'ಇಂಡಿಯಾಸ್ ಮೋಸ್ಟ ವಾಂಟೆಡ್' ಕಾರ್ಯಕ್ರಮದ ನಿರೂಪಕನಿಗೆ ಜೀವಾವಧಿ ಶಿಕ್ಷೆ

    

Last Updated : Dec 20, 2017, 08:03 PM IST
'ಇಂಡಿಯಾಸ್ ಮೋಸ್ಟ ವಾಂಟೆಡ್' ಕಾರ್ಯಕ್ರಮದ ನಿರೂಪಕನಿಗೆ ಜೀವಾವಧಿ ಶಿಕ್ಷೆ title=

ನವದೆಹಲಿ: ನಗರ ನ್ಯಾಯಾಲಯ ಬುಧವಾರದಂದು ಮಾಜಿ ಟಿವಿ ನಿರೂಪಕ ಸುಹೈಬ್ ಇಲ್ಯಾಸಿ ಗೆ ತನ್ನ ಪತ್ನಿಯನ್ನು  ವರದಕ್ಷಣೆಯ ಕಿರುಕುಳದ ಕಾರಣಕ್ಕಾಗಿ ಹತ್ಯೆಗೈದಿದ್ದಕ್ಕೆ ಕೋರ್ಟ್  ಜೀವಾವಧಿ ಶಿಕ್ಷೆ ವಿಧಿಸಿದೆ.

'ಇಂಡಿಯಾಸ್ ಮೋಸ್ಟ ವಾಂಟೆಡ್ ಕಾರ್ಯಕ್ರಮವಾಗಿದ್ದ ನಿರೂಪಕರಾಗಿದ್ದ ಇಲ್ಯಾಸಿ ಈ ಹಿಂದೆ 2000 ನಲ್ಲಿ  ತನ್ನ ಪತ್ನಿ ಅಂಜು ಇಲ್ಯಾಸಿಯನ್ನು ಹತ್ಯೆ ಮಾಡಿದ್ದಕ್ಕೆ ಕಾರ್ಕರಡಾಮ್ ಕೋರ್ಟ್ ಅವರಿಗೆ ಅಪರಾಧಿ ಎಂದು ಗುರುತಿಸಿತ್ತು. ಈ 17 ವರ್ಷದ ಹತ್ಯೆಯ ಪ್ರಕರಣಕ್ಕೆ ತಡವಾಗಿಯಾದರೂ  ತನ್ನ ತೀರ್ಪನ್ನು ನೀಡಿದೆ ಎನ್ನಬಹುದು. 

ಇಲ್ಯಾಸಿ ಅತ್ತಿಗೆ ರುಕ್ಮಾ ಸಿಂಗ್ ಭಾರತಿಯ ದಂಡ ಸಂಹಿತೆ 302 (ಹತ್ಯೆ) ಅಡಿಯಲ್ಲಿಯೂ ಕೂಡ ಈ ಪ್ರಕರಣವನ್ನು ಪರಿಗಣಿಸಬೇಕೆಂದು ನ್ಯಾಯಾಲಯದ ಬಳಿ ವಿನಂತಿಸಿಕೊಂಡಿದ್ದಾರೆ. ಆ ಮೂಲಕ ಜನವರಿ 11 2000 ರಲ್ಲಿ ಹತ್ಯೆಯಾಗಿದ್ದ  ತನ್ನ ಮಗಳಿಗೆ ನ್ಯಾಯ ಸಿಗುವಂತೆ  ಅವರು ಕೇಳಿಕೊಂಡಿದ್ದಾರೆ.  ಭಾರತಿಯ ನೀತಿ ಸಂಹಿತೆ ಸೆಕ್ಷನ್ 302 ರ ಪ್ರಕಾರ ಮರಣ ದಂಡೆಯು ಅಂತಿಮವಾದ ಶಿಕ್ಷೆಯಾಗಿದೆ. ಈಗಾಗಲೇ ಇಲ್ಯಾಸಿಗೆ ಐಪಿಸಿ 304 ರ ಪ್ರಕಾರ ವರದದಕ್ಷಿಣೆ ಕಿರುಕುಳದ ಸಾವಿನ ಪ್ರಕರಣದ ಅಡಿಯಲ್ಲಿ ಕೇಸ್ ದಾಖಲಾಗಿತ್ತು .ಅವರು ಈ ಹಿಂದೆ ತನ್ನ ಪತ್ನಿಯ ಹತ್ಯೆಯ ಕುರಿತಾದ ಪೋಲೀಸರ ಹೊಸ ವೈದಕಿಯ ತನಿಖೆಯನ್ನು ವಿರೋಧಿಸಿ  ಕೋರ್ಟ್ನ ಮೊರೆಹೋಗಿದ್ದರು. 

ಸುಹೈಬ್ ಇಲ್ಯಾಸಿ ಮಾರ್ಚ್ 28 2000 ರಂದು ವರದಕ್ಷಣೆ ಕಿರುಕುಳ ನೀಡಿ ತನ್ನ ಪತ್ನಿಯನ್ನು ಕೊಂಡಿದ್ದಾರೆ ಎಂಬ ಆರೋಪದಿ ಬಂಧಿತರಾಗಿದ್ದರು. 

Trending News