ಸುಪ್ರೀಂ ಸಿಐಜೆ ಸ್ಥಾನಕ್ಕೆ ಜಸ್ಟೀಸ್ ರಂಜನ್ ಗೊಗೋಯ್ ಹೆಸರು ಶಿಫಾರಸು

ಅಕ್ಟೋಬರ್ 3 ರಂದು ರಂಜನ್ ಗೊಗೋಯ್ ಅವರು ಸುಪ್ರೀಂ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ.   

Last Updated : Sep 1, 2018, 06:46 PM IST
ಸುಪ್ರೀಂ ಸಿಐಜೆ ಸ್ಥಾನಕ್ಕೆ ಜಸ್ಟೀಸ್ ರಂಜನ್ ಗೊಗೋಯ್ ಹೆಸರು ಶಿಫಾರಸು title=

ನವದೆಹಲಿ: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಹಿರಿಯ ನ್ಯಾಯಾಧೀಶ ರಂಜನ್ ಗೊಗೋಯ್ ಅವರ ಹೆಸರನ್ನು ಪ್ರಸ್ತುತ ಮುಖ್ಯ ನ್ಯಾಯಾಧೀಶ ದೀಪಕ್ ಮಿಶ್ರಾ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದಾರೆ.

ಅಕ್ಟೋಬರ್ 2ಕ್ಕೆ ಹಾಲಿ ಸಿಐಜೆ ದೀಪಕ್ ಮಿಶ್ರಾ ಅವರು ಸೇವೆಯಿಂದ ನಿವೃತ್ತಿ ಹೊಂದುತ್ತಿರುವ ಹಿನ್ನೆಲೆಯಲ್ಲಿ ಹಿರಿಯ ನ್ಯಾಯಾಧೀಶ ರಂಜನ್ ಗೊಗೋಯ್ ಅವರ ಹೆಸರನ್ನು ಕೇಂದ್ರಕ್ಕೆ ಶಿಫಾರಸು ಮಾಡಿದ್ದಾರೆ. ಹೀಗಾಗಿ ಅಕ್ಟೋಬರ್ 3 ರಂದು ರಂಜನ್ ಗೊಗೋಯ್ ಅವರು ಸುಪ್ರೀಂ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ. 

ರಂಜನ್ ಗೋಗೋಯ್ ಅವರು, ಗುವಾಹಟಿ ಹೈಕೋರ್ಟ್ ನ್ಯಾಯಾಧೀಶರಾಗಿ, ನಂತರ ಪಂಜಾಬ್, ಹರ್ಯಾಣ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ದಾರೆ. 
 

Trending News