ನವದೆಹಲಿ: 370 ನೇ ವಿಧಿಯನ್ನು ರದ್ದುಗೊಳಿಸುವ ಮೋದಿ ಸರ್ಕಾರದ ನಿರ್ಧಾರವನ್ನು ರಾಜ್ಯಸಭಾ ಸಂಸದ ಸುಭಾಷ್ ಚಂದ್ರ ಸ್ವಾಗತಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರನ್ನು ಅಭಿನಂದಿಸಿ, ರಾಜ್ಯಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಕಲಂ 370ರಿಂದಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ಸಾಕಷ್ಟು ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಹೇಳುವ ಮೂಲಕ ಕಾಂಗ್ರೆಸ್ ಸಂಸದ ಗುಲಾಂ ನಬಿ ಆಜಾದ್ ಅವರ ಹೇಳಿಕೆಯನ್ನು ತಳ್ಳಿಹಾಕಿದರು.
ಸಂವಿಧಾನದ ಕಲಂ 370ರಿಂದಾಗಿ ಕಾಶ್ಮೀರ ಭಾರತದ ಭಾಗವಾಯಿತು ಎಂದು ಗುಲಾಮ್ ನಬಿ ಆಜಾದ್ ಹೇಳಿದ್ದಾರೆ. ಇದು ತಪ್ಪು. 1949ರಲ್ಲಿ ಆರ್ಟಿಕಲ್ 370ನ್ನು ಹ=ಜಾರಿಗೆ ತರಲಾಗಿದೆ. ಆದರೆ 1947ರಲ್ಲಿಯೇ ಕಾಶ್ಮೀರ ಭಾರತದ ಭಾಗವಾಯಿತು. ಕಲಂ370ರಿಂದಾಗಿ ಕಾಶ್ಮೀರದಲ್ಲಿ ಸಾಕಷ್ಟು ಜೀವಗಳು ಹೋಗಿವೆ ಎಂದು ಚಂದ್ರ ಹೇಳಿದರು.