Lockdown: ಬ್ಯಾಂಕ್ ಬಡ್ಡಿದರಗಳಲ್ಲಿ ಭಾರಿ ಇಳಿಕೆ, ಹೋಮ್-ಆಟೋ ಲೋನ್ ಗಳೂ ಕೂಡ ಅಗ್ಗ

ಈ ಬ್ಯಾಂಕ್ ನಲ್ಲಿ ಲೋನ್ ಪಡೆದರೆ ನಿಮಗೆ ಅತಿ ಕಡಿಮೆ ಬಡ್ಡಿದರ ಪಾವತಿಸಬೇಕಾಗಲಿದೆ.

Last Updated : Mar 30, 2020, 04:29 PM IST
Lockdown: ಬ್ಯಾಂಕ್ ಬಡ್ಡಿದರಗಳಲ್ಲಿ ಭಾರಿ ಇಳಿಕೆ, ಹೋಮ್-ಆಟೋ ಲೋನ್ ಗಳೂ ಕೂಡ ಅಗ್ಗ title=

ನವದೆಹಲಿ: ಮುಂಬರುವ ದಿನಗಳಲ್ಲಿ ಒಂದು ವೇಳೆ ನೀವು ಯಾವುದೇ ರೀತಿಯ ಗೃಹ ಸಾಲ ಅಥವಾ ವಾಹನ ಸಾಲ ಪಡೆಯಲು ಯೋಜನೆ ರೂಪಿಸುತ್ತಿದ್ದರೆ, ಈ ಸುದ್ದಿ ನಿಮ್ಮ ಪಾಲಿಗೆ ಲಾಭದಾಯಕ ಸಾಬೀತಾಗುವ ಸಾಧ್ಯತೆ ಇದೆ. ಇತ್ತೀಚೆಗಷ್ಟೇ ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ರೆಪೋ ರೇಟ್ ಗಳಲ್ಲಿ ಕಡಿತಗೊಳಿಸಿದೆ. ಈ ಹಿನ್ನೆಲೆಯಲ್ಲಿ ಬ್ಯಾಂಕ್ ಆಫ್ ಬಡೋದಾ ತನ್ನ ಬಡ್ಡಿ ದರಗಳನ್ನು ಕಡಿತಗೊಳಿಸುವ ಘೋಷಣೆ ಮಾಡಿದೆ. ಈ ಬ್ಯಾಂಕ್ ನಿಂದ ಒಂದು ವೇಳೆ ನೀವು ಸಾಲ ಪಡೆದರೆ ನಿಮಗೆ ಅತ್ಯಂತ ಕಡಿಮೆ ಬಡ್ಡಿ ದರ ಪಾವತಿಸಬೇಕಾಗಲಿದೆ.

ಬ್ಯಾಂಕ್ ಬಡ್ಡಿ ದರದಲ್ಲಿ ಶೇ.೦.75 ರಷ್ಟು ಇಳಿಕೆ
ಭಾರತೀಯ ರಿಸರ್ವ ಬ್ಯಾಂಕ್ ನ ಘೋಷಣೆಯ ಬಳಿಕ ಬ್ಯಾಂಕ್ ಆಫ್ ಬರೋಡಾ ಸೋಮವಾರ ತನ್ನ ರೆಪೋ ಲಿಂಕ್ಡ್ ರೇಟ್ ನಲ್ಲಿ 75 ಬೇಸಿಸ್ ಪಾಯಿಂಟ್ ಅಂದರೆ ಶೇ.೦.75ರಷ್ಟು ಇಳಿಕೆ ಮಾಡಿ ಘೋಷಣೆ ಮಾಡಿದೆ. ಈ ಇಳಿಕೆಯಿಂದ ಬ್ಯಾಂಕ್ ನ ಚಿಲ್ಲರೆ ಸಾಲ, ವೈಯಕ್ತಿಕ ಹಾಗೂ ಮೈಕ್ರೋ ಸ್ಮಾಲ್ ಹಾಗೂ ಮೀಡಿಯಂ ಎಂಟರ್ಪ್ರೈಸಿಸ್ ನ ಬಡ್ಡಿದರಗಳನ್ನು ಶೇ.7.25 ಕ್ಕೆ ಇಳಿಕೆ ಮಾಡಿದೆ. ಇದರಿಂದ ಗ್ರಾಹಕರಿಗೆ ನೇರ ಲಾಭ ಸಿಗಲಿದೆ.

ಕಳೆದ ವಾರ ಭಾರತೀಯ ಸ್ಟೇಟ್ ಬ್ಯಾಂಕ್ ಕೂಡ ತನ್ನ ಬಡ್ಡಿದರಗಳಲ್ಲಿ ಇಳಿಕೆ ಮಾಡಿತ್ತು
ದೇಶದ ಸಾರ್ವಜನಿಕ ವಲಯದ ಅತಿ ದೊಡ್ಡ ಬ್ಯಾಂಕ್ ಆಗಿರುವ ಭಾರತೀಯ ಸ್ಟೇಟ್ ಬ್ಯಾಂಕ್ ಕೂಡ ರೆಪೋ ರೇಟ್ ಗೆ ಹೊಂದಿಕೊಂಡಂತೆ ಇರುವ ಸಾಲಗಳ ಬಡ್ಡಿದರಗಳನ್ನು ಶೇ.೦.75 ರಷ್ಟು ಇಳಿಕೆ ಮಾಡಿತ್ತು. SBIನ ಈ ನೂತನ ಬಡ್ಡಿ ದರಗಳು ಏಪ್ರಿಲ್ 1 ರಿಂದ ಜಾರಿಗೆ ಬರಲಿವೆ. ಇನ್ನೊಂದೆಡೆ ಬ್ಯಾಂಕ್ ಆಫ್ ಇಂಡಿಯಾ ಭಾನುವಾರ ತನ್ನ ಮಾರ್ಜಿನಲ್ ಕಾಸ್ಟ್ ಆಫ್ ಫಂಡ್ಸ್ ಲೆಂಡಿಂಗ್ ದರದಲ್ಲಿ ಶೇ.೦.25 ರಷ್ಟು ಇಳಿಕೆ ಮಾಡಿದೆ. ಒಂದು ವರ್ಷದ MCLR ಇದೀಗ ಶೇ.7.95ಕ್ಕೆ ಬಂದು ತಲುಪಿದೆ. ಜೊತೆಗೆ BOI, ತನ್ನ ಏಕ್ಸ್ತರ್ನಲ್ ಬೆಂಚ್ ಮಾರ್ಕ್ ಲೆಂಡಿಂಗ್ ದರವನ್ನು ಕೂಡ 75 ಬೇಸಿಸ್ ಪಾಯಿಂಟ್ ಅಂದರೆ ಶೇ.೦.75 ರಷ್ಟು ಕಡಿಮೆ ಮಾಡಿದೆ. ಇದರಿಂದ EBLR ಶೇ.7.25 ಕ್ಕೆ ಬಂದು ತಲುಪಿದೆ.  ಬ್ಯಾಂಕ್ ನ ಈ ನೂತನ ದರಗಳು ಏಪ್ರಿಲ್ 1ರಿಂದ ಜಾರಿಗೆ ಬರಲಿವೆ.

ಭಾರತದಲ್ಲಿ ಕೊರೊನಾ ವೈರಸ್ ಲಾಕ್ ಡೌನ್ ಬಳಿಕ ಕಳೆದ ವಾರ ಭಾರತೀಯ ರಿಸರ್ವ್ ಬ್ಯಾಂಕ್  ತನ್ನ ರೆಪೋ ರೇಟ್ ಗಳಲ್ಲಿ ಇಳಿಕೆ ಮಾಡಿ ಘೋಷಿಸಿತ್ತು. ಈ ಕುರಿತು ಎಲ್ಲ ಬ್ಯಾಂಕ್ ಗಳಿಗೆ ಮನವಿ ಮಾಡಿದ್ದ ಕೇಂದ್ರೀಯ ಬ್ಯಾಂಕ್, ಗ್ರಾಹಕರಿಗೆ ನೀಡಲಾಗುವ ಹೋಮ್ ಲೋನ್, ಆಟೋ ಲೋನ್ ಹಾಗೂ ಇತರೆ ಸಾಲಗಳ EMI ಪಾತಿಗೆ ಮೂರು ತಿಂಗಳ ರಿಯಾಯಿತಿ ನೀಡಲು ಹೇಳಿತ್ತು.

Trending News