ವಾರದಲ್ಲಿ 3-3 ದಿನಗಳ ಕಾಲ ಪತ್ನಿ-ಪ್ರಿಯತಮೆಯರಲ್ಲಿ ಹಂಚಿಕೆಯಾದ ಪತಿ ! ಪ್ರಕರಣ ಏನು?

ಜಾರ್ಖಂಡ್ (Jharkhand) ರಾಜಧಾನಿಯಾದ ರಾಂಚಿಯಲ್ಲಿ (Ranchi)ಬಾಲಿವುಡ್ ನಟ ಅನಿಲ್ ಕಪೂರ್ ಅಭಿನಯದ 'ಘರ್ವಾಲಿ-ಬಾಹರ್ವಾಲೀ' ಚಿತ್ರದ ಕಥೆ  ಯುವಕನೊಬ್ಬನ ರಿಯಲ್ ಲೈಫ್ ನಲ್ಲಿ ಕಾಣಿಸಿಕೊಂಡಿದೆ. 

Written by - Nitin Tabib | Last Updated : Feb 16, 2021, 06:38 PM IST
  • ಝಾರ್ಖಂಡ್ ನ ರಾಂಚಿಯಲ್ಲಿ ಬೆಳಕಿಗೆ ಬಂದ 'ಘರ್ವಾಲಿ ಬಾಹರ್ವಾಲಿ' ಪ್ರಕರಣ.
  • ಪತ್ನಿ-ಪ್ರಿಯತಮೆಯಲ್ಲಿ ವಾರದ ಮೂರು-ಮೂರು ದಿನಗಳ ಕಾಲ ಹಂಚಿಕೆಯಾದ ಪತಿ.
  • ಒಂದು ದಿನ ಸ್ವತಂತ್ರವಾಗಿ ತನ್ನಿಷ್ಟದಂತೆ ಬದುಕಲು ದೊರೆಯಿತು ಅನುಮತಿ
ವಾರದಲ್ಲಿ 3-3 ದಿನಗಳ ಕಾಲ ಪತ್ನಿ-ಪ್ರಿಯತಮೆಯರಲ್ಲಿ ಹಂಚಿಕೆಯಾದ ಪತಿ ! ಪ್ರಕರಣ ಏನು? title=
Gharwali-Baharwali Case (Representational Image)

ರಾಂಚಿ - ಜಾರ್ಖಂಡ್ (Jharkhand) ರಾಜಧಾನಿಯಾದ ರಾಂಚಿಯಲ್ಲಿ (Ranchi)ಬಾಲಿವುಡ್ ನಟ ಅನಿಲ್ ಕಪೂರ್ ಅಭಿನಯದ 'ಘರ್ವಾಲಿ-ಬಾಹರ್ವಾಲೀ' ಚಿತ್ರದ ಕಥೆ  ಯುವಕನೊಬ್ಬನ ರಿಯಲ್ ಲೈಫ್ ನಲ್ಲಿ ಕಾಣಿಸಿಕೊಂಡಿದೆ. ಒಪ್ಪಂದದ ಪ್ರಕಾರ, ಗಂಡನಿಗೆ (Husband) ವಾರದಲ್ಲಿ ಮೂರು ದಿನ ಹೆಂಡತಿಯೊಂದಿಗೆ (Wife), ನಂತರ ಮೂರು ದಿನಗಳ ಕಾಲ ತನ್ನ ಪ್ರಿಯತಮೆಯೊಂದಿಗೆ (Girlfriend) ಇರಲು ಆದೇಶಿಸಲಾಗಿದೆ. ಯುವಕನಿಗೆ ವಾರದಲ್ಲಿ ಒಂದು ದಿನ ಸ್ವತಂತ್ರವಾಗಿ ತನ್ನಿಷ್ಟದಂತೆ ಬದುಕಲು ಅವಕಾಶ ಕಲ್ಪಿಸಲಾಗಿದೆ. ಆದರೆ ಇದು ಹೆಚ್ಚು ಕಾಲ ಉಳಿಯಲಿಲ್ಲ.

ಮೂಲಗಳಿಂದ ದೊರೆತ ಮಾಹಿತಿ ಪ್ರಕಾರ ಮೊದಲೇ ಮದುವೆಯಾಗಿದ್ದ ಯುವಕನೊಬ್ಬ ಯುವತಿಯೋರ್ವಳನ್ನು ತನ್ನ ಪ್ರೇಮಜಾಲ ಬೀಸಿ ಎರಡನೇ ಮದುವೆಯಾಗಿದ್ದ. ಆದರೆ, ಆಗಲೇ ಈ ಪ್ರಕರಣ ಪೋಲೀಸ್ ಠಾಣೆ ಮೆಟ್ಟಿಲೇರಿದೆ. ಈ ಪ್ರಕರಣ ಪೋಲೀಸರ ಬಳಿ ತಲುಪಿದಾಗ ಅವರಿಬ್ಬರ ನಡುವೆ ರಾಜಿ ಮಾಡಿಸುವ ಹೊರತು ಬೇರೆ ದಾರಿಯೇ ಇರಲಿಲ್ಲ. ಅವರು ಇಬ್ಬರು ಮಡದಿಯರ ನಡುವೆ ಪತಿಯನ್ನು ಹಂಚಿಕೆ ಮಾಡಿದ್ದಾರೆ. 

ಪತಿಯನ್ನು ಇಬ್ಬರ ಪತ್ನಿಯರ ನಡುವೆ ಹಂಚಿಕೆ ಮಾಡಿ ಪೋಲೀಸರೇನೋ ತಮ್ಮ ಕೈತೊಳೆದುಕೊಂಡರು. ಆದರೆ, ಇದು ಹೆಚ್ಚು ಕಾಲ ಮುಂದುವರೆಯಲಿಲ್ಲ ಹಾಗೂ ಪ್ರಕರಣ ಕೋರ್ಟ್ ಮೆಟ್ಟಿಲೇರಿತು. ಇದೀಗ ನ್ಯಾಯಾಲಯ ಯವಕನ ವಿರುದ್ಧ ವಾರೆಂಟ್ ಹೊರಡಿಸಿದೆ. ಬಳಿಕ ಇಬ್ಬರು ಪತ್ನಿಯರು ಆತನನ್ನು ಉಳಿಸಲು ಪ್ರಯತ್ನಿಸುತ್ತಿದ್ದಾರೆ. ಈ ಪ್ರಕರಣ ರಾಂಚಿಯ ಕೆಕರ್ ತಿರಿಲ್ ರೋಡ್ ನದ್ದಾಗಿದೆ. ಇಲ್ಲಿನ ರಹವಾಸಿಯಾಗಿರುವ ರಾಜೇಶ್ ಮಹತೋ ಗೆ ಪೊಲೀಸರು ಜನವರಿ 15, 2020 ರಂದು ವಶಕ್ಕೆ ಪಡೆದು ಇಬ್ಬರು ಪತ್ನಿಯರ ಜೊತೆಗೆ ಸಮನಾಗಿ ಕಾಲ ಕಳೆಯಲು ಸೂಚಿಸಿದ್ದಾರೆ. ಈ ಪ್ರಕರಣ ಕೋರ್ಟ್ ಮೆಟ್ಟಿಲೇರುತ್ತಿದ್ದಂತೆ ಎಲ್ಲವೂ ಬದಲಾಗಿದೆ.

ಇದನ್ನೂ ಓದಿ- 10ರ ಹರೆಯದ ಪೋರನಿಂದ ಗರ್ಭಿಣಿಯಾದ 13 ವರ್ಷದ ಬಾಲಕಿ ...!

ರಾಜೇಶ್ ಎರಡನೇ ಪತ್ನಿ, ಮದುವೆಯ ಆಮೀಷವೊಡ್ಡಿ ತಮ್ಮಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣ ಆತನ ವಿರುದ್ಧ ದಾಖಲಿಸಿದ್ದಾಳೆ. ಇದೆ ಕಾರಣದಿಂದ ಇದೀಗ ಈ ಪ್ರಕರಣ ನ್ಯಾಯಾಲಯದ ಕದ ತಟ್ಟಿದೆ. ನ್ಯಾಯಾಲಯ ಆರೋಪಿ ಮಹತೋನ ಬಂಧನಕ್ಕಾಗಿ ವಾರಂಟ್ ಜಾರಿಗೊಳಿಸಿದೆ. ಪ್ರಸ್ತುತ ಪೊಲೀಸರು ಆತನನ್ನು ಬಂಧಿಸಲು ಶೋಧಕಾರ್ಯದಲ್ಲಿ ತೊಡಗಿದ್ದಾರೆ. ರಾಜೇಶ್ ತನ್ನ ಮೊದಲ ಪತ್ನಿ ಹಾಗು ಮಕ್ಕಳನ್ನು ತೊರೆದು ಎರಡನೇ ಪತ್ನಿಯೊಂದಿಗೆ ವಾಸಿಸಲು ತೆರಳಿದ್ದಾನೆ ಎಂದು ಪೊಲೀಸರು ಆರೋಪಿಸಿದ್ದಾರೆ. ಈ ಕುರಿತು ಆತನ ಮೊದಲ ಪತ್ನಿ ಪ್ರಕರಣ ಕೂಡ ದಾಖಲಿಸಿದ್ದಾಳೆ. 

ಇದನ್ನೂ ಓದಿ-ತನಗಿಂತ 23 ವರ್ಷ ಕಿರಿಯ ಗರ್ಲ್ ಫ್ರೆಂಡ್ ಜೊತೆ ಕದ್ದುಮುಚ್ಚಿ ಡೇಟಿಂಗ್ ಗೆ ಮುಂದಾದ ಖ್ಯಾತ ನಟ...!

ಇನ್ನೊಂದೆಡೆ ರಾಜೇಶ್ ಪ್ರಿಯತಮೆಯಾಗಿರುವ ಮಹಿಳೆಯ ಕುಟುಂಬ ಸದಸ್ಯರೂ ಕೂಡ ತಮ್ಮ ಮಗಳನ್ನು ರಾಜೇಶ್ ಅಪಹರಿಸಿಕೊಂಡು ಹೋಗಿದ್ದಾನೆ ಎಂಬ ಪ್ರಕರಣ ದಾಖಲಿಸಿದ್ದಾರೆ. ಹೀಗಾಗಿ ರಾಜೇಶ್ಗೆ  ಹೆಚ್ಚು ಕಾಲ ಪೊಲೀಸರಿಂದ ಕಣ್ತಪ್ಪಿಸಿ ಉಳಿಯಲಾಗಿಲ್ಲ ಮತ್ತು ಕೊನೆಗೆ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಆದರೆ, ಅಷ್ಟೊತ್ತಿಗೆ ರಾಜೇಶ್ ತನ್ನ ಪ್ರಿಯತೆಮೆಯನ್ನು(Girlfriend) ವಿವಾಹ ಮಾಡಿಕೊಂಡಿದ್ದ. ಆತನನ್ನು ಕಚೇರಿಗೆ ಕರೆತಂದ ಬಳಿಕ, ಆತನ ಇಬ್ಬರು ಮಡದಿಯರ ಮಧ್ಯೆ ಜಗಳ ಆರಂಭವಾಗಿದೆ. ಪ್ರಕರಣದ ಗಂಭೀರತೆಯನ್ನು ಅರಿತ ಪೊಲೀಸರು ಇಬ್ಬರ ನಡುವೆ ಒಪ್ಪಂದ ಏರ್ಪಡಿಸಿದ್ದಾರೆ ಹಾಗೂ ಲಿಖಿತ ರೂಪದಲ್ಲಿ ಪತಿಯನ್ನು ಇಬ್ಬರು ಮಡದಿಯರಲ್ಲಿ ಸರಿಯಾಗಿ ಹಂಚಿಕೆ ಮಾಡಿದ್ದಾರೆ (Girlfriend And Wife Devided Husband). ಈ ಒಪ್ಪಂದದ ಪ್ರತಿಯನ್ನು ಪೊಲೀಸರು ಇಬ್ಬರು ಮಡದಿಯರಿಗೆ ಹಸ್ತಾಂತರಿಸಿದ್ದಾರೆ.

ಇದನ್ನೂ ಓದಿ- ಗೆಳತಿ ಮದುವೆಗೆ ನಿರಾಕರಿಸಿದಕ್ಕೆ 5 ಲಕ್ಷ ರೂ.ಗೆ ಬೆಂಕಿ ಹಚ್ಚಿದ ಪ್ರೇಮಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News