/kannada/photo-gallery/shukra-gochar-laxmi-narayana-yoga-bless-this-zodiac-signs-with-huge-wealth-and-success-221344 Laxmi Narayana Yoga: ಈ ರಾಶಿಯವರಿಗೆ ಭಾಗ್ಯೋದಯ, ಸಿಗಲಿದೆ ಅಪಾರ ಕೀರ್ತಿ ಯಶಸ್ಸು Laxmi Narayana Yoga: ಈ ರಾಶಿಯವರಿಗೆ ಭಾಗ್ಯೋದಯ, ಸಿಗಲಿದೆ ಅಪಾರ ಕೀರ್ತಿ ಯಶಸ್ಸು 221344

ಆಲಪ್ಪುಳ: ಕೇರಳದ ಕಾಯಂಕುಲಂನ ಮಸೀದಿಯು ಧರ್ಮದ ವ್ಯಾಪ್ತಿಯನ್ನು ಮೀರಿ ಭಾನುವಾರ ಹಿಂದೂ ವಿವಾಹ ಸಮಾರಂಭವನ್ನು ಆಯೋಜಿಸಿತ್ತು. ಚೆರಾವಳಿ ಮುಸ್ಲಿಂ ಜಮಾಅತ್ ಮಸೀದಿಯ ಸಮಿತಿಯು ಮದುವೆಗೆ ಹಣ ಸಂಗ್ರಹಿಸಲು ಸಾಧ್ಯವಾಗದ ವಧುವಿನ ತಾಯಿಯ ಕಡೆಗೆ ಸಹಾಯ ಹಸ್ತ ಚಾಚಲು ನಿರ್ಧರಿಸಿ ಈ ಐತಿಹಾಸಿಕ ಹೆಜ್ಜೆ ಇಟ್ಟಿದೆ.

"ಒಂದರ್ಥದಲ್ಲಿ ಇದು ಜಗತ್ತಿಗೆ ಒಂದು ಉದಾಹರಣೆಯಾಗಿದೆ. ಹಿಂದೂ ವಧು-ವರರು ಮಸೀದಿಯಲ್ಲಿ ವಿವಾಹ ಜೀವನಕ್ಕೆ ಕಾಲಿಟ್ಟು ದಂಪತಿಗಳಾಗಿ ಇತಿಹಾಸ ನಿರ್ಮಿಸಿದ್ದಾರೆ. ಸುಮಾರು 1400 ವರ್ಷಗಳ ಹಿಂದೆ ಮುಹಮ್ಮದ್ ನಬಿ ಮಸೀದಿಯ ಬಾಗಿಲುಗಳನ್ನು ಕ್ರಿಶ್ಚಿಯನ್ನರು ಮತ್ತು ಜುದಾಗಳಿಗೆ ತೆರೆದಿದ್ದರು" ಎಂದು ಮಸೀದಿ ಸಮಿತಿಯ ಕಾರ್ಯದರ್ಶಿ ನಜುಮುದ್ದೀನ್ ಅಲುಮ್ಮುಟ್ಟಿಲ್ ಹೇಳಿದರು.

ವಧು ಅಂಜು ಮತ್ತು ವರ ಶರತ್ ಅವರು ಹೂಮಾಲೆ ಬದಲಿಸಿಕೊಂಡು ಮತ್ತು ಪ್ರತಿಜ್ಞೆ ಮಾಡಿದರು. ಈ ವಿಶಿಷ್ಟವಾದ ವಿವಾಹಕ್ಕಾಗಿ  ಮಸೀದಿಯನ್ನು ಐತಿಹಾಸಿಕ ವಿವಾಹಕ್ಕಾಗಿ ಅಲಂಕರಿಸಲಾಗಿತ್ತು.

ಈ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಂಡಿರುವ ವಧು ಅಂಜು, "ಇದು ಸಂಭವಿಸಲು ನನ್ನ ಕಿರಿಯ ಸಹೋದರ ಮತ್ತು ಅವನ ಸ್ನೇಹಿತರು ಕಾರಣ. ಅವರುಗಳ ಆಲೋಚನೆಗಳು ಮತ್ತು ವಿಶಾಲ ಹೃದಯ ಇದಕ್ಕೆ ಅನುವು ಮಾಡಿಕೊಟ್ಟಿದೆ. ಇದರಿಂದಾಗಿ ನಮಗೆ ತುಂಬಾ ಸಂತೋಷವಾಗಿದೆ" ಎಂದು ಹೇಳಿದರು.

ವಿವಾಹ ವಿಧಿಗಳನ್ನು ಅನುಸರಿಸಿ, ಮಸೀದಿ ಆವರಣದಲ್ಲಿ ಸಸ್ಯಾಹಾರಿ ಊಟಕ್ಕೆ ಸಹ ವ್ಯವಸ್ಥೆ ಮಾಡಲಾಗಿತ್ತು. ವಿವಾಹ ಸಮಾರಂಭದ ನಂತರ, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಫೇಸ್‌ಬುಕ್‌ ಮೂಲಕ ಹೊಸದಾಗಿ ಮದುವೆಯಾದ ದಂಪತಿಗಳನ್ನು ಅಭಿನಂದಿಸಿದರು. ಇದರಲ್ಲಿ ಅವರು "ಕೇರಳ ಒಂದೇ" ("Kerala is one") ಎಂದು ಬರೆದಿದ್ದಾರೆ.

"ಇದಕ್ಕಾಗಿ ಕೆಲಸ ಮಾಡಿದ ಎಲ್ಲರಿಗೂ ವಧು, ಕುಟುಂಬ ಸದಸ್ಯರು ಮತ್ತು ಚರ್ಚ್ ಸಮಿತಿಗೆ ಶುಭಾಶಯಗಳು. ಕೇರಳ ಒಂದೇ;  ಈ ಒಳ್ಳೆಯ ಹೃದಯಗಳಿಂದ ನಾವೆಲ್ಲರೂ ಒಂದೇ ಎಂದು ಜೋರಾಗಿ ಹೇಳಬಹುದು -" ಎಂದು ಪಿಣರಾಯ್ ವಿಜಯನ್ ಅವರ ಫೇಸ್‌ಬುಕ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಹಿಂದೂ ಪುರೋಹಿತರೊಬ್ಬರು ಎರಡೂ ಸಮುದಾಯಗಳ ಅತಿಥಿಗಳ ಮುಂದೆ ಸಾಂಪ್ರದಾಯಿಕ ದೀಪ ಬೆಳಗಿ ಆಚರಣೆಯಂತೆ ವಿವಾಹ ನೆರವೇರಿಸಿದರು.  
 

Section: 
English Title: 
Kerala mosque hosts Hindu wedding
News Source: 
Home Title: 

ಮಸೀದಿಯಲ್ಲಿ ಹಿಂದೂ ವಿವಾಹ!

ಮಸೀದಿಯಲ್ಲಿ ಹಿಂದೂ ವಿವಾಹ!
Caption: 
Pic courtesy: Twitter/PinarayiVijayan
Author No use : 
Yashaswini V
Yes
Is Blog?: 
No
Tags: 
Facebook Instant Article: 
Yes
Mobile Title: 
ಮಸೀದಿಯಲ್ಲಿ ಹಿಂದೂ ವಿವಾಹ!
Publish Later: 
No
Publish At: 
Monday, January 20, 2020 - 07:00
Created By: 
Yashaswini V
Updated By: 
Yashaswini V
Published By: 
Yashaswini V