ಆಮ್ಲಜನಕ ಸರಬರಾಜಿಗೆ ಕರ್ನಾಟಕ ಅಡ್ಡಿಯಾಗಿದೆ ಎಂದ ಮಹಾರಾಷ್ಟ್ರ ಸಚಿವ ..!

Last Updated : May 8, 2021, 08:47 PM IST
  • ಬಳ್ಳಾರಿಯ ಉಕ್ಕಿನ ಸ್ಥಾವರದಿಂದ ಪಶ್ಚಿಮ ಮಹಾರಾಷ್ಟ್ರಕ್ಕೆ ಆಮ್ಲಜನಕದ ಸರಬರಾಜು ಮಾಡಲು ನೆರೆಯ ಕರ್ನಾಟಕ ಸರ್ಕಾರ ಅಡ್ಡಿಪಡಿಸಿದೆ ಎಂದು ಮಹಾರಾಷ್ಟ್ರ ಸಚಿವ ಸತೇಜ್ ಪಾಟೀಲ್ ಶನಿವಾರ ಆರೋಪಿಸಿದ್ದಾರೆ,
  • ಈ ವಿಚಾರದಲ್ಲಿ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸುವಂತೆ ಕೋರಿದ್ದಾರೆ.
ಆಮ್ಲಜನಕ ಸರಬರಾಜಿಗೆ ಕರ್ನಾಟಕ ಅಡ್ಡಿಯಾಗಿದೆ ಎಂದ ಮಹಾರಾಷ್ಟ್ರ ಸಚಿವ ..! title=
Photo Courtesy: PTI

ನವದೆಹಲಿ: ಬಳ್ಳಾರಿಯ ಉಕ್ಕಿನ ಸ್ಥಾವರದಿಂದ ಪಶ್ಚಿಮ ಮಹಾರಾಷ್ಟ್ರಕ್ಕೆ ಆಮ್ಲಜನಕದ ಸರಬರಾಜು ಮಾಡಲು ನೆರೆಯ ಕರ್ನಾಟಕ ಸರ್ಕಾರ ಅಡ್ಡಿಪಡಿಸಿದೆ ಎಂದು ಮಹಾರಾಷ್ಟ್ರ ಸಚಿವ ಸತೇಜ್ ಪಾಟೀಲ್ ಶನಿವಾರ ಆರೋಪಿಸಿದ್ದಾರೆ, ಈ ವಿಚಾರದಲ್ಲಿ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸುವಂತೆ ಕೋರಿದ್ದಾರೆ.

ಇದನ್ನೂ ಓದಿ: ಕರೋನಾ ವಿರುದ್ಧ ಹೋರಾಟಕ್ಕೆ ಕೈ ಜೋಡಿಸಿದ ಆಟಗಾರ : IPL 2021ರ ಆದಾಯವನ್ನು ಸಿಎಂ ರಿಲೀಫ್ ಫಂಡ್ ಗೆ ನೀಡಲು ನಿರ್ಧಾರ

ಕೊಲ್ಹಾಪುರ ಮತ್ತು ಇತರ ಜಿಲ್ಲೆಗಳಿಗೆ ಕರ್ನಾಟಕದ ಮೂಲಕ ಆಮ್ಲಜನಕವನ್ನು ಅಡ್ಡಿಪಡಿಸುವುದು ದುರದೃಷ್ಟಕರ" ಎಂದು ಗೃಹ ರಾಜ್ಯ ಸಚಿವ ಸತೇಜ್ ಪಾಟೀಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.ಪ್ರಾಣಹಾನಿ ತಪ್ಪಿಸಲು ಸರಬರಾಜು ಅಸ್ತವ್ಯಸ್ತವಾಗದಂತೆ ಕೇಂದ್ರ ಸರ್ಕಾರ ಖಚಿತಪಡಿಸಿಕೊಳ್ಳಬೇಕು ಎಂದರು.

"ಮಹಾರಾಷ್ಟ್ರಕ್ಕೆ ವಿಶೇಷವಾಗಿ ಪಶ್ಚಿಮ ಮಹಾರಾಷ್ಟ್ರಕ್ಕೆ ಕೇಂದ್ರ ಸರ್ಕಾರವು 50 ಮೆ.ಟನ್ ಆಮ್ಲಜನಕವನ್ನು ಸರಬರಾಜು ಮಾಡುವುದನ್ನು ಕರ್ನಾಟಕ ಸರ್ಕಾರವು ಅಡ್ಡಿಪಡಿಸಿತು. ಇದು ಕೊಲ್ಹಾಪುರ, ಸಾಂಗ್ಲಿ, ಸತಾರಾ, ಸಿಂಧುದುರ್ಗ್ ಮತ್ತು ರತ್ನಾಗಿರಿ ಜಿಲ್ಲೆಗಳಲ್ಲಿ ಆಮ್ಲಜನಕದ ಕೊರತೆಗೆ ಕಾರಣವಾಗುತ್ತದೆ" ಎಂದು ಕಾಂಗ್ರೆಸ್ ನಾಯಕ ಹೇಳಿದ್ದಾರೆ.

ಇದನ್ನೂ ಓದಿ - Coronavirus: ಭಾರತಕ್ಕೆ ಕರೋನಾದಿಂದ ಯಾವಾಗ ಸಿಗಲಿದೆ ಮುಕ್ತಿ? ವಿಜ್ಞಾನಿಗಳು ಏನಂತಾರೆ!

ಕಳೆದ ಕೆಲವು ವಾರಗಳಲ್ಲಿ ಕೊರೊನಾವೈರಸ್ ಪ್ರಕರಣಗಳು ಭಾರಿ ಪ್ರಮಾಣದಲ್ಲಿ ಹೆಚ್ಚಿರುವ ದೇಶದ ಅನೇಕ ರಾಜ್ಯಗಳಲ್ಲಿ ವೈದ್ಯಕೀಯ ಆಮ್ಲಜನಕದ ಕೊರತೆ ಉಂಟಾಗಿದೆ.COVID-19 (Coronavirus ) ಸಾಂಕ್ರಾಮಿಕ ರೋಗದ ಮೂರನೇ ಅಲೆಯನ್ನು ಎದುರಿಸಲು ಜಿಲ್ಲೆಯಲ್ಲಿ 14 ಆಮ್ಲಜನಕ ಸ್ಥಾವರಗಳನ್ನು ಸ್ಥಾಪಿಸಲಾಗುವುದು ಎಂದು ಸತೇಜ್ ಪಾಟೀಲ್ ಮಾಹಿತಿ ನೀಡಿದರು.

ಹೊಸ ಸ್ಥಾವರಗಳು 23 ಮೆ.ಟನ್ ಆಮ್ಲಜನಕವನ್ನು ಉತ್ಪಾದಿಸುತ್ತವೆ ಮತ್ತು ಪ್ರತಿದಿನ 1,800 ಸಿಲಿಂಡರ್ಗಳನ್ನು ಮರುಪೂರ್ಣಗೊಳಿಸಬಹುದು ಎಂದು ಅವರು ಹೇಳಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News