J&K: ಕೊರೊನಾ ಲಸಿಕೆ ಹಾಕಿಸಿಕೊಂಡ 28 ದಿನಗಳ ಬಳಿಕ ಸೋಂಕಿಗೆ ಗುರಿಯಾದ Farooq Abdullah

ಜಮ್ಮು ಮತ್ತು ಕಾಶ್ಮೀರದ (Jammu & Kashmir) ಮಾಜಿ ಮುಖ್ಯಮಂತ್ರಿ ಫಾರುಕ್ ಅಬ್ದುಲ್ಲಾ ಕೊವಿಡ್ -19 (Farooq Abdullah Covid-19 Positive) ಸೋಂಕಿಗೆ ಗುರಿಯಾಗಿದ್ದಾರೆ. ಈ ಕುರಿತು ಫಾರೂಕ್ ಅಬ್ದುಲ್ಲಾ ಅವರ ಪುತ್ರ ಮತ್ತು ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದ್ದಾರೆ.

Written by - Nitin Tabib | Last Updated : Mar 30, 2021, 11:30 AM IST
  • ಕೊರೊನಾ ಸೋಂಕಿಗೆ ಗುರಿಯಾದ ಫಾರೂಕ್ ಅಬ್ದುಲ್ಲಾ
  • ಟ್ವೀಟ್ ಮೂಲಕ ಮಾಹಿತಿ ನೀಡಿದ ಒಮರ್ ಅಬ್ದುಲ್ಲಾ.
  • ಮೊದಲ ಡೋಸ್ ಹಾಕಿಸಿಕೊಂಡ 28 ದಿನಗಳ ಬಳಿಕ ಕಾಣಿಸಿಕೊಂಡ ಸೋಂಕು.
J&K: ಕೊರೊನಾ ಲಸಿಕೆ ಹಾಕಿಸಿಕೊಂಡ 28 ದಿನಗಳ ಬಳಿಕ ಸೋಂಕಿಗೆ ಗುರಿಯಾದ Farooq Abdullah title=
Farooq Abdullah Covid-19 Positive (File Photo)

J&K: ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರುಕ್ ಅಬ್ದುಲ್ಲಾ ಕೊವಿಡ್ -19 (Farooq Abdullah Covid-19 Positive) ಸೋಂಕಿಗೆ ಗುರಿಯಾಗಿದ್ದಾರೆ. ಈ ಕುರಿತು ಫಾರೂಕ್ ಅಬ್ದುಲ್ಲಾ (Farook Abdullah) ಅವರ ಪುತ್ರ ಮತ್ತು ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ (Omar Abdullah)ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದ್ದಾರೆ. ವಿಶೇಷ ಎಂದರೆ ಫಾರೂಕ್ ಅಬ್ದುಲ್ಲಾ ಅವರು ಕೊರೊನಾ ವ್ಯಾಕ್ಸಿನ್ (Corona Vaccine) ನ ಮೊದಲ ಪ್ರಮಾಣ ಹಾಕಿಸಿಕೊಂಡ 28 ದಿನಗಳ ಬಳಿಕ ಸೋಂಕಿಗೆ ಗುರಿಯಾಗಿದ್ದಾರೆ. ಈ ಕುರಿತು ಟ್ವೀಟ್ ನಲ್ಲಿ ಬರೆದಿರುವ ಒಮರ್ ಅಬ್ದುಲ್ಲಾ ಕಳೆದ ಕೆಲ ದಿನಗಳಿಂದ ಫಾರೂಕ್ ಅವರ ಸಂಪರ್ಕಕ್ಕೆ ಬಂದ ಎಲ್ಲರಿಗೂ ಅನಿವಾರ್ಯ ಎಚ್ಚರಿಕೆ ವಹಿಸುವಂತೆ ಕೋರಿದ್ದಾರೆ.

ಇದನ್ನೂ ಓದಿ- Sputnik-5 ಲಸಿಕೆಯ ತುರ್ತುಬಳಕೆಗೆ ಶೀಘ್ರವೇ ಭಾರತ ಅನುಮತಿ ನೀಡುವ ಸಾಧ್ಯತೆ

ಶ್ರೀನಗರದಿಂದ ಲೋಕಸಭಾ ಸಂಸದರಾಗಿರುವ ಫಾರೂಕ್ ಅಬ್ದುಲ್ಲಾ ಮಾರ್ಚ್ 2ರಂದು ಕೊರೊನಾ (Covid-19) ವ್ಯಾಕ್ಸಿನ್ ನ ಮೊದಲ ಡೋಸ್ ಪಡೆದಿದ್ದರು. ಮಾರ್ಚ್ 1 ರಿಂದ 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಕೊರೊನಾ ವ್ಯಾಕ್ಸಿನೆಶನ್ ಅಭಿಯಾನ ಆರಂಭಗೊಂಡಿತ್ತು. ಈ ವೇಳೆ ಶೇರ್-ಎ-ಕಾಶ್ಮೀರ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಗೆ ಭೇಟಿ ನೀಡಿ ಕೊರೊನಾ (Coronavirus) ಲಸಿಕೆಯನ್ನು ಹಾಕಿಸಿಕೊಂಡಿದ್ದರು. ಕಳೆದ ಮಂಗಳವಾರ 85 ವರ್ಷ ವಯಸ್ಸಿನ ಫಾರೂಕ್ ಅಬ್ದುಲ್ಲಾ ಜಮ್ಮು-ಕಾಶ್ಮೀರದ ನ್ಯಾಷನಲ್ ಪ್ಯಾಂಥರ್ಸ್ ಪಾರ್ಟಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಮಾತನಾಡಿದ್ದ ಅವರು ಆರ್ಟಿಕಲ್ 370ನ್ನು ತೆಗೆದುಹಾಕುವ ಮಾತನ್ನು ಆಡಿದ್ದರು. ಪಕ್ಷ ತನ್ನ 40ನೆ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಈ ಕಾರ್ಯಕ್ರಮ ಆಯೋಜಿಸಿತ್ತು.

ಇದನ್ನೂ ಓದಿ- Coronavirus: ಕರೋನಾದಿಂದ ರಕ್ಷಿಸಬಹುದಾದ ಹ್ಯಾಂಡ್ ಸ್ಯಾನಿಟೈಜರ್‌ಗಳಿಂದ ಕ್ಯಾನ್ಸರ್ ಅಪಾಯ

ಆರ್ಟಿಕಲ್ 370ನ್ನು ತೆಗೆದುಹಾಕುವ ಕುರಿತು ಮಾತನಾಡಿದ್ದ ಅವರು, ಇದರಿಂದ ಜಮ್ಮು ಮತ್ತು ಕಾಶ್ಮೀರದ ಜನರು ತಮ್ಮ ಗೌರವವನ್ನು ಕಳೆದುಕೊಂಡಿದ್ದಾರೆ ಮತ್ತು ಇದು ನಮ್ಮ ಗೌರವದ ಮೇಲೆ ನೇರ ದಾಳಿಯಾಗಿದೆ. ನಾವು ನಮ್ಮ ಭೂಮಿಯನ್ನು ಕಳೆದುಕೊಂಡಿದ್ದೇವೆ ಮತ್ತು ನಮ್ಮ ಮಕ್ಕಳು ನೌಕರಿ ಇಲ್ಲದೆ ಉಳಿಯಬೇಕಾಗಿದೆ. ಒಂದು ವೇಳೆ ನಮ್ಮ ರಾಜ್ಯಕ್ಕೆ ಹೊರಗಿನ ಜನರು ಬಂದರೆ, ಸ್ಥಳೀಯ ಯುವಕರಿಗೆ ಹರಿಯಾಣಾ, ಹಿಮಾಚಲ ಪ್ರದೇಶ ಹಾಗೂ ಪಂಜಾಬ್ ಗಳಂತಹ ರಾಜ್ಯಗಳಲ್ಲಿ ನೌಕರಿ ಸಿಗಲಿದೆಯೇ? ಎಂದು ಪ್ರಶ್ನಿಸಿದ್ದರು. ಫಾರೂಕ್ ಅಬ್ದುಲ್ಲಾ ತಮ್ಮ ಫಿಟ್ನೆಸ್ ಕುರಿತು ಕೂಡ ಚರ್ಚೆಯಲ್ಲಿರುತ್ತಾರೆ. ಇತೀಚೆಗಷ್ಟೇ ಅವರು ಮದುವೆ ಸಮಾರಂಭವೊಂದರಲ್ಲಿ ಡಾನ್ಸ್ ಮಾಡಿರುವ ವಿಡಿಯೋ  ಭಾರಿ ವೈರಲ್ ಆಗಿತ್ತು. ಅವರ ಈ ವಿಡಿಯೋಗೆ ಜನರು ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಜೊತೆಗೆ ಈ ಇಳಿವಯಸ್ಸಿನಲ್ಲಿ ಅವರ ಮಸ್ತಿ ಮೂಡ್ ಗೆ ಜನ ಬೆರಗಾಗಿದ್ದರು.

ಇದನ್ನೂ ಓದಿ- Coronavirus New Double Mutant Wave In India: ಭಾರತದಲ್ಲಿ ಡಬಲ್ ರೂಪಾಂತರಿ ಕೊರೊನಾ ಅಲೆ, ಎಷ್ಟು ಅಪಾಯಕಾರಿ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News