ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಬಗೆಗಿನ ಪ್ರಮುಖ ವಿಷಯಗಳು

ಇದು ದೇಶದಲ್ಲಿಯೇ ಅತಿ ದೊಡ್ಡ ಬ್ಯಾಂಕಿಂಗ್ ಜಾಲವನ್ನು ರಚಿಸುತ್ತದೆ.

Last Updated : Aug 24, 2018, 03:10 PM IST
ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಬಗೆಗಿನ ಪ್ರಮುಖ ವಿಷಯಗಳು title=

ನವದೆಹಲಿ: ದೀರ್ಘಾವಧಿಯ ಕಾಯುವಿಕೆಯ ನಂತರ ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್(IPPB) ಸೆಪ್ಟೆಂಬರ್ 1 ರಿಂದ ಪ್ರಾರಂಭವಾಗಲಿದೆ. ಈ ಮೊದಲು ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಅನ್ನು ಆಗಸ್ಟ್ 21ಕ್ಕೆ ಪ್ರಾರಂಭಿಸಲು ಸಮಯ ನಿಗದಿಗೊಳಿಸಲಾಗಿತ್ತು. ಆದರೆ ಆಗಸ್ಟ್ 16 ರಂದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ನಿಧನದ ಹಿನ್ನೆಲೆಯಲ್ಲಿ ದಿನಾಂಕವನ್ನು ಬದಲಾಯಿಸಲಾಯಿತು. ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಆರಂಭದ ದಿನದಂದೇ ಅದರ ಆಪ್ ಅನ್ನೂ ಸಹ ಬಿಡುಗಡೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಆ ಅಪ್ಲಿಕೇಶನ್ ನ ಮೂಲಕ ಗ್ರಾಹಕರು 100 ಕಂಪನಿಗಳ ಸೇವೆಗಳಲ್ಲಿ ಸುಲಭವಾಗಿ ಪಾವತಿಸಲು ಸಹಾಯವಾಗುತ್ತದೆ.

- ಪ್ರತಿಯೊಂದು ಜಿಲ್ಲೆಯಲ್ಲಿ IPPB ಯ ಕನಿಷ್ಟ ಒಂದು ಶಾಖೆ ತೆರೆಯುತ್ತದೆ.  ಗ್ರಾಮೀಣ ಪ್ರದೇಶಗಳಲ್ಲಿ ಹಣಕಾಸಿನ ಸೇವೆಗಳನ್ನು ಒದಗಿಸುವುದು ಬ್ಯಾಂಕ್ ಪಾವತಿ ಪರಿಚಯಿಸುವ ಗುರಿಯನ್ನು ಹೊಂದಿದೆ. ಎಲ್ಲಾ 1.55 ಲಕ್ಷ ಅಂಚೆ ಕಛೇರಿಗಳು ಗ್ರಾಮೀಣ ಪ್ರದೇಶಗಳಿಗೆ ಆರ್ಥಿಕ ಸೇವೆಗಳನ್ನು ಒದಗಿಸುವಂತೆ ಲಿಂಕ್ ಮಾಡಲಾಗುವುದು. ಇದು ದೇಶದಲ್ಲಿಯೇ ಅತಿ ದೊಡ್ಡ ಬ್ಯಾಂಕಿಂಗ್ ಜಾಲವನ್ನು ರಚಿಸುತ್ತದೆ.

- ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ನಿಂದ 17 ದಶಲಕ್ಷ ಪೋಸ್ಟಲ್ ಉಳಿತಾಯ ಬ್ಯಾಂಕ್ ಖಾತೆಗಳಿಗೆ ಲಿಂಕ್ ಮಾಡುತ್ತದೆ. ಐಪಿಪಿಬಿ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ಡಿಜಿಟಲ್ ಬ್ಯಾಂಕಿಂಗ್ ಮತ್ತು ಹಣಕಾಸು ಸೇವೆಗಳ ಅನುಕೂಲಗಳನ್ನು ಜನರು ಪಡೆಯಲು ಸಾಧ್ಯವಾಗುತ್ತದೆ. ಈ ಮೂಲಕ ಯಾವುದೇ ಬ್ಯಾಂಕ್ ಖಾತೆಯಲ್ಲಿ ಮನಿ ಟ್ರಾನ್ಸ್ಫರ್ ಅನ್ನು ಮಾಡಬಹುದು.

- ಇಂಡಿಯಾ ಪೋಸ್ಟ್ ಪೇಮೆಂಟ್ ನಲ್ಲಿ ಗ್ರಾಹಕರು RTGS, NEFT, IMPS ಮೂಲಕ ಕೂಡ ಟ್ರಾನ್ಸಾಕ್ಷನ್ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಅಂದರೆ, ನೀವು ನಿಮ್ಮ ಖಾತೆಯಿಂದ ಯಾವುದೇ ಬ್ಯಾಂಕ್ನಲ್ಲಿ RTGS, NEFT, IMPS ಮಾಡಬಹುದು ಮತ್ತು ನೀವು ಈ ಯಾವುದೇ ಖಾತೆಯಿಂದ ಈ ಮೂಲಕ ಹಣವನ್ನು ಪಡೆಯಬಹುದು. ಐಪಿಪಿಬಿ ಖಾತೆದಾರರು ಯಾವುದೇ ರೀತಿಯ ಹಣಕಾಸು ಸೇವೆಗಳನ್ನು ಬಳಸಬಹುದು.

- ಸರ್ಕಾರವು ಇಂಡಿಯಾ ಪೋಸ್ಟ್ ಪೇಮೆಂಟ್ ಮೂಲಕ ನರೆಗಾ ಸಂಬಳ, ಸಬ್ಸಿಡಿ, ಪಿಂಚಣಿ ಇತ್ಯಾದಿ ಬ್ಯಾಂಕಿಂಗ್ ವಹಿವಾಟನ್ನು ನಡೆಸುತ್ತದೆ.

Trending News