತು ಮತ್ತು ಹುಕುಮ್ ಸಿಂಗ್ ಇಲ್ಲಿಂದ ಸಂಸತ್ ಸದಸ್ಯರಾಗಿ ಆಯ್ಕೆಯಾದರು. ಆದರೆ ಸ್ವಲ್ಪ ಸಮಯದ ನಂತರ ಹುಕುಂ ಸಿಂಗ್ ನಿಧನರಾದರು. ನಂತರ ಈ ಕ್ಷೇತ್ರದಲ್ಲಿ ಉಪಚುನಾವಣೆ ನಡೆಯಿತು. ಉಪಚುನಾವಣೆಯಲ್ಲಿ, ಆರ್ ಎಲ್ ಡಿ ಪಕ್ಷದ ಅಭ್ಯರ್ಥಿ ತಬಸ್ಸುಮ್ ಹಸ್ಸನ್ ಜಯಗಳಿಸಿದ್ದಾರೆ. ಅವರು ಬಿಜೆಪಿ ಅಭ್ಯರ್ಥಿ ಮರಿಗಂಕಾ ಸಿಂಗ್ಗೆ ಕಠಿಣ ಹೋರಾಟವನ್ನು ನೀಡಿ, ಚುನಾವಣಾ ಯುದ್ಧವನ್ನು ಗೆದ್ದರು. 2009 ರಲ್ಲಿ ಬಿಎಸ್​ಪಿಯ ಹಸನ್ ಬೇಗಂ ತಬಾಸಮ್, 2004 ರಲ್ಲಿ ಆರ್ಎನ್ಡಿಯ ಅನುರಾಧ ಚೌಧರಿ, 1999 ರಲ್ಲಿ ಆರ್ಎಲ್ಡಿಯ ಅಮೀರ್ ಅಲಮ್,  1998 ರಲ್ಲಿ ಬಿಜೆಪಿಯ ವೀರೇಂದ್ರ ವರ್ಮಾ ಇಲ್ಲಿಂದ ಸಂಸತ್ ಸದಸ್ಯರಾಗಿ ಚುನಾಯಿತರಾದರು.
 

Trending News