Lockdown 4.0: ಆರೋಗ್ಯ ಸೇತು ಆಪ್ ಬಗ್ಗೆ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದ ಸರ್ಕಾರ

ನಾಲ್ಕನೇ ಹಂತದ ಲಾಕ್‌ಡೌನ್ (Lockdown) ಮಾರ್ಗಸೂಚಿಗಳಲ್ಲಿ, ಸರ್ಕಾರವು ಆರೋಗ್ಯ ಸೇತು ಆಪ್‌ಗೆ  (Aarogya Setu App) ಸಂಬಂಧಿಸಿದ ನಿಯಮಗಳನ್ನು ಸರಳೀಕರಿಸಿದೆ.

Last Updated : May 18, 2020, 08:30 AM IST
Lockdown 4.0: ಆರೋಗ್ಯ ಸೇತು ಆಪ್ ಬಗ್ಗೆ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದ ಸರ್ಕಾರ title=

ನವದೆಹಲಿ: ಲಾಕ್‌ಡೌನ್ ಮಾರ್ಗಸೂಚಿಗಳ ನಾಲ್ಕನೇ ಹಂತದಲ್ಲಿ ಸರ್ಕಾರವು ಆರೋಗ್ಯ ಸೇತು ಆಪ್‌(Aarogya Setu App)ಗೆ ಸಂಬಂಧಿಸಿದ ನಿಯಮಗಳನ್ನು ಸರಳೀಕರಿಸಿದೆ. ಈ ಆ್ಯಪ್ ಡೌನ್‌ಲೋಡ್ ಮಾಡುವ ಅಗತ್ಯವನ್ನು ನಿವಾರಿಸುವ ಮೂಲಕ ಸರ್ಕಾರ ಇದನ್ನು ಐಚ್ಛಿಕಗೊಳಿಸಿದೆ.

ಕೊರೊನಾವೈರಸ್ (Coronavirus) ಸೋಂಕನ್ನು ಮೇಲ್ವಿಚಾರಣೆ ಮಾಡಲು ಆರೋಗ್ಯ ಸೇತು ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಲಾಗಿದೆ.

ಗೃಹ ಸಚಿವಾಲಯ ಭಾನುವಾರ ಹೊರಡಿಸಿರುವ ಹೊಸ ಮಾರ್ಗಸೂಚಿಗಳಲ್ಲಿ ಆ್ಯಪ್‌ನ ಪ್ರಯೋಜನಗಳಿಗೆ ಸರ್ಕಾರ ವಿಶೇಷ ಒತ್ತು ನೀಡಿದೆ. ಇದು ವ್ಯಕ್ತಿಗಳು ಮತ್ತು ಸಮಾಜದ ರಕ್ಷಣಾತ್ಮಕ ಗುರಾಣಿಯಂತಿದೆ. ಕರೋನಾವೈರಸ್ ಸಂಭವನೀಯತೆಯನ್ನು ಮೊದಲೇ ಕಂಡುಹಿಡಿಯಲು ಈ ಅಪ್ಲಿಕೇಶನ್ ಸಹಾಯ ಮಾಡುತ್ತದೆ ಎಂದು ಸರ್ಕಾರ ಹೇಳಿದೆ. 

ಹೊಸ ಮಾರ್ಗಸೂಚಿಗಳ ಪ್ರಕಾರ ಕಚೇರಿಗಳು ಮತ್ತು ಕೆಲಸದ ಸ್ಥಳಗಳಲ್ಲಿ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು, ಉದ್ಯೋಗದಾತರು ಎಲ್ಲಾ ಉದ್ಯೋಗಿಗಳ ಮೊಬೈಲ್‌ನಲ್ಲಿ ಆರೋಗ್ಯ ಸೇತು ಅಪ್ಲಿಕೇಶನ್ ಅನ್ನು ಇರಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ಪ್ರಯತ್ನಿಸಬೇಕು ಎಂದು ಸೂಚಿಸಿದೆ.

ಈ ಹಿಂದೆ ಮೇ 1 ರಂದು ಹೊರಡಿಸಿದ ಮಾರ್ಗಸೂಚಿಗಳಲ್ಲಿ ಎಲ್ಲಾ ಉದ್ಯೋಗಿಗಳು ಆರೋಗ್ಯ ಸೇತು (Aarogya Setu) ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವುದು ಕಡ್ಡಾಯ ಎಂದು ಸರ್ಕಾರ ತಿಳಿಸಿತ್ತು.

ಭಾನುವಾರ ಬಿಡುಗಡೆ ಮಾಡಿದ ಮಾರ್ಗಸೂಚಿಗಳ ಪ್ರಕಾರ ಈ ಆ್ಯಪ್ ಇನ್ಸ್ಟಾಲ್ ಮಾಡಿಕೊಳ್ಳುವಂತೆ ಯಾವುದೇ ವ್ಯಕ್ತಿಗೆ ಸಲಹೆ ನೀಡುವ ಹಕ್ಕು ಜಿಲ್ಲಾಡಳಿತಕ್ಕೆ ಇರುತ್ತದೆ. ನಿಯಮಿತವಾಗಿ ಅವರ ಆರೋಗ್ಯವನ್ನು ಮೇಲ್ವಿಚಾರಣೆ ಮಾಡುವುದು ಇದರ ಮುಖ್ಯ ಉದ್ದೇಶ ಎಂದು ತಿಳಿಸಲಾಗಿದೆ.

Trending News