ಪುತ್ರನ ಮದುವೆಗೆ ಲಾಲುಗೆ 5 ದಿನಗಳ ಪೆರೋಲ್!

ಜೈಲಿನಲ್ಲಿರುವ ಆರ್ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ಐ ಯಾದವ್'ಗೆ ಐದು ದಿನಗಳ ಪೆರೋಲ್ ದೊರೆತಿದೆ.

Last Updated : May 9, 2018, 04:08 PM IST
ಪುತ್ರನ ಮದುವೆಗೆ ಲಾಲುಗೆ 5 ದಿನಗಳ ಪೆರೋಲ್! title=

ರಾಂಚಿ: ತಮ್ಮ ಮಗ ರಾಜ್ ಪ್ರತಾಪ್ ಯಾದವ್ ವಿವಾಹದ ಹಿನ್ನೆಲೆಯಲ್ಲಿ ಜೈಲಿನಲ್ಲಿರುವ ಆರ್ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್'ಗೆ ಐದು ದಿನಗಳ ಪೆರೋಲ್ ದೊರೆತಿದೆ. ಬಹು ಕೋಟಿ ಮೇವು ಹಗರಣದಲ್ಲಿ ಅಪರಾಧಿಯಾಗಿರುವ ಲಾಲು ಕಳೆದ ಡಿಸೆಂಬರ್ ನಿಂದ ಸೆರೆವಾಸದಲ್ಲಿದ್ದಾರೆ.

ಲಾಲೂ ಹಿರಿಯ ಪುತ್ರ, ಹಾಲಿ ಶಾಸಕ ತೇಜ್‌ ಪ್ರತಾಪ್‌ ಯಾದವ್‌ ಮತ್ತು ಶಾಸಕರಾಗಿರುವ ಚಂದ್ರಿಕಾ ರಾಯ್‌ ಅವರ ಪುತ್ರಿ ಐಶ್ವರ್ಯಾ ರಾಯ್‌ ವಿವಾಹ ನಿಶ್ಚಯವಾಗಿದ್ದು, ಇದೇ ಮೇ 12ರಂದು ಪಟ್ನಾದಲ್ಲಿ ವಿವಾಹ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮೇ 10ರಿಂದ 14ರ ವರೆಗಿನ ಅವಧಿಗೆ ಲಾಲು ಅವರ ಪೆರೋಲ್‌ ಅರ್ಜಿಯನ್ನು ಬಂಧೀಖಾನೆಯ ಐಜಿ ಪೆರೋಲ್ ಮಂಜೂರು ಮಾಡಿದ್ದಾರೆ.

Trending News