ಜೆಜೆಪಿ ಮುಖ್ಯಸ್ಥ ದುಶ್ಯಂತ್ ಚೌತಾಲಾ ತಂದೆಗೆ 14 ದಿನಗಳ ಪೆರೋಲ್ ಮಂಜೂರು

ಜನ್ನಾಯಕ್ ಜಂತ ಪಕ್ಷದ (ಜೆಜೆಪಿ) ಮುಖಂಡ ಅಜಯ್ ಚೌತಲಾ ಅವರನ್ನು 14 ದಿನಗಳ ಪೆರೋಲ್ ಮಂಜೂರು ಮಾಡಿದ ನಂತರ ಅವರನ್ನು ಭಾನುವಾರ ತಿಹಾರ್ ಜೈಲಿನಿಂದ ಬಿಡುಗಡೆ ಮಾಡಲಾಯಿತು. 

Last Updated : Oct 27, 2019, 03:37 PM IST
ಜೆಜೆಪಿ ಮುಖ್ಯಸ್ಥ ದುಶ್ಯಂತ್ ಚೌತಾಲಾ ತಂದೆಗೆ 14 ದಿನಗಳ ಪೆರೋಲ್ ಮಂಜೂರು  title=
ANI Photo

ನವದೆಹಲಿ: ಜನ್ನಾಯಕ್ ಜಂತ ಪಕ್ಷದ (ಜೆಜೆಪಿ) ಮುಖಂಡ ಅಜಯ್ ಚೌತಲಾ ಅವರನ್ನು 14 ದಿನಗಳ ಪೆರೋಲ್ ಮಂಜೂರು ಮಾಡಿದ ನಂತರ ಅವರನ್ನು ಭಾನುವಾರ ತಿಹಾರ್ ಜೈಲಿನಿಂದ ಬಿಡುಗಡೆ ಮಾಡಲಾಯಿತು. 

'ದುಶ್ಯಂತ್ ಅವರು ಪಕ್ಷದ ಕಾರ್ಯಕರ್ತರೊಂದಿಗೆ ಕೇವಲ 11 ತಿಂಗಳಲ್ಲಿ ಸಂಘಟನೆಯನ್ನು ಸ್ಥಾಪಿಸಿದ್ದಾರೆ. ಒಬ್ಬ ಮಗನನ್ನು ತನ್ನ ತಂದೆಯ ಹೆಸರಿನಿಂದ ಮಾತ್ರ ಕರೆಯಲಾಗುತ್ತದೆ. ಪಕ್ಷದ ಕಾರ್ಯಕರ್ತರು ಕೈಗೊಂಡ ಪ್ರಯತ್ನಗಳು ಇಂದು ಶುಭ ಸಂದರ್ಭದಲ್ಲಿ ಪ್ರವರ್ಧಮಾನಕ್ಕೆ ಬಂದಿವೆ' ಎಂದು ಚೌತಲಾ ಹೇಳಿದರು.

'ದುಶ್ಯಂತ್ ನನ್ನ ಸಲಹೆಯನ್ನು ತೆಗೆದುಕೊಳ್ಳುವ ಮೊದಲು ಯಾವುದೇ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುವುದಿಲ್ಲ ಮತ್ತು ಮೈತ್ರಿ ಸರ್ಕಾರ ರಚಿಸುವ ಮೊದಲು ಅವರು ನನ್ನನ್ನು ಭೇಟಿಯಾದಾಗ, ಅದಕ್ಕಾಗಿ ನಾನು ನನ್ನ ಒಪ್ಪಿಗೆ ನೀಡಿದ್ದೇನೆ' ಎಂದು ಅವರು ಹೇಳಿದರು. ದುಶ್ಯಂತ್ ಶುಕ್ರವಾರದಂದು ತಮ್ಮ ತಂದೆ ಅಜಯ್ ಚೌತಲಾ ಅವರನ್ನು ತಿಹಾರ್ ಜೈಲು ಸಂಕೀರ್ಣದಲ್ಲಿ ಭೇಟಿಯಾಗಿದ್ದರು.

90 ಸದಸ್ಯರ ಹರಿಯಾಣ ವಿಧಾನಸಭೆಯಲ್ಲಿ 10 ಸ್ಥಾನಗಳನ್ನು ಗೆದ್ದ ದುಶ್ಯಂತ್ ಅವರ ಜೆಜೆಪಿಯೊಂದಿಗೆ ಬಿಜೆಪಿ ಶುಕ್ರವಾರ ಹರಿಯಾಣದಲ್ಲಿ ಮೈತ್ರಿ ಮಾಡಿಕೊಂಡಿತ್ತು. ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮತ್ತು ದುಶ್ಯಂತ್ ಚೌತಲಾ ನಡುವಿನ ಸಭೆಯಲ್ಲಿ ಈ ಒಪ್ಪಂದಕ್ಕೆ ಮೊಹರು ಹಾಕಲಾಗಿತ್ತು. ಉಪಮುಖ್ಯಮಂತ್ರಿ ಹುದ್ದೆಯನ್ನು ನೀಡುವಂತೆ ಜೆಜೆಪಿ ನೀಡಿದ ಪ್ರಸ್ತಾಪವನ್ನು ಷಾ ಹಿಂಜರಿಕೆಯಿಲ್ಲದೆ ಒಪ್ಪಿಕೊಂಡಿದ್ದರು.
 

Trending News