ಉತ್ತಮ ಆಡಳಿತ: ಕೇರಳ ರಾಜ್ಯಕ್ಕೆ ಮೊದಲ ಸ್ಥಾನ, ನಾಲ್ಕನೇ ಸ್ಥಾನದಲ್ಲಿ ಕರ್ನಾಟಕ

ತಮಿಳುನಾಡು, ತೆಲಂಗಾಣ, ಕರ್ನಾಟಕ ಮತ್ತು ಗುಜರಾತ್ ರಾಜ್ಯಗಳು ಉತ್ತಮ ಆಡಳಿತವನ್ನು ನೀಡುವ ಅಗ್ರ ಐದು ರಾಜ್ಯಗಳಲ್ಲಿ ಕೇರಳವನ್ನು ಅನುಸರಿಸಿದೆ ಎಂದು ವರದಿ ತಿಳಿಸಿದೆ. 

Last Updated : Jul 22, 2018, 05:37 PM IST
ಉತ್ತಮ ಆಡಳಿತ: ಕೇರಳ ರಾಜ್ಯಕ್ಕೆ ಮೊದಲ ಸ್ಥಾನ, ನಾಲ್ಕನೇ ಸ್ಥಾನದಲ್ಲಿ ಕರ್ನಾಟಕ title=

ಬೆಂಗಳೂರು: ದೇಶದಲ್ಲೇ ಉತ್ತಮ ಆಡಳಿತ ನಡೆಸುವ ದೊಡ್ಡ ರಾಜ್ಯಗಳಲ್ಲಿ ಕೇರಳ ಮೊದಲ ಸ್ಥಾನದಲ್ಲಿದ್ದು, ಕರ್ನಾಟಕ ನಾಲ್ಕನೇ ಸ್ಥಾನದಲ್ಲಿದೆ. ಸಣ್ಣ ರಾಜ್ಯಗಳಲ್ಲಿ ಹಿಮಾಚಲ ಪ್ರದೇಶವು ಅಗ್ರಸ್ಥಾನದಲ್ಲಿದೆ. 

ಬೆಂಗಳೂರು ಮೂಲದ ಥಿಂಕ್ ಟ್ಯಾಂಕ್ ಪಬ್ಲಿಕ್ ಅಫೇರ್ಸ್ ಸೆಂಟರ್ (ಪಿಎಸಿ) 2018ರ ಅತ್ಯುತ್ತಮ ಆಡಳಿತ ನಡೆಸುವ ರಾಜ್ಯಗಳ ಪಟ್ಟಿ ಬಿಡುಗಡೆ ಮಾಡಿದೆ. ತಮಿಳುನಾಡು, ತೆಲಂಗಾಣ, ಕರ್ನಾಟಕ ಮತ್ತು ಗುಜರಾತ್ ರಾಜ್ಯಗಳು ಉತ್ತಮ ಆಡಳಿತವನ್ನು ನೀಡುವ ಅಗ್ರ ಐದು ರಾಜ್ಯಗಳಲ್ಲಿ ಕೇರಳವನ್ನು ಅನುಸರಿಸಿದೆ ಎಂದು ವರದಿ ತಿಳಿಸಿದೆ. ಮಧ್ಯಪ್ರದೇಶ, ಜಾರ್ಖಂಡ್ ಮತ್ತು ಬಿಹಾರಗಳು ಸಾರ್ವಜನಿಕ ವ್ಯವಹಾರಗಳ ಸೂಚ್ಯಂಕ(ಪಿಐಐ)ದಲ್ಲಿ ಕಡೆಯ ಸ್ಥಾನದಲ್ಲಿದ್ದು, ಈ ರಾಜ್ಯಗಳಲ್ಲಿ ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆ ಹೆಚ್ಚಿದೆ ಎಂದು ವರದಿ ತಿಳಿಸಿದೆ. 

ಸಣ್ಣ ರಾಜ್ಯಗಳಲ್ಲಿ (ಜನಸಂಖ್ಯೆ ಎರಡು ಕೋಟಿಗಿಂತ ಕಡಿಮೆ), ಹಿಮಾಚಲ ಪ್ರದೇಶವು ಅಗ್ರಸ್ಥಾನದಲ್ಲಿದೆ. ಗೋವಾ, ಮಿಜೋರಾಂ, ಸಿಕ್ಕಿಂ ಮತ್ತು ತ್ರಿಪುರಾಗಳು ಉತ್ತಮ ಆಡಳಿತದೊಂದಿಗೆ ಅಗ್ರ ಐದು ರಾಜ್ಯಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ನಾಗಾಲ್ಯಾಂಡ್, ಮಣಿಪುರ ಮತ್ತು ಮೇಘಾಲಯ ಸಣ್ಣ ರಾಜ್ಯಗಳಲ್ಲಿ ಸೂಚ್ಯಂಕದ ಕೆಳಭಾಗದಲ್ಲಿ ಸ್ಥಾನ ಪಡೆದಿವೆ.

2016 ರಿಂದ ವಾರ್ಷಿಕವಾಗಿ ಈ ಪಟ್ಟಿಯನ್ನು ಬಿಡುಗಡೆ ಮಾಡುತ್ತಿರುವ ಸಂಸ್ಥೆಯು, ದತ್ತಾಂಶ-ಆಧಾರಿತ ಚೌಕಟ್ಟಿನ ಆಧಾರದ ಮೇಲೆ ರಾಜ್ಯಗಳ ಆಡಳಿತ ನಿರ್ವಹಣೆಯನ್ನು ಪರಿಶೀಲಿಸಿ, ಅವುಗಳು ಒದಗಿಸುವ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯನ್ನು ಆಧರಿಸಿ ಪಟ್ಟಿ ಪ್ರಕಟ ಮಾಡುತ್ತದೆ. ಹೆಸರಾಂತ ಭಾರತೀಯ ಅರ್ಥಶಾಸ್ತ್ರಜ್ಞ ಮತ್ತು ವಿದ್ವಾಂಸ ಸ್ಯಾಮ್ಯುಯೆಲ್ ಪಾಲ್ ಅವರು 1994 ರಲ್ಲಿ ಥಿಂಕ್ ಟ್ಯಾಂಕ್ ಸ್ಥಾಪನೆ ಮಾಡಿದ್ದು, ಸ್ಥಾಪನೆಯಾದರು, ದೇಶದಲ್ಲಿ ಉತ್ತಮ ಆಡಳಿತಕ್ಕಾಗಿ ಬೇಡಿಕೆಗಳನ್ನು ಒಟ್ಟುಗೂಡಿಸಲು ಈ ಸಂಸ್ಥೆ ಕೆಲಸ ಮಾಡುತ್ತಿದೆ.

Trending News