ಭೋಪಾಲ್: ಮಧ್ಯಪ್ರದೇಶದಿಂದ ಮದ್ಯ ಖರೀದಿದಾರರು ಮತ್ತು ಮಾರಾಟಗಾರರಿಗೆ ಪ್ರಮುಖ ಸುದ್ದಿಯಿದೆ. ಮಧ್ಯಪ್ರದೇಶದ ಅಬಕಾರಿ ಅಧಿಕಾರಿ ಆದೇಶ ಹೊರಡಿಸಿದ್ದು, ಮದ್ಯ ಮಾರಾಟಗಾರರು ಕಡ್ಡಾಯವಾಗಿ ನಗದು ಜ್ಞಾಪಕ ಪತ್ರವನ್ನು ನಿರ್ವಹಿಸುವಂತೆ ಮತ್ತು ಸೆಪ್ಟೆಂಬರ್ 1 ರಿಂದ ಖರೀದಿದಾರರಿಗೆ ಬಿಲ್ಗಳನ್ನು ನೀಡುವಂತೆ ಸೂಚಿಸಿದ್ದಾರೆ. ಆದೇಶದಂತೆ, ಈ ಕ್ರಮವು ಮದ್ಯದ ಅಕ್ರಮ ಮಾರಾಟವನ್ನು ತಡೆಯುವ ಗುರಿಯನ್ನು ಹೊಂದಿದೆ.
ಮದ್ಯ ಮಾರಾಟ/ಮದ್ಯ ಖರೀದಿಗೆ ಸಂಬಂಧಿಸಿದ ದೂರುಗಳ ಪರಿಹಾರಕ್ಕಾಗಿ, ದೇಶ/ವಿದೇಶಿ ಮದ್ಯದ ಅಂಗಡಿಗಳು ಖರೀದಿದಾರರಿಗೆ ಪಾವತಿಸಿದ ಮೊತ್ತಕ್ಕೆ ಅನುಗುಣವಾಗಿ ಬಿಲ್ಲುಗಳನ್ನು ನೀಡುವುದು ಕಡ್ಡಾಯವಾಗಿದೆ ಎಂದು ಆದೇಶದಲ್ಲಿ ಹೇಳಲಾಗಿದೆ.
Madhya Pradesh Excise Officer issues an order, directing liquor sellers to mandatorily have a bill book/cash memo with them and issue bills to buyers, with effect from 1st September. This is being done as per the suggestion by SIT formed to investigate illicit liquor matters. pic.twitter.com/m1qiWG9oT9
— ANI (@ANI) August 19, 2021
ಬಳಕೆಯಲ್ಲಿರುವ ಬಿಲ್ ಪುಸ್ತಕದ ಕಾರ್ಬನ್ ಪ್ರತಿಯನ್ನು ಪರವಾನಗಿದಾರರು ಒಪ್ಪಂದದ ಅವಧಿ ಮುಗಿಯುವವರೆಗೆ ಅಂದರೆ 31 ಮಾರ್ಚ್ 2022 ರವರೆಗೆ ಮದ್ಯದಂಗಡಿಯಲ್ಲಿ (Liquor Shop) ಇಡಬೇಕು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ- 3.86 ಕೋಟಿಗೂ ಹೆಚ್ಚು ಜನರಿಗೆ ನಿಗದಿತ ಸಮಯದಲ್ಲಿ ಕೊರೊನಾ ಲಸಿಕೆ ಸಿಕ್ಕಿಲ್ಲ ಎಂದ ಕೇಂದ್ರ
ನಕಲಿ ಮದ್ಯ ಪ್ರಕರಣಗಳಲ್ಲಿ ಶಿಕ್ಷೆಯನ್ನು ಹೆಚ್ಚಿಸಲು ರಾಜ್ಯ ಅಬಕಾರಿ ಕಾಯ್ದೆಗೆ ತಿದ್ದುಪಡಿ ತರುವ ಮಸೂದೆಯನ್ನು ಹಣಕಾಸು ಮತ್ತು ಅಬಕಾರಿ ಸಚಿವ ಜಗದೀಶ್ ದೇವ್ದಾ ಮಂಡಿಸಿದರು. ಇತ್ತೀಚೆಗೆ ನಕಲಿ ಮದ್ಯ ಸೇವಿಸಿ ಒಂದು ಡಜನ್ ಜನರ ಸಾವಿನ ಹಿನ್ನೆಲೆಯಲ್ಲಿ ಈ ಶಾಸನವನ್ನು ಜಾರಿಗೆ ತರಲು ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ.
ಮಧ್ಯಪ್ರದೇಶ ಅಬಕಾರಿ (ತಿದ್ದುಪಡಿ) ವಿಧೇಯಕ, 2021 (Madhya Pradesh Excise (Amendment) Bill, 2021) ರನ್ನು ಕಳೆದ ತಿಂಗಳು ಮಂದಸೌರ್ನಲ್ಲಿ ನಕಲಿ ಮದ್ಯ ಸೇವಿಸಿ ಕನಿಷ್ಠ ಏಳು ಜನರು ಸಾವನ್ನಪ್ಪಿದ್ದಾರೆ. ಇದಲ್ಲದೆ ಇಂದೋರ್ನಲ್ಲಿ ಮದ್ಯ ಸೇವನೆಯ ನಂತರ ಐದು ಜನರು ಸಾವನ್ನಪ್ಪಿದರು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಇದನ್ನು ಪ್ರಸ್ತಾಪಿಸಿದೆ.
ಎಸ್ಐಟಿಯ ಸಲಹೆಯ ಮೇರೆಗೆ ನಿಯಮವನ್ನು ರೂಪಿಸಲಾಗಿದೆ:
ವಾಸ್ತವವಾಗಿ, ರಾಜ್ಯದಲ್ಲಿ ನಕಲಿ ಮದ್ಯ ಹಾವಳಿಯನ್ನು ತಪ್ಪಿಸಲು ಮಧ್ಯಪ್ರದೇಶದ ಅಬಕಾರಿ ಆಯುಕ್ತರು ಮದ್ಯ ಮಾರಾಟಗಾರರಿಗೆ ಕಡ್ಡಾಯವಾಗಿ ಬಿಲ್ ಪುಸ್ತಕ / ನಗದು ಜ್ಞಾಪಕವನ್ನು ನಿರ್ವಹಿಸುವಂತೆ ಮತ್ತು ಖರೀದಿದಾರರಿಗೆ ಬಿಲ್ಗಳನ್ನು ನೀಡುವಂತೆ ಆದೇಶಿಸಿದ್ದಾರೆ. ಇದು ಸೆಪ್ಟೆಂಬರ್ 1 ರಿಂದ ಅನ್ವಯವಾಗುತ್ತದೆ. ಅಕ್ರಮ ಮದ್ಯದ ಬಗ್ಗೆ ತನಿಖೆಗಾಗಿ ರಚಿಸಲಾದ ಎಸ್ಐಟಿಯ ಸಲಹೆಯ ಮೇರೆಗೆ ಮಧ್ಯಪ್ರದೇಶ ಸರ್ಕಾರ ಈ ನಿಯಮವನ್ನು ರೂಪಿಸಿದೆ. ಈ ನಿಯಮದ ಪ್ರಕಾರ, ಖರೀದಿದಾರನು ಎಲ್ಲಿಂದ ಮದ್ಯವನ್ನು ಖರೀದಿಸಿದನು, ಎಷ್ಟು ಬೆಲೆಗೆ ಎಂದು ಖಚಿತಪಡಿಸಿಕೊಳ್ಳಲಾಗುವುದು.
ಇದನ್ನೂ ಓದಿ- ಜಮ್ಮು ಕಾಶ್ಮೀರದಲ್ಲಿ ಅಪ್ನಿ ಪಕ್ಷದ ನಾಯಕನ್ನು ಹತ್ಯೆಗೈದ ಉಗ್ರರು
ಒಪ್ಪಂದದ ಮೇಲೆ ಬಿಲ್ ಸ್ವೀಕರಿಸದಿದ್ದರೆ ದೂರು ನೀಡಿ:
ಅಬಕಾರಿ ಆಯುಕ್ತರು ನೀಡಿದ ಸೂಚನೆಗಳ ಪ್ರಕಾರ, ಎಲ್ಲಾ ಮದ್ಯದಂಗಡಿದಾರರು ನಗದು ಜ್ಞಾಪಕವನ್ನು ಮುದ್ರಿಸಬೇಕು. ಇದನ್ನು ಜಿಲ್ಲೆಯ ಅಬಕಾರಿ ಇಲಾಖೆಯು ಪ್ರಮಾಣೀಕರಿಸುತ್ತದೆ. ಮದ್ಯ ಖರೀದಿಸುವ ಯಾವುದೇ ಗ್ರಾಹಕರು ನಿಗದಿತ ಬೆಲೆಗೆ ಅನುಗುಣವಾಗಿ ಬಿಲ್ ಪಡೆಯಬೇಕಾಗುತ್ತದೆ. ಇದರಲ್ಲಿ ಬ್ರಾಂಡ್ಗೆ ಸಂಬಂಧಿಸಿದ ಮಾಹಿತಿಯೂ ಇರುತ್ತದೆ.
ಒಪ್ಪಂದದ ಮೇಲೆ ಈ ಬಿಲ್ ಪುಸ್ತಕದ ಕಾರ್ಬನ್ ಪ್ರತಿಯನ್ನು ಇಟ್ಟುಕೊಳ್ಳುವುದು ಕಡ್ಡಾಯವಾಗಿರುತ್ತದೆ. ಇದರೊಂದಿಗೆ, ಎಲ್ಲಾ ಮದ್ಯದ ಒಪ್ಪಂದಗಳಲ್ಲಿ ಸಂಬಂಧಪಟ್ಟ ಅಧಿಕಾರಿಯ ಸಂಖ್ಯೆಯನ್ನು ಬರೆಯುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇದರಿಂದ ಗ್ರಾಹಕರು ಬಿಲ್ ಪಡೆಯದಿದ್ದಲ್ಲಿ ದೂರು ನೀಡಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ