ಬಿಕನೇರ್: ಸಂಸದ ಅರ್ಜುನ್ ರಾಮ್ ಮೇಘವಾಲ್ ಅವರ ಪಕ್ಷವಿರೋಧಿ ಚಟುವಟಿಕೆಗಳನ್ನು ವಿರೋಧಿಸಿ ಬಿಜೆಪಿ ಎಂಎಲ್ ಎ ದೇವಿ ಸಿಂಗ್ ಭಾಟಿ ಅವರು ಪಕ್ಷದ ಸದಸ್ಯತ್ವಕ್ಕೆ ಶುಕ್ರವಾರ ರಾಜೀನಾಮೆ ನೀಡಿ ಹೊರನಡೆದಿದ್ದಾರೆ.
ಈ ಬಗ್ಗೆ ಪಕ್ಷದ ನಾಯಕರಿಗೆ ಈಗಾಗಲೇ ವಿವರಿಸಿ ತಿಳಿಸಿರುವುದಾಗಿ ಭಾಟಿ ಹೇಳಿದ್ದಾರೆ.
"ಬಿಕನೇರ್ ಸಂಸದ ಅರ್ಜುನ್ ರಾಮ್ ಮೇಘವಾಲ್ ಅವರ ಪಕ್ಷ ವಿರೋಧಿ ಚಟುವಟಿಕೆಗಳಿಂದಾಗಿ ನಾನು ರಾಜೀನಾಮೆ ನೀಡಿದ್ದೇನೆ. ಈ ಬಗ್ಗೆ ಪಕ್ಷದ ಹಿರಿಯ ನಾಯಕರಿಗೂ ತಿಳಿಸಿದ್ದೇನೆ. ಆದಾಗ್ಯೂ ಅವರು ಅರ್ಜುನ್ ರಾಮ್ ಮೇಘವಾಲ್ ಅವರಿಗೆ ಲೋಕಸಭೆ ಚುನಾವಣೆಗೆ ಟಿಕೆಟ್ ನೀಡಲು ನಿರ್ಧರಿಸಿದ್ದಾರೆ. ಹಾಗಾಗಿ ರಾಜಿನಾಮೆ ನೀಡಿದ್ದೇನೆ" ಎಂದು ದೇವಿ ಸಿಂಗ್ ಭಾಟಿ ಹೇಳಿದ್ದಾರೆ.