ಕೇರಳ : ಕಳ್ಳತನದ ಆರೋಪಿಯನ್ನು ಥಳಿಸಿ, ಸೆಲ್ಫಿ ಕ್ಲಿಕ್ಕಿಸಿದ ಗುಂಪು!

ಕೇರಳದ ಪಲಕ್ಕಾಡ್ ಜಿಲ್ಲೆಯಲ್ಲಿ ಕಳ್ಳತನ ಮಾಡಿದ ಆರೋಪದ ಮೇಲೆ ಆದಿವಾಸಿ ವ್ಯಕ್ತಿಯೋರ್ವನನ್ನು ಯುವಕರ ಗುಂಪೊಂದು ಗುರುವಾರ ಕಟ್ಟಿಹಾಕಿ, ಥಳಿಸಿದ್ದಲ್ಲದೆ ಅಷ್ಟಕ್ಕೇ ಅವರ ಕ್ರೌರ್ಯ ಕೊನೆಗೊಳ್ಳದೆ, ಆ ಸಂದರ್ಭದಲ್ಲಿ ಸೆಲ್ಫಿ ಕ್ಲಿಕ್ಕಿಸಿ ಖುಷಿ ಪಟ್ಟಿದ್ದಾರೆ. ಈ ಫೋಟೊ ಈಗ ಬಹು ಚರ್ಚೆಗೆ ಗ್ರಾಸವಾಗಿದೆ. 

Last Updated : Feb 23, 2018, 08:38 PM IST
ಕೇರಳ : ಕಳ್ಳತನದ ಆರೋಪಿಯನ್ನು ಥಳಿಸಿ, ಸೆಲ್ಫಿ ಕ್ಲಿಕ್ಕಿಸಿದ ಗುಂಪು! title=

ಪಾಲಕ್ಕಾಡ್ : ಸ್ಮಾರ್ಟ್ ಫೋನ್ಗಳ ಆಗಮನದಿಂದ ಹೆಚ್ಚಾಗಿರುವ ಸೆಲ್ಫಿ ಕ್ರೇಜ್ ಇಂದು ಕಳ್ಳನನ್ನು ಹಿಡಿದು ಥಳಿಸುವಾಗ ಸೆಲ್ಫಿ ಕ್ಲಿಕ್ಕಿಸುವ ಪೈಶಾಚಿಕ ಹಂತಕ್ಕೆ ತಲುಪಿದೆ. ಹೌದು, ಇಂತಹ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕೇರಳದ ಪಲಕ್ಕಾಡ್ ಜಿಲ್ಲೆಯಲ್ಲಿ ಕಳ್ಳತನ ಮಾಡಿದ ಆರೋಪದ ಮೇಲೆ ಆದಿವಾಸಿ ವ್ಯಕ್ತಿಯೋರ್ವನನ್ನು ಯುವಕರ ಗುಂಪೊಂದು ಗುರುವಾರ ಕಟ್ಟಿಹಾಕಿ, ಥಳಿಸಿದ್ದಲ್ಲದೆ ಅಷ್ಟಕ್ಕೇ ಅವರ ಕ್ರೌರ್ಯ ಕೊನೆಗೊಳ್ಳದೆ, ಆ ಸಂದರ್ಭದಲ್ಲಿ ಸೆಲ್ಫಿ ಕ್ಲಿಕ್ಕಿಸಿ ಖುಷಿ ಪಟ್ಟಿದ್ದಾರೆ. ಈ ಫೋಟೊ ಈಗ ಬಹು ಚರ್ಚೆಗೆ ಗ್ರಾಸವಾಗಿದೆ. 

ಆದಿವಾಸಿ ವ್ಯಕ್ತಿಯನ್ನು ಮಧು(30) ಎಂದು ಗುರುತಿಸಲಾಗಿದ್ದು, ಕೊಟ್ಟಾಥರದ ಸರ್ಕಾರಿ ಬುಡಕಟ್ಟು ವಿಶೇಷ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ತೀವ್ರ ಗಾಯಗೊಂಡಿದ್ದ ಆತ ಮಾರ್ಗಮಧ್ಯೆ ಮೃತಪಟ್ಟಿದ್ದಾನೆ ಎನ್ನಲಾಗಿದೆ. 

ಮಧು, ಗ್ರಾಮದ ಸಮೀಪದ ಕಾಡಿನಲ್ಲಿ ವಾಸವಿದ್ದುಕೊಂಡು, ಗ್ರಾಮದ ಅಂಗಡಿಗಳಲ್ಲಿ ಕಳ್ಳತನ ಮಾಡುತ್ತಿದ್ದ. ಈ ಸಂಬಂಧ ಪೊಲೀಸರು ಕೂಡ ಆತನನ್ನು ಬಂಧಿಸಲು ಪ್ರಯತ್ನಿಸಿದ್ದರು. ಆದರೆ ಆಟ ಕಳ್ಳತನ ಮಾಡುತ್ತಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಅದನ್ನು ವೀಕ್ಷಿಸಿದ ಗ್ರಾಮಸ್ಥರು ಆತನನ್ನು ಹಿಡಿದು ಥಳಿಸಿದ್ದಾರೆ ಎನ್ನಲಾಗಿದೆ. 

ಈಗಾಗಲೇ ಮಧು ವಿರುದ್ಧ ಪೋಲಿಸ್ ಥಾನೆಯಲ್ಲಿ ಹಲವು ಪ್ರಕರಣಗಳು ದಾಖಲಾಗಿದ್ದು, ತನ್ನ ದಿನನಿತ್ಯದ ಜೀವನ ಸಾಗಿಸಲು ಕಳ್ಳತನ ಮಾಡುತ್ತಿದ್ದ ಎನ್ನಲಾಗಿದೆ. ಆರೋಪಿಯನ್ನು ಥಳಿಸಿದ ಘಟನೆಗೆ ಕುರಿತಾಗಿ ಪ್ರಕರಣ ದಾಖಲಾಗಿದ್ದು, ಅದರಲ್ಲಿ ಯಾರ ಹೆಸರನ್ನೂ ನಮೂದಿಸಿಲ್ಲ. ಅಲ್ಲದೆ, ಏಳು ಮಂದಿ ಆರೋಪಿಗಳನ್ನು ಪೊಲೀಸರು ಪತ್ತೆ ಹಚ್ಚಿದ್ದು, ಮರಣೋತ್ತರ ಪರೀಕ್ಷೆ ನಂತರ ವರದಿಯನ್ನು ಪಡೆದುಮತ್ತಷ್ಟು ಕ್ರಮ ತೆಗೆದುಕೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ'.

Trending News